ಭಾನುವಾರ, ಸೆಪ್ಟೆಂಬರ್ 8, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ಪ್ರಚೋದನೆಯನ್ನು ಅಥವಾ ಲೈಂಗಿಕ ಆಸಕ್ತಿಯನ್ನು ನಿಯಂತ್ರಣದಲ್ಲಿಡಿ ; ಹೈಕೋರ್ಟ್!

Twitter
Facebook
LinkedIn
WhatsApp
ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ಪ್ರಚೋದನೆಯನ್ನು ಅಥವಾ ಲೈಂಗಿಕ ಆಸಕ್ತಿಯನ್ನು ನಿಯಂತ್ರಣದಲ್ಲಿಡಿ ; ಹೈಕೋರ್ಟ್!

ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ಪ್ರಚೋದನೆಯನ್ನು ಅಥವಾ ಲೈಂಗಿಕ ಆಸಕ್ತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುದಿದ್ದಾರೆ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಹುಡುಗಿ ಮತ್ತು ಹುಡುಗರು ಹದಿಹರೆಯದ ವಯಸ್ಸಿನಲ್ಲಿ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಕಲ್ಕತ್ತಾ ಹೈಕೋರ್ಟ್​​​ ಹೇಳಿದೆ. ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಲು ಮತ್ತು ಇತರ ಲಿಂಗದ ಘನತೆ ಹಾಗೂ ದೈಹಿಕ ಸ್ವಾಯತ್ತತೆಯನ್ನು ಗೌರವಿಸುವಂತೆ ಕೋರ್ಟ್​ ಹೇಳಿದೆ. 2022ರಲ್ಲಿ ನಡೆದ ಘಟನೆಯ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್​​ ಈ ಸಲಹೆಯನ್ನು ನೀಡಿದೆ. ಅಪ್ರಾಪ್ತ ವಯಸ್ಸಿನ ಹುಡುಗ ಮತ್ತು ಹುಡುಗಿ ಲೈಂಗಿಕ ಕ್ರಿಯೆಯನ್ನು ನಡೆಸಿದರೆ ಎಂದು ಹುಡುಗನ ಮೇಲೆ ಅತ್ಯಾಚಾರ ಆರೋಪವನ್ನು ಹೊರಿಸಿ, 20 ವರ್ಷಗಳ ಕಾಲ ಆತನಿಗೆ ಜೈಲು ಶಿಕ್ಷೆಯನ್ನು ಸೆಷನ್ಸ್ ನ್ಯಾಯಾಲಯ ವಿಧಿಸಿತ್ತು. ಈ ಬಗ್ಗೆ ಹೈಕೋರ್ಟ್​​ನಲ್ಲಿ ಪ್ರಶ್ನೆ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಹುಡುಗಿಯೇ ನಮ್ಮಿಬ್ಬರ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆಯನ್ನು ಮಾಡಿಕೊಂಡಿದ್ದೇವೆ. ನಮಗೆ ಮದುವೆಯಾಗಿದೆ ಎಂದು ಹೇಳಿದ್ದಾಳೆ. ಆದರೆ ಭಾರತದ ಕಾನೂನಿನ ಪ್ರಕಾರ ಲೈಂಗಿಕ ಕ್ರಿಯೆ ನಡೆಸಲು 18 ವರ್ಷ ಮೇಲ್ಪಟ್ಟಿರಬೇಕು, ಇಲ್ಲದಿದ್ದರೆ ಇದು ಅಪರಾಧ ಎಂದು ಸೆಷನ್ಸ್ ನ್ಯಾಯಾಲಯ ಹೇಳಿದೆ.

