ಬುಧವಾರ, ಫೆಬ್ರವರಿ 21, 2024
ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!-ಮಕ್ಕಳಿಗೆ ಮೊಟ್ಟೆ ಮತ್ತು ಹಾಲಿನ ಜೊತೆ ವಾರದಲ್ಲಿ 3 ದಿನ ರಾಗಿಮಾಲ್ಟ್: ಮಧು ಬಂಗಾರಪ್ಪ..!-ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನ..!-ದೆಹಲಿ ಗಡಿಯಲ್ಲಿ 14 ಸಾವಿರ ರೈತರು ಮತ್ತೆ ಪ್ರತಿಭಟನೆ..!-ಆಟೋಗೆ ಟ್ರಕ್‌ ಡಿಕ್ಕಿಯಾಗಿ ಅಪ್ಪಚ್ಚಿ; ಸ್ಥಳದಲ್ಲೇ 9 ಮಂದಿ ದುರ್ಮರಣ...!-ಪುತ್ತೂರು : ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆ: ನಾಲ್ವರ ಸೆರೆ-Sonia Gandhi: ರಾಜ್ಯಸಭೆಗೆ ಸೋನಿಯಾ ಗಾಂಧಿ ಅವಿರೋಧವಾಗಿ ಆಯ್ಕೆ!-Gold Rate Today : ಇಳಿಕೆಯತ್ತ ಬಂಗಾರದ ಬೆಲೆ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ಅಪ್ಡೇಟ್ಸ್-ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾಗೆ ಎರಡನೇ ಗಂಡು ಮಗು ; ಹೆಸರೇನು ಗೊತ್ತೆ!-ವೀರಪ್ಪ ಮೊಯ್ಲಿ, ನಲಪಾಡ್​ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ..! ಏನಿದು ಪ್ರಕರಣ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಿಚಾಂಗ್ ಚಂಡಮಾರುತ; ಕರ್ನಾಟಕದಿಂದ ತಮಿಳುನಾಡಿಗೆ ತೆರಳಬೇಕಿದ್ದ 10ಕ್ಕೂ ಹೆಚ್ಚು ರೈಲು ಕ್ಯಾನ್ಸಲ್!

Twitter
Facebook
LinkedIn
WhatsApp
ಮಿಚಾಂಗ್ ಚಂಡಮಾರುತ; ಕರ್ನಾಟಕದಿಂದ ತಮಿಳುನಾಡಿಗೆ ತೆರಳಬೇಕಿದ್ದ 10ಕ್ಕೂ ಹೆಚ್ಚು ರೈಲು ಕ್ಯಾನ್ಸಲ್!

ದೇವನಹಳ್ಳಿ, ಡಿ.04: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ತಮಿಳುನಾಡು, ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತ (Michong Storm) ಅಬ್ಬರ ಜೋರಾಗಿದೆ. ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯದಿಂದ ತೆರಳಬೇಕಿದ್ದ ಹತ್ತಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಲಾಗಿದೆ (Train Service). ಜೊತೆಗೆ ಚೆನ್ನೈನಲ್ಲೂ ಭಾರಿ ಮಳೆಯಾಗುತ್ತಿದ್ದು ಚೆನ್ನೈ ಏರ್​ಪೋರ್ಟ್​​ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಲಾಗಿದೆ.

ತಮಿಳುನಾಡಿಗೆ ರೈಲು ಸೇವೆ ರದ್ದು

ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ತಮಿಳುನಾಡಿನ ಬಹುತೇಕ ರೈಲ್ವೆ ನಿಲ್ದಾಣಗಳು ಮಳೆ ನೀರಿನಿಂದ ಕೂಡಿವೆ. ಕೆಲವೆಡೆ ಸಂಚಾರಕ್ಕೆ ಅಡ್ಡಿಯಾಗಿದೆ. ಗುಡ್ಡ ಕುಸಿತವೂ ಆಗಿದೆ. ಹೀಗಾಗಿ ತಮಿಳುನಾಡು ಭಾಗಕ್ಕೆ ಇಂದು ರೈಲ್ವೆ ಸೇವೆ ಸಂಚಾರ ಇಲ್ಲ. ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೆ ಮನವಿ ಮಾಡಿದೆ. ತಮಿಳುನಾಡಿಗೆ ತೆರಳುವ ರೈಲು ಸೇವೆ ರದ್ದಾಗಿದೆ. ಕರ್ನಾಟಕ ರಾಜ್ಯದಿಂದ ತೆರಳಬೇಕಿದ್ದ ಹತ್ತಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡಲಾಗಿದೆ. ಇಂದು ಯಾವ ರೈಲು ಕೂಡ ತಮಿಳುನಾಡಿಗೆ ಹೋಗುವುದಿಲ್ಲ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಚೆನ್ನೈನಲ್ಲಿ ಇಳಿಯಬೇಕಿದ್ದ ವಿಮಾನಗಳು ಬೆಂಗಳೂರಿಗೆ ಡೈವರ್ಟ್

