ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ;ಪಥ ಬದಲಿಸಿದ್ರೆ ಭಾರತದಲ್ಲೂ ಭಾರಿ ಮಳೆ ಸಾಧ್ಯತೆ!

Twitter
Facebook
LinkedIn
WhatsApp
ಅರಬ್ಬಿ ಸಮುದ್ರದಲ್ಲಿ ‘ತೇಜ್’ ಚಂಡಮಾರುತ ;ಪಥ ಬದಲಿಸಿದ್ರೆ ಭಾರತದಲ್ಲೂ ಭಾರಿ ಮಳೆ ಸಾಧ್ಯತೆ!

ಮುಂಬೈ : ಅರಬ್ಬಿ ಸಮುದ್ರದ ನಡು ಮಧ್ಯ ಭಾಗದಲ್ಲಿ ವಾಯು ಭಾರ ಕುಸಿತ ಉಂಟಾಗಿರುವ ಪರಿಣಾಮ ಚಂಡಮಾರುತ ಸೃಷ್ಟಿಯಾಗಿದೆ. (Tej cyclone) ‘ತೇಜ್’ ಹೆಸರಿನ ಈ ಚಂಡ ಮಾರುತ ಆರಂಭಿಕ ಮಾಹಿತಿಗಳ ಪ್ರಕಾರ ಯೆಮನ್ ಹಾಗೂ ಒಮನ್ ದೇಶಗಳ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.

ಒಂದು ವೇಳೆ ವಿರುದ್ದ ದಿಕ್ಕಿನಲ್ಲಿ ಸಾಗಿದರೆ ಮುಂಬೈ, ಗುಜರಾತ್ ಸೇರಿದಂತೆ ಪಶ್ಚಿಮ ಕರಾವಳಿಗೆ ಭಾರಿ ಹಾನಿಯುಂಟು ಮಾಡುವ ಬಗ್ಗೆ ವಿಶ್ಲೇಶಿಸಲಾಗಿದೆ. ಇಂದು ಶನಿವಾರ ಚಂಡಮಾರುತದ ರೂಪ ತಾಳಿ ತೀವ್ರಗೊಳ್ಳುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಈ ವರ್ಷ ಅರಬ್ಬಿ ಸಮುದ್ರದಲ್ಲಿ ಇದು 2ನೇ ಚಂಡಮಾರುತವಾಗಿದೆ. ಸದ್ಯ ಒಮಾನ್ ಮತ್ತು ಪಕ್ಕದ ಯೆಮೆನ್‌ನ ದಕ್ಷಿಣ ಕರಾವಳಿಯ ಕಡೆಗೆ ಇದು ಚಲಿಸುತ್ತದೆ. 

ಆದರೆ ಭಾರತದ ಗುಜರಾತ್‌ ಕರಾವಳಿಯಲ್ಲಿ ಸಾಕಷ್ಟು ವಿನಾಶ ಉಂಟು ಮಾಡಿದ ಬಿಪೊರ್‌ಜೊಯ್‌ ಚಂಡಮಾರುತದ ರೀತಿ ಈ ಚಂಡಮಾರುತ ಕೂಡ ಪಥ ಬದಲಿಸಿ ಸಾಗಬಹುದು. ಆಗ ಇದು ಭಾರತದ ಕರಾವಳಿಗೂ ಅಪಾಯವಾಗಬಲ್ಲದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಳೆದ ಜೂನ್‌ನಲ್ಲೂ ಇದೇ ಸನ್ನಿವೇಶ ನಿರ್ಮಾಣವಾಗಿತ್ತು. ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದ ಕಾರಣ ಬಿಪರ್‌ಜಾಯ್ ಚಂಡ ಮಾರುತ ಸೃಷ್ಟಿಯಾಗಿತ್ತು. ಈ ಚಂಡ ಮಾರುತ ಅರಬ್ಬಿ ಸಮುದ್ರದ ಉತ್ತರ ಹಾಗೂ ವಾಯುವ್ಯ ದಿಕ್ಕಿನತ್ತ ಸಾಗಲಿದೆ ಎಂದು ಅಂದಾಜಿಸಲಾಗಿತ್ತು. 

ಆದರೆ ಚಂಡ ಮಾರುತದ ದಿಕ್ಕು ಬದಲಾವಣೆ ಕಂಡಿತ್ತು. ಗುಜರಾತ್ ರಾಜ್ಯದ ಮಾದ್ವಿ ಹಾಗೂ ಪಾಕಿಸ್ತಾನದ ಕರಾಚಿ ನಡುವೆ ಈ ಚಂಡಮಾರುತ ಅಪ್ಪಳಿಸಿತ್ತು. ಹೀಗಾಗಿ, ಪಾಕಿಸ್ತಾನದ ಕರಾಚಿ, ಭಾರತದ ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿ ಭಾರೀ ಮಳೆ ಆಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