ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲೇ ಕಳ್ಳನ ಕೈಚಳಕ; ಶಾಸಕರ ಆಪ್ತ ಸಹಾಯಕನ ಜೇಬಿನಿಂದ ಹಣ ಕದ್ದು ಪರಾರಿ!
ರಾಮನಗರ,ಅ.06: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಕಾರ್ಯಕ್ರಮದಲ್ಲಿ ಕಳ್ಳ ಕೈಚಳಕ ತೋರಿಸಿದ ಘಟನೆ ಮಾಗಡಿ(Magadi)ತಾಲೂಕಿನ ಕುದೂರಿನಲ್ಲಿ ನಡೆದಿದೆ. ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಆಪ್ತ ಸಹಾಯಕನ ಜೇಬಿನಿಂದ ಬರೊಬ್ಬರಿ 50 ಸಾವಿರ ಹಣವನ್ನು ಕಳ್ಳತನ (Theft)ಮಾಡಲಾಗಿದೆ. ಇದೀಗ ಸುತ್ತಮುತ್ತಲಿನ ಸ್ಥಳದಲ್ಲಿ ಕಳ್ಳನ ಪತ್ತೆಗಾಗಿ ಕುದೂರು ಪೊಲೀಸರು ಬಲೆಬೀಸಿದ್ದಾರೆ.
ಇನ್ನು ಇದೇ ಅಕ್ಟೋಬರ್ 01 ರಂದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಅಸಮಧಾನ ವ್ಯಕ್ತಪಡಿಸಿದ್ದ ಜೆಡಿಎಸ್ ಶಾಸಕರನ್ನು ಕರೆಯಿಸಿ ರಾಮನಗರ ಬಿಡದಿ ತೋಟದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಕಾರ್ಯಕರ್ತನ ಜೇಬಿನಲ್ಲಿದ್ದ 40 ಸಾವಿರ ರೂಪಾಯಿಯನ್ನು ಕಳ್ಳತನ ಮಾಡಿರುವಂತಹ ಘಟನೆ ನಡೆದಿತ್ತು.
ಹೌದು, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಾತನಾಡಿಸುವ ವೇಳೆ ಕುಂದಾಪುದ ಜೆಡಿಎಸ್ ಕಾರ್ಯಕರ್ತನ ಜೇಬಿಗೆ ಕೈ ಹಾಕಿ ಬರೊಬ್ಬರಿ 40 ಸಾವಿರ ರೂಪಾಯಿಯನ್ನು ಕಳ್ಳತನ ಮಾಡಲಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಕಾರ್ಯಕರ್ತರು, ಕಳ್ಳನನ್ನ ಹಿಡಿದಿದ್ದರು. ಕೂಡಲೇ ಕುಮಾರಸ್ವಾಮಿ ಗನ್ ಮ್ಯಾನ್ಗಳಿಂದ ಖದೀಮನಿಗೆ ಗೂಸಾ ಕೊಡಲಾಗಿತ್ತು. ಇದೀಗ ಇಂತಹ ಘಟನೆ ನಡೆದಿದೆ.
ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀಟ್ ಓಪನ್: ಸಚಿವ ಭೈರತಿ ಸುರೇಶ್
ಬೆಳಗಾವಿ, ಅಕ್ಟೋಬರ್ 06: ರಾಜ್ಯದಲ್ಲಿ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಇಂದಿರಾ ಕ್ಯಾಂಟೀನ್ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಎಂದು ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಸುರೇಶ್ (Byrathi Suresh) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ಗಾಗಿ ಇಲಾಖೆಗೆ 240 ಕೋಟಿ ರೂ. ಹಣ ನೀಡಿದ್ದಾರೆ. ಬೆಳಗಾವಿಯಲ್ಲೂ ಕೂಡ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು. ಹೊಸದಾಗಿ ಇಂದಿರಾ ಕ್ಯಾಂಟೀನ್ಗಳ ಪುನಶ್ಚೇತನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಬೇಕಂತಲೇ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಕೊಡದೆ ನಿರ್ವಹಣೆ ಮಾಡದೆ ಹಾಳು ಮಾಡಿದ್ದರು. ಜನರಿಗೆ ಯಾವ ಊಟ ಇಷ್ಟ ಆಗುತ್ತೆ ಅದನ್ನ ಕೊಡುವುದು ನಮ್ಮ ಉದ್ದೇಶವಾಗಿದೆ. ಈಗಾಗಲೇ ದರ 5 ರೂ ಹೆಚ್ಚಿಗೆ ಮಾಡಿದ್ದು ಅದನ್ನ ಸರ್ಕಾರ ಭರಿಸುತ್ತದೆ. ಜನರಿಗೆ ಹೆಚ್ಚಿಗೆ ಒಂದು ರೂಪಾಯಿ ಕೊಡಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.