ಚೆನ್ನೈನಲ್ಲಿ ಮಿಚಾಂಗ್ ಚಂಡಮಾರುತ ಅಬ್ಬರ ಹಿನ್ನೆಲೆ ನಿನ್ನೆ ರಾತ್ರಿಯಿಂದ ಇದುವರೆಗೂ ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿದ್ದ ಒಟ್ಟು 27 ವಿಮಾನಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಡೈವರ್ಟ್ ಆಗಿವೆ. ಎಮಿರೇಟ್ಸ್, ಏರ್ ಇಂಡಿಯಾ ಎಕ್ಸ್​ಪ್ರೆಸ್​​ ಸೇರಿದಂತೆ 27 ವಿಮಾನಗಳು ಕೆಂಪೇಗೌಡ ಏರ್​ಪೋರ್ಟ್​ಗೆ ಬಂದಿಳಿದಿದ್ದು ಬೆಳಗ್ಗೆಯಿಂದ ಪ್ರಯಾಣಿಕರು ಏರ್​ಪೋರ್ಟ್​ನಲ್ಲಿ ಉಳಿಯುವಂತಾಗಿದೆ. ಮಳೆ ಕಡಿಮೆಯಾದ್ರೆ ಮತ್ತೆ ವಿಮಾನಗಳು ಚೆನ್ನೈಗೆ ಹೋಗಬಹುದು ಎಂದು ಪ್ರಯಾಣಿಕರು ಕಾದು ಕುಳಿತಿದ್ದಾರೆ. ಕೆಂಪೇಗೌಡ ಏರ್ಪೋಟ್ ರನ್ ವೇ ನಲ್ಲಿ ಡೈವರ್ಟ್ ವಿಮಾನಗಳು ನಿಂತಿವೆ.

ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ಚೆನ್ನೈನಲ್ಲಿ ಭಾರೀ ಮಳೆಯಾಗ್ತಿದ್ದು. ಚೆನ್ನೈ ಮುಳುಗಿ ಹೋಗಿದೆ. 23 ಸೆಂಟಿ ಮೀಟರ್ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈನ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ರಸ್ತೆಗಳು ನದಿಯಂತಾಗಿವೆ.

ಮಳೆಯ ಆರ್ಭಟದಿಂದಾಗಿ ಹಲವು ತಗ್ಗು ಪ್ರದೇಶಗಳು ಮುಳುಗಿವೆ. ಜಲಾವೃತ್ತಗೊಂಡಿದ್ದ ತಂಬರಂ ಮತ್ತು ಪೆರುಂಗಲತ್ತೂರಿ ಪ್ರದೇಶದಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಜಲಾವೃತ್ತಗೊಂಡಿರುವ 14 ಸಬ್‌ವೇ ಗಳನ್ನು ಬಂದ್ ಮಾಡಲಾಗಿದೆ. ಮ್ಯಾಡ್ಲೇ, ರಂಗರಾಜಪುರಂ, ದೊರೈಸ್ವಾಮಿ, ಮೌಂಟ್, ರಂಗನಾಥನ್‌, ಗಣೇಶ್ ಪುರಂ, ಗೇಣುರೆಡ್ಡಿ, ವಿಲ್ಲಿವಕ್ಕಂ, ನುಂಗಂಬಾಕಂನಲ್ಲಿರೋ ಸಬ್‌ ವೇಗಳನ್ನು ಕ್ಲೋಸ್ ಮಾಡಲಾಗಿದೆ. ಸೆಂಟ್‌ ಥಾಮಸ್‌ ಮೆಟ್ರೋ ಸ್ಟೇಷನ್‌ ನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡಿದ್ದಾರೆ. ತಂಬರಂ ಕಾರ್ಪೋರೇಷನ್ ವ್ಯಾಪ್ತಿಯ 39 ನಿರಾಶ್ರಿತ ಕೇಂದ್ರಗಳಲ್ಲಿ 679 ಮಂದಿ ಆಶ್ರಯ ಪಡೆಯುತ್ತಿದ್ದಾರೆ.

ಸಾರ್ವಜನಿಕ ರಜೆ ಘೋಷಣೆ

ಇನ್ನೂ ಮುಂಜಾಗ್ರತಾ ಕ್ರಮವಾಗಿ ಇಂದು ಸಾರ್ವಜನಿಕ ರಜೆ ಘೋಷಣೆ ಮಾಡಲಾಗಿದೆ. ಮನೆಯಿಂದ ಹೊರ ಬಾರದಂತೆ ಚೆನ್ನೈನ ನಿವಾಸಿಗಳಿಗೆ ಮನವಿ ಮಾಡಲಾಗಿದೆ.

ಮೀನಂಬಾಕಂನಲ್ಲಿ ಅತ್ಯಧಿಕ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 25 ಸೆಂಟಿ ಮೀಟರ್ ಮಳೆ ಸುರಿದಿದೆ. ನಗರ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ವ್ಯಾಸಾರ್ಪಾಡಿ ಮತ್ತು ಬೇಸಿನ್ ಬ್ರಿಡ್ಜ್್‌ನ 14 ನಂಬರ್‌ನ ಸೇತುವೆಯಲ್ಲಿ ನೀರಿನ ಹರಿವು ಅಪಾಯ ಮಟ್ಟಕ್ಕೆ ತಲುಪಿದೆ. ಇದ್ರಿಂದ 11 ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರವನ್ನು ಕೂಡ ರದ್ದು ಮಾಡಲಾಗಿದೆ. ಸಬರ್ಬನ್‌ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ Twitter Facebook LinkedIn WhatsApp Drago Fruit; ಡ್ರಾಗನ್ ಫ್ರೂಟ್ ಒಂದು ಆರೋಗ್ಯದಾಯಕ ಹಣ್ಣು. ‘ಸಿ’ ಮತ್ತು ‘ಬಿ’