ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Talakaveri : ಪರಿಸರ ಸೂಕ್ಷ್ಮ ಭಾಗಮಂಡಲ- ತಲಕಾವೇರಿಯಲ್ಲಿ ಎಗ್ಗಿಲ್ಲದೆ ಸಾಗಿದೆ ಅನಧಿಕೃತ ಕಟ್ಟಡಗಳ ನಿರ್ಮಾಣ. ಅಪಾಯದಲ್ಲಿ ಇದೆಯೇ ಈ ಪ್ರದೇಶ?

Twitter
Facebook
LinkedIn
WhatsApp
Talakaveri : ಪರಿಸರ ಸೂಕ್ಷ್ಮ ಭಾಗಮಂಡಲ- ತಲಕಾವೇರಿಯಲ್ಲಿ ಎಗ್ಗಿಲ್ಲದೆ ಸಾಗಿದೆ ಅನಧಿಕೃತ ಕಟ್ಟಡಗಳ ನಿರ್ಮಾಣ. ಅಪಾಯದಲ್ಲಿ ಇದೆಯೇ ಈ ಪ್ರದೇಶ?

Talakaveri : 

ಮಡಿಕೇರಿ: ದೇಶದ ಬಹುದೊಡ್ಡ ಸೂಕ್ಷ್ಮ ಪ್ರದೇಶ ಎಂದು ಪರಿಗಣಿತವಾಗಿರುವ ಜೀವನದಿ ಕಾವೇರಿಯ ಮುಖ್ಯ ಉದ್ಭವದ ಸ್ಥಳವಾಗಿರುವ ಭಾಗಮಂಡಲ ತಲಕಾವೇರಿ (Talakaveri) ಪ್ರದೇಶದಲ್ಲಿ ಅನಧಿಕೃತ ವಾಣಿಜ್ಯದ ಕಟ್ಟಡಗಳು ನಿರ್ಮಾಣಗೊಂಡಿರುವುದು ಈ ಪ್ರದೇಶದ ಪರಿಸರದ ಮೇಲೆ ವ್ಯಾಪಕ ಪರಿಣಾಮ ಬೀರಬಹುದು ಎಂದು ಪರಿಸರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಗುಡ್ಡಗಳನ್ನು ಕೊರೆದು ವಾಣಿಜ್ಯ ಕಟ್ಟಡಗಳನ್ನು ಹೆಜ್ಜೆ ಹೆಜ್ಜೆಗೆ ನಿರ್ಮಾಣ ಮಾಡಲಾಗಿದ್ದು ಇಲ್ಲಿ ಸೂಕ್ಷ್ಮ ಪರಿಸರ ವಲಯದ ಪ್ರಮುಖ ಕಾನೂನು ಹಾಗೂ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲು ಈ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪಗಳು ನಡೆದಿದ್ದು, ಇದು ಸೂಕ್ಷ್ಮ ಪ್ರದೇಶ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಭಾಗಮಂಡಲದಿಂದ ತಲಕಾವೇರಿ ಪ್ರದೇಶ ದಲ್ಲಿ ಬಹುದೊಡ್ಡ ವಾಣಿಜ್ಯ ಕಟ್ಟಡಗಳು ತಲೆಯೆತ್ತಿರುವುದು ಈ ಪ್ರದೇಶ ಪರಿಸರದ ಬಹುದೊಡ್ಡ ಅಪಾಯಗಳನ್ನು ಎದುರಿಸುವುದರಲ್ಲಿ ಎರಡು ಮಾತಿಲ್ಲ ಎಂದು ಸ್ಥಳೀಯರು ಸಹ ಅಭಿಪ್ರಾಯ ಪಡುತ್ತಿದ್ದಾರೆ. ಸರ್ಕಾರ ಈ ವಿಷಯದ ಬಗ್ಗೆ ಕೂಲಂಕುಶವಾಗಿ ಗಮನ ಹರಿಸಬೇಕು ಎಂದು ಸ್ಥಳೀಯರು ಸಹ ಅಗ್ರಹ ವ್ಯಕ್ತಪಡಿಸಿದ್ದಾರೆ.

