ಕಾಂಗ್ರೆಸ್ ಸರ್ವೆ ವರದಿ ಬಹಿರಂಗ: ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಹರೀಶ್ ಕುಮಾರ್, ರಮನಾಥ ರೈ ಹೆಸರು ಮುಂಚೂಣಿಯಲ್ಲಿ
ಮಂಗಳೂರು: ಕಾಂಗ್ರೆಸ್ನ ಆಂತರಿಕ ಸಮೀಕ್ಷಯ ವರದಿ ಈಗ ಬಹಿರಂಗವಾಗಿದ್ದು, ಆಂತರಿಕ ಸಮೀಕ್ಷೆಗಳಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾರ್ಯಕರ್ತರ ಹಾಗೂ ಜನರ ಒಲವು ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್ ಹಾಗೂ ಮಾಜಿ ಸಚಿವ ರಮನಾಥ ರೈ ಪರವಾಗಿ ಇದೆ ಎಂದು ತಿಳಿದುಬಂದಿದೆ.
ಇನ್ನುಳಿದಂತೆ ಆಕಾಂಕ್ಷಿಗಳಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪ್ರತಿಭಾ ಕುಳಾಯಿ, ಪದ್ಮರಾಜ್ ಹೆಸರುಗಳು ಸಮೀಕ್ಷೆಯಲ್ಲಿ ನಂತರದ ಸ್ಥಾನ ಪಡೆದಿದೆ.
ಎಲ್ಲರೊಂದಿಗೆ ಸಮದೂಗಿಸಿಕೊಂಡು ಹೋಗುವ ಹಾಗೂ ಕಾರ್ಯಕರ್ತರೊಂದಿಗೆ ಚೆನ್ನಾಗಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪರವಾಗಿ ಸಮೀಕ್ಷೆಯಲ್ಲಿ ಅತೀ ಹೆಚ್ಚು ಒಲವು ವ್ಯಕ್ತವಾಗಿರುವುದು ಈಗ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲಿ ಹೊಸ ತಿರುವು ನೀಡಿದೆ ಎನ್ನಲಾಗಿದೆ.
ಅದೇ ರೀತಿ ಮಾಜಿ ಸಚಿವ ರಮಾನಾಥ ರೈ ಸಮೀಕ್ಷೆಯಲ್ಲಿ ಗಮನ ಸೆಳೆದಿದ್ದಾರೆ. ಕಾರ್ಯಕರ್ತರೊಂದಿಗಿನ ಸಂಪರ್ಕ ಅವರ ಪ್ಲಸ್ ಪಾಯಿಂಟ್ ಆಗಿದೆ ಎನ್ನಲಾಗಿದೆ.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪ್ರತಿಭಾ ಕುಳಾಯಿ, ಪದ್ಮರಾಜ್ ಪರವಾಗಿ ಸಹ ಸಮೀಕ್ಷೆ ನಡೆಸಲಾಗಿತ್ತು .
ಹೈಕಮಾಂಡ್ ನಡೆಸಿದ ಆಂತರಿಕ ಸಮೀಕ್ಷೆಗಳ ವರದಿ ಈಗ ಬಹಿರಂಗವಾಗಿದ್ದು, ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಕಾಂಗ್ರೆಸ್ ಹೇಳಲಿಚ್ಚಿಸದ ನಾಯಕರೊಬ್ಬರು ಸಮೀಕ್ಷೆ ಬಹಳಷ್ಟು ಮುಖ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಈಗ ಕುತೂಹಲದ ಕೇಂದ್ರವಾಗಿದೆ.
‘ಭಗವಾಧ್ವಜ ಪ್ರಕರಣದ ಮೂಲಕ ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನು ಪ್ರದರ್ಶನ ಮಾಡಿದೆ’; ಬಿ ಕೆ ಹರಿಪ್ರಸಾದ್ ಆರೋಪ..!
ಮಂಗಳೂರು : ಮಂಡ್ಯದ ಕೆರಗೋಡು ನಲ್ಲಿ ಭಗವಾಧ್ವಜ ಪ್ರಕರಣದ ಮೂಲಕ ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನು ಪ್ರದರ್ಶನ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್ ಎಸ್ ಎಸ್ ನ ನಾಗ್ಪುರ ಕಛೇರಿಯಲ್ಲಿ 52 ವರ್ಷಗಳ ಕಾಲ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. ಕೆರಗೋಡುನಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಅನುಮತಿ ಪಡೆದಿದ್ದರು ಆದ್ರೆ ಆದರೆ ಭಗವಾಧ್ವಜ ಹಾರಿಸಿ ಕೋಮು ಸೌಹಾರ್ದ ಕೆಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಶಾಂತಿ ಕಡೆಸುವ ಪ್ರಯತ್ನಗಳನ್ನು ಮಾಡಲು ಬಿಡಬಾರದು. ಸರ್ವ ಜನಾಂಗದ ಶಾಂತಿಯ ತೋಟ ಎಂದು ಪ್ರಣಾಳಿಕೆಯಲ್ಲಿ ಸರ್ಕಾರ ಹೇಳಿದೆ ಮತ್ತು ಸರ್ಕಾರ ಈ ಪ್ರಕರಣದಲ್ಲಿ ಭಾಗವಹಿಸಿದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಆರೋಪ ವಿಚಾರವಾಗಿ ಮಾತನಾಡಿದ ಅವರು ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಮಾಡಿಕೊಟ್ಟಿರೋದು ಅಲ್ಪಸಂಖ್ಯಾತರ ಓಲೈಕೆ ಆಗುತ್ತಾ? ಬಿಜೆಪಿ ಬಹುಸಂಖ್ಯಾತರ ಓಲೈಕೆಗೆ ಭಗವಾಧ್ವಜ ಹಾರಿಸಿದೆ ಮತ್ತು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದೆ ಎಂದರು.
ಶೆಟ್ಟರ್ ಪಕ್ಷ ಬಿಟ್ಟು ಹೋಗಿರೋದು ಕಾಂಗ್ರೆಸ್ ದೌರ್ಭಾಗ್ಯ..!
ಇನ್ನು ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಜಗದೀಶ್ ಶೆಟ್ಟರ್ ಸೌಮ್ಯ ಸ್ವಭಾವದ ವ್ಯಕ್ತಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕಾಗಿತ್ತು. ಅವರು ಪಕ್ಷ ಬಿಟ್ಟು ಹೋಗಿರೋದು ನಮ್ಮ ದೌರ್ಭಾಗ್ಯ ಆದ್ರೆ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸುತ್ತೇನೆ ಎಂದಿದ್ದಾರೆ.