ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಒಂದೇ ಓವರ್​ನಲ್ಲಿ ಸತತ 5 ಸಿಕ್ಸರ್ ಸಿಡಿಸಿದ ವಿಲ್ ಜ್ಯಾಕ್ಸ್ : ವಿಡಿಯೋ ವೈರಲ್

Twitter
Facebook
LinkedIn
WhatsApp
baby.1.1758801 1

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ಲೇ ಆಫ್ ಪ್ರವೇಶಿಸಲು ಸ್ವಲ್ಪದರಲ್ಲಿ ಎಡವಿತ್ತು. ಆರ್​ಸಿಬಿ ಈ ಬಾರಿಯ ಸೀಸನ್​ನಲ್ಲಿ ವೈಫಲ್ಯ ಅನುಭವಿಸಿದ್ದು ಮಧ್ಯಮ ಕ್ರಮಾಂಕದಲ್ಲಿ. ಮಿಡಲ್ ಆರ್ಡರ್​ನಲ್ಲಿ ಅನುಭವಿ ಸ್ಫೋಟಕ ಆಟಗಾರನ ಅಲಭ್ಯತೆ ಎದ್ದು ಕಂಡಿತು. ಆದರೆ, ಮುಂದಿನ ಸೀಸನ್​ಗೆ ಈ ತೊಂದರೆ ನಿವಾರಣೆ ಆಗಲಿದೆ. ಆರ್​ಸಿಬಿ ತಂಡದ ಭಾಗವಾಗಿರುವ ಇಂಗ್ಲೆಂಡ್​ನ ಬ್ಯಾಟರ್ ವಿಲ್ ಜ್ಯಾಕ್ಸ್ (Will Jacks) ಸದ್ಯ ಸಾಗುತ್ತಿರುವ ವಿಟಾಲಿಟಿ ಟಿ20 ಬ್ಲಾಸ್ಟ್​ನಲ್ಲಿ (Vitality T20 Blast) ಅಬ್ಬರಿಸಿ ಮಧ್ಯಮ ಕ್ರಮಾಂಕಕ್ಕೆ ನಾನೇ ಸೂಕ್ತ ಬ್ಯಾಟರ್ ಎಂದು ತೋರಿಸಿಕೊಟ್ಟಿದ್ದಾರೆ.

ಟಿ20 ಬ್ಲಾಸ್ಟ್​ನಲ್ಲಿ ಸರ್ರೆ ತಂಡದ ವಿಲ್ ಜ್ಯಾಕ್ಸ್ ಅವರು ಮಿಡಲೆಕ್ಸ್ ತಂಡದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 45 ಎಸೆತಗಳಲ್ಲಿ 8 ಫೋರ್, 7 ಸಿಕ್ಸರ್ ಸಿಡಿಸಿ 96 ರನ್ ಚಚ್ಚಿದರು. ಅದರಲ್ಲೂ 11ನೇ ಓವರ್​ನ ಸ್ಪಿನ್ನರ್ ಲ್ಯೂಕ್ ಹೋಲ್​ಮೆನ್ ಬೌಲಿಂಗ್​ನಲ್ಲಿ ಸತತ 5 ಸಿಕ್ಸರ್ ಸಿಡಿಸಿ ಮಿಂಚಿದರು. ಮೊದಲ 5 ಎಸೆತವನ್ನೂ ಸಿಕ್ಸರ್​ಗೆ ಅಟ್ಟಿದ ಜ್ಯಾಕ್ಸ್ ಕೊನೆಯ ಎಸೆತವನ್ನೂ 6 ಬಾರಿಸಿ ಯುವರಾಜ್ ಸಿಂಗ್, ಹರ್ಷೆಲ್ ಗಿಬ್ಸ್ ದಾಖಲೆ ಸರಿಗಟ್ಟುವ ಯೋಜನೆಯಲ್ಲಿದ್ದರು. ಆದರೆ, ಕೊನೆಯ ಎಸೆತ ಫುಲ್​ಟಾಸ್ ಬಂದ ಕಾರಣ ಜ್ಯಾಕ್ಸ್​ಗೆ ಇದು ಸಾಧ್ಯವಾಗಲಿಲ್ಲ.

ವಿಲ್ ಜ್ಯಾಕ್ಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2023 ಹರಾಜಿನಲ್ಲಿ 3.2 ಕೋಟಿಗೆ ಖರೀದಿ ಮಾಡಿತ್ತು. ಆದರೆ, ಇಂಜುರಿಯಿಂದಾಗಿ ಜ್ಯಾಕ್ಸ್ ಐಪಿಎಲ್ 2023 ಆಡಲು ಸಾಧ್ಯವಾಗಲಿಲ್ಲ. ಮುಂದಿನ ಸೀಸನ್​ನಲ್ಲಿ ಇವರು ಕಣಕ್ಕಿಳಿಯಲಿದ್ದು, ಬೆಂಗಳೂರು ತಂಡದ ಮಧ್ಯಮ ಕ್ರಮಾಂಕದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.

ಟಿ20 ಬ್ಲಾಸ್ಟ್​ನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ರೆ ತಂಡ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಜ್ಯಾಕ್ಸ್ 96 ರನ್ ಸಿಡಿಸಿದರೆ, ಲೋರಿಸ್ ಎವಾನ್ಸ್ 37 ಎಸೆತಗಳಲ್ಲಿ 85 ರನ್ ಚಚ್ಚಿದರು. ಓಪನರ್​ಗಳಾದ ಇವರಿಬ್ಬರೇ ಮೊದಲ ವಿಕೆಟ್​ಗೆ ಕೇವಲ 12.4 ಓವರ್​ನಲ್ಲಿ 177 ರನ್ ಕಲೆಹಾಕಿದರು. ಆದರೆ, ಇವರಿಬ್ಬರ ನಿರ್ಗಮನದ ಬಳಿಕ ಸರ್ರೆ ತಂಡ ಇದೇ ಲಯದಲ್ಲಿ ಬ್ಯಾಟ್ ಬೀಸಲು ವಿಫಲವಾಯಿತು. ಕೊನೆಯ 44 ಎಸೆತಗಳಲ್ಲಿ ಬಂದಿದ್ದು ಕೇವಲ 75 ರನ್ ಅಷ್ಟೆ. ಓವರ್ಟನ್ 18 ಹಾಗೂ ನಾಯಕ ಕ್ರಿಸ್ ಜೋರ್ಡನ್ ಅಜೇಯ 16 ರನ್ ಗಳಿಸಿದರು.

ಟಾರ್ಗೆಟ್ ಬೆನ್ನಟ್ಟಿದ ಮಿಡಲೆಕ್ಸ್ ತಂಡ ಊಹಿಸಲಾಗದ ರೀತಿಯಲ್ಲಿ ಬ್ಯಾಟ್ ಬೀಸಿತು. ಆರಂಭಿಕರಾದ ನಾಯಕ ಸ್ಟೆಪೆನ್ ಎಸ್ಕಿನಾಝಿ ಹಾಗೂ ಜೋ ಕ್ರ್ಯಾಕ್​ನೆಲ್ (16 ಎಸೆತ, 36 ರನ್) ಕೇವಲ 6.3 ಓವರ್​ನಲ್ಲಿ 90 ರನ್ ಕಲೆಹಾಕಿದರು. ಸ್ಟೆಪೆನ್ 39 ಎಸೆತಗಳಲ್ಲಿ 73 ರನ್ ಚಚ್ಚಿದರು. ನಂತರ ಬಂದ ಬ್ಯಾಟರ್​ಗಳು ಕೂಡ ಸ್ಫೋಟಕ ಆಟವಾಡಿದರು. ಮ್ಯಾಕ್ಸ್ ಹೋಲ್ಡನ್ 35 ಎಸೆತಗಳಲ್ಲಿ ಅಜೇಯ 68 ರನ್ ಸಿಡಿಸಿದರೆ, ರಿಯಾನ್ ಹಿಗ್ಗಿನ್ಸ್ 24 ಎಸೆತಗಳಲ್ಲಿ 48 ರನ್ ಗಳಿಸಿ ಜಯ ತಂದುಕೊಟ್ಟರು. 19.2 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿ ಮಿಡಲೆಕ್ಸ್ 7 ವಿಕೆಟ್​ಗಳ ಜಯ ಕಂಡಿತು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದು ಎರಡನೇ ಗರಿಷ್ಠ ಚೇಸ್ ಆಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist