ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ಆಗಸ್ಟ್ 27ರ ತನಕ ಭಾರಿ ಮಳೆ ಸಾಧ್ಯತೆ!
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಆಗಸ್ಟ್ 27ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ,ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.
ಮಂಗಳೂರು ವಿಮಾನ ನಿಲ್ದಾಣ, ಕಾರ್ಕಳ, ಮಂಕಿ, ಮಾಣಿ, ಉಡುಪಿ, ಉಪ್ಪಿನಂಗಡಿ, ಕೋಟ, ಕುಂದಾಪುರ, ಗೇರುಸೊಪ್ಪ, ಪುತ್ತೂರು, ಹೊನ್ನಾವರ, ಕದ್ರಾ, ಸಿದ್ದಾಪುರ, ಮಂಗಳೂರು, ಶೃಂಗೇರಿ, ಕೊಟ್ಟಿಗೆಹಾರ, ರಾಯಲ್ಪಾಡು, ಜಯಪುರ, ಕಳಸ, ಸುಳ್ಯ, ಬಸವರಾಯನ ದುರ್ಗ, ಕೊಲ್ಲೂರು, ಭಾಗಮಂಡಲ, ಪೊನ್ನಂಪೇಟೆ, ನಾಓಕ್ಲು, ಕಿರವತ್ತಿ, ಶಿರಾಲಿ, ಮಂಠಾಳ, ಲೋಂಡಾ, ಭಾಗಮಂಡಲ, ಪೊನ್ನಂಪೇಟೆ, ಸೋಮವಾರಪೇಟೆ, ಬಾಳೆಹೊನ್ನೂರು, ಹುಣಸೂರು, ಹುಂಚದಕಟ್ಟೆ, ಹಾಸನ, ಬೇಲೂರು, ಯಲ್ಲಾಪುರ, ಹಳಿಯಾಳ, ಅಂಕೋಲಾ, ಕುಮಟಾ, ಗಂಗಾವತಿ, ಚಿಂಚೋಳಿ, ಸಿಂದಗಿ, ಬೇವೂರು, ಅಣ್ಣಿಗೆರೆ, ಹುಮನಾಬಾದ್, ತುಮಕೂರು, ಕೊಪ್ಪ, ಕಮ್ಮರಡಿ, ಮಾಲೂರು, ಟಿ ನರಸೀಪುರ, ಚಿಕ್ಕನಹಳ್ಳಿ, ಸಂತೆಬೆನ್ನೂರು, ತಾಳಗುಪ್ಪ, ಆನವಟ್ಟಿ, ಬೆಂಗಳೂರು ಎಚ್ಎಎಲ್, ಬೆಂಗಳೂರು ನಗರದಲ್ಲಿ ಮಳೆಯಾಗಿದೆ.
ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ,ಕ್ಯಾಸಲ್ರಾಕ್, ಕಾರ್ಕಳ, ಮಂಕಿ, ಮಾಣಿ, ಉಡುಪಿಯಲ್ಲಿ ಭಾರಿ ಮಳೆಯಾಗಿದೆ. ನೈಋತ್ಯ ಮುಂಗಾರು ಕರಾವಳಿಯಲ್ಲಿ ಚುರುಕಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಗುಡಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಎಚ್ಎಎಲ್ನಲ್ಲಿ 29.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ತುಂಬಿ ಹರಿಯುತ್ತಿರುವ ಡ್ಯಾಂನಲ್ಲಿ ಸಿಲುಕಿದ 10 ಮಂದಿ – ರಕ್ಷಣೆಗೆ ಹರಸಾಹಸ
ಶಿಮ್ಲಾ: ತುಂಬಿ ಹರಿಯುತ್ತಿರುವ ಡ್ಯಾಂ ನಡುವೆ ಐವರು ಅರಣ್ಯ ಇಲಾಖೆ ಸಿಬ್ಬಂದಿ ಸೇರಿ 10 ಜನ ಸಿಲುಕಿಕೊಂಡಿರುವ ಘಟನೆ ಹಿಮಾಚಲ ಪ್ರದೇಶದ (Himachal Pradesh) ಮಂಡಿಯ ಕೋಲ್ ಡ್ಯಾಮ್ ಹೈಡಲ್ ಪ್ರಾಜೆಕ್ಟ್ನಲ್ಲಿ ನಡೆದಿದೆ.
ಭಾರೀ ಮಳೆಯಿಂದ (Rain) ಉತ್ತರಖಂಡ ಹಾಗೂ ಹಿಮಾಚಲ ಪ್ರದೇಶ ತತ್ತರಿಸಿದೆ. ಇದರಿಂದ ನದಿ ಪಾತ್ರಗಳಿಗೆ ಹಾಗೂ ಆಣೆಕಟ್ಟಿನ ಸಮೀಪ ಜನರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ಈ ಹತ್ತು ಜನ ಹೇಗೆ ಅಲ್ಲಿ ಸಿಲುಕಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಅವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಅರಿಂದಮ್ ಚೌಧರಿ ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ಮತ್ತು ನಿವಾಸಿಗಳ ಸಹಾಯದಿಂದ ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಅಲ್ಲದೇ ಪರಿಣಿತ ಈಜುಗಾರರನ್ನು ಕರೆಸಲಾಗಿದೆ. ಘಟನೆಯ ಬ್ಗಗೆ ಸಿಲುಕಿದ್ದವರ ರಕ್ಷಣೆ ಬಳಿಕ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ಯಾಂನಲ್ಲಿ ಸಿಲುಕಿರುವ ಐವರು ಅರಣ್ಯ ಇಲಾಖೆಯ ನೌಕರರನ್ನು ಭಾದೂರ್ ಸಿಂಗ್, ಭೂಪೇಶ್ ಠಾಕೂರ್, ರೂಪ್ ಸಿಂಗ್, ಬಾಬು ರಾಮ್ ಮತ್ತು ಅಂಗದ್ ಕುಮಾರ್ ಎಂದು ಗುರುತಿಸಲಾಗಿದೆ. ಇತರ ಐವರು ಸ್ಥಳೀಯರನ್ನು ನೈನ್ ಸಿಂಗ್, ಡಾಗು ರಾಮ್, ಹೇಮ್ ರಾಜ್, ಭೂಧಿ ಸಿಂಗ್ ಮತ್ತು ಧಮೇರ್ಂದ್ರ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.