ಕೋರ್ಟ್ ಎದುರು ಭಾವುಕರಾದ ನಟಿ ನೋರಾ ಫತೇಹಿ, ಯಾಕೆ ಗೊತ್ತಾ?
200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಅರೆಸ್ಟ್ ಆಗಿದ್ದಾನೆ. ಈತನ ಜೊತೆ ಸಂಪರ್ಕದಲ್ಲಿದ್ದರು ಎಂಬ ಆರೋಪದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿ ಕೂಡ ಸಂಕಷ್ಟ ಅನುಭವಿಸಿದ್ದಾರೆ. ಆಗಾಗ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ತಮ್ಮ ಮಾನ ಹಾನಿ ಮಾಡಲಾಗಿದೆ ಎಂದು ಕಳೆದ ಡಿಸೆಂಬರ್ನಲ್ಲಿ ನೋರಾ ಅವರು ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ದೆಹಲಿಯ ಪಟಿಯಾಲ ಹೌಸ್ಕೋರ್ಟ್ನಲ್ಲಿ ನಡೆದಿದೆ. ಕೋರ್ಟ್ಗೆ ಹಾಜರಿ ಹಾಕಿ ನೋರಾ ಅವರು ತಮ್ಮ ಹೇಳಿಕೆ ದಾಖಲು ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ ಎಂಬುದು ನೋರಾ ಅವರ ಹೇಳಿಕೆ. ‘ನನ್ನನ್ನು ಸಮಯಸಾಧಕಿ ಎಂದು ಕರೆದರು. ನಾನು ಸುಕೇಶ್ ಚಂದ್ರಶೇಖರ್ ಜೊತೆ ಸಂಬಂಧ ಇಟ್ಟುಕೊಂಡಿದ್ದೆ ಎಂದು ಆರೋಪಿಸಿದರು. ಎಲ್ಲರ ಗಮನ ಬೇರೆಡೆ ಸೆಳೆಯಲು ನನ್ನ ಹೆಸರನ್ನು ಸೇರಿಸಲಾಗಿದೆ’ ಎಂದು ನೋರಾ ಹೇಳಿದ್ದಾರೆ.
‘ಈ ಪ್ರಕರಣದಿಂದ ನಾನು ಸಾಕಷ್ಟು ಆಫರ್ ಕಳೆದುಕೊಂಡಿದ್ದೇನೆ. ನನ್ನ ವರ್ಚಸ್ಸಿಗೆ ಕುತ್ತು ಬಂದಿದೆ. ಮಾನಸಿಕವಾಗಿ ಕಿರಿಕಿರಿ ಆಗಿದೆ. ಕಾರ್ಯಕ್ರಮವೊಂದಕ್ಕೆ ನನ್ನನ್ನು ಮುಖ್ಯ ಅತಿಥಿಯಾಗಿ ಕರೆಯಲಾಗಿತ್ತು ಅಷ್ಟೇ. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ನನಗೆ ಅವರ ಬಗ್ಗೆ ಗೊತ್ತೂ ಇಲ್ಲ. ನಾನು ಹೊರಗಿನವಳು. ನಾನು ಈ ದೇಶದಲ್ಲಿ ಒಬ್ಬಂಟಿ. ಹೀಗಾಗಿ ಕೆಲವರನ್ನು ರಕ್ಷಿಸಲು ನನ್ನ ಬಲಿಪಶು ಮಾಡಲಾಗಿದೆ’ ಎಂದು ನೋರಾ ಫತೇಹಿ ಹೇಳಿದ್ದಾರೆ.
‘ನನ್ನ ವೃತ್ತಿ ಜೀವನಕ್ಕೆ ಹಾಗೂ ವರ್ಚಸ್ಸಿಗೆ ಉಂಟಾದ ಹಾನಿಗೆ ಪರಿಹಾರ ಹಣ ಬೇಕು. ಈ ಕಾರಣದಿಂದ ನಾನು ಮಾನಹಾನಿ ಅರ್ಜಿ ಸಲ್ಲಿಸಿದ್ದೇನೆ’ ಎಂದು ನೋರಾ ಹೇಳಿದ್ದಾರೆ. ಡಿಸೆಂಬರ್ 12ರಂದು ನೋರಾ ಅವರು ಜಾಕ್ವೆಲಿನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಈ ಪ್ರಕರಣದಲ್ಲಿ ನೋರಾ ಹೆಸರನ್ನು ಜಾಕ್ವೆಲಿನ್ ಎಳೆದು ತಂದಿದ್ದಾರೆ ಎನ್ನಲಾಗಿದೆ.
ವೆಕೇಷನ್ ಮೂಡ್ನಲ್ಲಿ ಅಮೂಲ್ಯ ಫ್ಯಾಮಿಲಿ- ಗೋಲ್ಡನ್ ಕ್ವೀನ್ ಜೊತೆ ವೈಷ್ಣವಿ
ಸ್ಯಾಂಡಲ್ವುಡ್ನ (Sandalwood) ಗೋಲ್ಡನ್ ಬ್ಯೂಟಿ ಅಮೂಲ್ಯ (Amulya) ಅವರು ವೆಕೇಷನ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಮಲೆನಾಡು ಚಿಕ್ಕಮಗಳೂರಿನಲ್ಲಿ ಅಮೂಲ್ಯ ಕುಟುಂಬ ತೆರಳಿದ್ದು, ಪತಿ ಮತ್ತು ಮಕ್ಕಳ ಜೊತೆಗಿನ ಸುಂದರ ಫೋಟೋವನ್ನ ಶೇರ್ ಮಾಡಿದ್ದಾರೆ.
ಚೆಲುವಿನ ಚಿತ್ತಾರ’ (Chevina Chittara) ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪರಿಚಿತರಾದ ಅಮೂಲ್ಯ ಅವರು ಮಳೆ, ಗಜಕೇಸರಿ, ರಾಮ್ ಲೀಲಾ, ಕೃಷ್ಣ ರುಕ್ಕು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅಮೂಲ್ಯಗೆ ಡಿಮ್ಯಾಂಡ್ ಇರುವಾಗಲೇ ಜಗದೀಶ್ ಅವರನ್ನು ನಟಿ ಮದುವೆಯಾದರು. ಈಗ ಇಬ್ಬರು ಅವಳಿ ಮಕ್ಕಳ ಆರೈಕೆಯಲ್ಲಿ ನಟಿ ಬ್ಯುಸಿಯಿದ್ದಾರೆ.
ಇತ್ತೀಚಿಗೆ ನಟಿ ಅಮೂಲ್ಯ ಫ್ಯಾಮಿಲಿ ಮತ್ತು ತನ್ನ ಬೆಸ್ಟ್ ಫ್ರೆಂಡ್ ಜೊತೆ ಚಿಕ್ಕಮಗಳೂರಿಗೆ ಹೋಗಿ ಬಂದಿದ್ದಾರೆ. ಸುಂದರ ತಾಣಗಳಿಗೆ ಭೇಟಿ ಕೊಟ್ಟಿದ್ದಾರೆ. ಚಿಕ್ಕಮಗಳೂರಿನ ಬ್ಯೂಟಿಫುಲ್ ಜಾಗವೊಂದರಲ್ಲಿ ಅಮ್ಮು ಫ್ಯಾಮಿಲಿ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಪತಿ ಜಗದೀಶ್ ಮತ್ತು ಮಕ್ಕಳು ಜೊತೆಗಿದ್ದು, ‘ಸೀತಾರಾಮ’ (Seetharama) ನಟಿ ವೈಷ್ಣವಿ ಗೌಡ (Vaishnavi Gowda) ಕೂಡ ಅಮೂಲ್ಯ ಜೊತೆ ಫೋಟೋ ಪೋಸ್ ಕೊಟ್ಟಿದ್ದಾರೆ.
ಅಮೂಲ್ಯ ಪಿಂಕ್ ಬಣ್ಣದ ಡ್ರೆಸ್ನಲ್ಲಿ ಮಿಂಚಿದ್ರೆ, ವೈಷ್ಣವಿ ಲೈಟ್ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರು ‘ಸೀತಾರಾಮ’ ಸೀರಿಯಲ್ ಮೂಲಕ ಮೋಡಿ ಮಾಡ್ತಿದ್ದಾರೆ. ಅಮೂಲ್ಯ ಕಮ್ಬ್ಯಾಕ್ ಅಭಿಮಾನಿಗಳು ಎದುರು ನೋಡ್ತಿದ್ದಾರೆ.