ಕಂಟೈನರ್ ಗೆ ಕಾರು ಢಿಕ್ಕಿ; ಇಬ್ಬರ ಸಾವು, ಚಾಲಕನ ಸ್ಥಿತಿ ಗಂಭೀರ

ಕುಷ್ಟಗಿ: ಸ್ವಿಫ್ಟ್ ಕಾರು ಹಾಗೂ ಕಂಟೈನರ್ ಗೆ ಢಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಚಾಲಕನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಇಲ್ಲಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂ.13ರ ಬೆಳ್ಳಂಬೆಳಗ್ಗೆ ಸಂಭವಿಸಿದೆ.
ವಿಜಯಪುರದ ಸ್ವಿಫ್ಟ್ ಕಾರು ಅತಿ ವೇಗದಲ್ಲಿ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದ ಕಂಟೈನರ್ ಹಿಂಭಾಗಕ್ಜೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಕಾರು ಕಂಟೈನರ್ ಒಳಗೆ ನುಗ್ಗಿದೆ. ಕಂಟೈನರ್ ಹಿಂಭಾಗದಲ್ಲಿ ಸಿಲುಕಿದ್ದ ಕಾರನ್ನು ಬಿಡಿಸಿಕೊಳ್ಳಲು ಸುಮಾರು ದೂರ ಎಳೆದೊಯ್ದಿದ್ದು ಘಟನೆ ಭೀಕರವಾಗಿದೆ.
ಘಟನೆ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಮೃತರಾಗಿದ್ದು, ಚಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮೃತರು ಯಾರೆಂದು ಗುರುತು ತಿಳಿದು ಬಂದಿಲ್ಲ. ಸ್ಥಳಕ್ಕೆ ಪಿಎಸೈ ಮೌನೇಶ್ ರಾಠೋಡ್ ಭೇಟಿ ನೀಡಿದ್ದಾರೆ.
ಕಳೆದ ಮೇ 28 ಇದೇ ಹೆದ್ದಾರಿಯಲ್ಲಿ ಕಾರು ಹಾಗೂ ಲಾರಿ ಢಿಕ್ಕಿಯಾಗಿ 6 ಜನ ಕೂಲಿಕಾರರು ಮೃತರಾಗಿದ್ದರು. ಇದಾದ ಭೀಕರ ಅಪಘಾತ ನಡೆದು17 ದಿನಗಳಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.