ಪತ್ನಿಯ ಪ್ರಿಯಕರನನ್ನು ಕೊಲೆಗೈದ ಪತಿ

ಕೋಲಾರ ಅ.31: ಪತಿಯನ್ನು ಬಿಟ್ಟು ಬಂದು ಹಳೆ ಪ್ರಿಯಕರನೊಂದಿಗೆ ಸುಖವಾಗಿ ಜೀವನ ಸಾಗಿಸಬೇಕು ಎಂದುಕೊಂಡಿದ್ದ ಮಹಿಳೆಯ ಬಾಳಲ್ಲಿ ಅದೊಂದು ಘನಘೋರ ಘಟನೆ ನಡೆದಿದೆ. ಪತ್ನಿಯು ಪ್ರಿಯಕರನೊಂದಿಗೆ ಇದ್ದಿದ್ದನ್ನು ಸಹಿಸಲಾಗದೆ ಪತಿ ಹಾಗೂ ಪತ್ನಿಯ ತವರು ಮನೆಯವರು ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆ ಬಂಗಾರಪೇಟೆ (Bangarpete) ಪಟ್ಟಣದಲ್ಲಿ ನಡೆದಿದೆ. ದಂಪತಿ ಎರಡು ವರ್ಷ ಸಂಸಾರ ಮಾಡಿದ್ದರು.

ಆದರೆ ಸಂಸಾರ ಯಾಕೋ ಸರಿಹೋಗಿಲ್ಲ ಎಂದು ಪತ್ನಿ ಪತಿಯನ್ನು ಬಿಟ್ಟು, ಒಂಟಿಯಾಗಿದ್ದ ತನ್ನ ಹಳೆ ಪ್ರೇಮಿಯೊಂದಿಗೆ ವಾಸವಾಗಿದ್ದಳು. ಆದರೆ ಇದನ್ನು ಸಹಿಸದ ಪತಿ ಹಳೆ ಪ್ರಿಯಕರನನ್ನೇ ಕೊಲೆ ಮಾಡಿದ್ದಾನೆ. 

ಅಕ್ಟೋಬರ್​15 ರಂದು ಬಂಗಾರಪೇಟೆ ಕೆಂಪೇಗೌಡ ಸರ್ಕಲ್​ನಲ್ಲಿ ಬೆಂಗಳುರಿಗೆ ಹೋಗಲು ನಿಂತಿದ್ದ ಹೇಮಂತ್​ ಕುಮಾರ್​ನನ್ನು ಇನೋವಾ ಕಾರ್​ನಲ್ಲಿ ಕಿಡ್ನಾಪ್​ ಮಾಡಿ, ನಂತರ ಕೊಲೆ ಮಾಡಿ ಯಲಹಂಕ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬಿಸಾಡಿ ಹೋಗಿದ್ದರು. ಸದ್ಯ ಹೇಮಂತ್​ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಬಯಲಾಗಿದೆ. 

ಸದ್ಯ ಪೊಲೀಸರು ಆಶಾ ಪತಿ ಭರತ್​, ಆಶಾ ತಾಯಿ ಪುಷ್ಪ, ಆಶಾ ತಮ್ಮ ಶ್ರೀಕಾಂತ್​, ಹಾಗೂ ಭರತ್ ಸ್ನೇಹಿತರಾದ ಮಹಾತ್ಮಗಾಂಧಿ, ಸುದರ್ಶನ್​, ಆನಂದ್, ಗಿರೀಶ್​, ಪ್ರಶಾಂತ್​ ಸೇರಿ ಒಟ್ಟು 8 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಟ್ಟಾರೆಯಾಗಿ ಇಲ್ಲಿ ಇಷ್ಟವಿಲ್ಲದವರ ಜೊತೆಗೆ ಬದುಕಲಾಗದೆ ಇಷ್ಟಪಟ್ಟವರ ಜೊತೆಗೆ ಬದುಕಲು ಹೋದ ಇಬ್ಬರು ಹಳೆಯ ಪ್ರೇಮಿಗಳಿಗೆ ಬದುಕಲು ಬಿಟ್ಟಿಲ್ಲ. ನಮಗೆ ಯಾರ ಸಹವಾಸವೂ ಬೇಡವೆಂದು ನೆಮ್ಮದಿಯಾಗಿದ್ದವರ ನೆಮ್ಮದಿಯನ್ನು ಆರೋಪಿಗಳು ಹಾಳು ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