ಇನ್ನು 18 ವರ್ಷಕ್ಕಿಂತ ಕಡಿಮೆ ಇರುವ ವಯಸ್ಸಿನ ಹುಡುಗಿ ಲೈಂಗಿಕ ಕ್ರಿಯೆಗೆ ನೀಡಿದ ಒಪ್ಪಿಗೆಯನ್ನು ಮಾನ್ಯ ಎಂದು ಹೇಳಲು ಸಾಧ್ಯವಿಲ್ಲ. ಈ ಲೈಂಗಿಕ ಸಂಭೋಗವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿಯಲ್ಲಿ ಅತ್ಯಾಚಾರಕ್ಕೆ ಸಮಾನವಾಗಿರುತ್ತದೆ ಎಂದು ಹೇಳಿದೆ. ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಶ್ ಮತ್ತು ಪಾರ್ಥ ಸಾರಥಿ ಸೇನ್ ಅವರ ದ್ವಿಸದಸ್ಯ ಪೀಠವು ನೀಡಿದ ಈ ತೀರ್ಪುನ್ನು ಹೈಕೋರ್ಟ್​ ತಳ್ಳಿಹಾಕಿದೆ.

ಚಿಕ್ಕ ವಯಸ್ಸಿನಲ್ಲಿ ನಡೆಸುವ ಲೈಂಗಿಕ ಕ್ರಿಯೆಗಳನ್ನು ತಪ್ಪಿಸಲು ಶಾಲೆಗಳಲ್ಲಿ ಸರಿಯಾದ ಲೈಂಗಿಕ ಶಿಕ್ಷಣವನ್ನು ನೀಡಬೇಕು ಎಂದು ಹೈಕೋರ್ಟ್​​ ಹೇಳಿದೆ. ಹದಿಹರೆಯದ ವಯಸ್ಸಿನಲ್ಲಿ ಲೈಂಗಿಕ ಆಸಕ್ತಿಗಳು ಉಂಟಾಗುವುದು ಸಹಜ. ಆದರೆ ಅವುಗಳು ಆ ವ್ಯಕ್ತಿ (ಹುಡುಗಿ ಅಥವಾ ಹುಡುಗ) ಲೈಂಗಿಕ ಪ್ರಚೋದನೆ ಮೇಲೆ ನಿಂತಿರುತ್ತದೆ ಎಂದು ಹೇಳಿದೆ. ಹುಡುಗಿಯರು ತಮ್ಮ ಲೈಂಗಿಕ ಪ್ರಚೋದನೆಯನ್ನು ನಿಯಂತ್ರಿಸಬೇಕು ಹಾಗೂ ಎರಡು ನಿಮಿಷಗಳ ಸಂತೋಷಕ್ಕೆ ಈ ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

ಇಂತಹ ಲೈಂಗಿಕ ಪ್ರಚೋದನೆಗಳನ್ನು ಸಮಾಜದಲ್ಲಿ ನಿಯಂತ್ರಿಸಿ, ಕೇವಲ ಎರಡು ನಿಮಿಷಗಳ ಲೈಂಗಿಕ ಆನಂದವನ್ನು ಅನುಭವಿಸಲು ಅವಳಿಗೆ ಅವಕಾಶ ನೀಡಬೇಡಿ ಎಂದು ಹೈಕೋರ್ಟ್​ ಹೇಳಿದೆ. ಪ್ರತಿಯೊಂದು ಮಹಿಳೆಯ ಅಥವಾ ಯುವತಿಯ ದೇಹದ ಸಮಗ್ರತೆ, ಘನತೆ ಮತ್ತು ಸ್ವಾಭಿಮಾನದ ಹಕ್ಕನ್ನು ರಕ್ಷಿಸುವುದು ಅವರ ಕರ್ತವ್ಯವಾಗಿದೆ. ಹುಡುಗರು ಹುಡುಗಿಯ ಘನತೆಯನ್ನು ಗೌರವಿಸಬೇಕು, ಜತೆಗೆ ಹುಡುಗರಿಗೆ ಮಹಿಳೆಯರನ್ನು ಗೌರವಿಸುವ ಬಗ್ಗೆ ಕಲಿಸಬೇಕು ಎಂದು ಹೇಳಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