ಗುರುವಾರ, ಅಕ್ಟೋಬರ್ 10, 2024
Ratan Tata: ಟಾಟಾ ಸಮೂಹದ ಮುಖ್ಯಸ್ಥ ರತನ್‌ ಟಾಟಾ ಇನ್ನಿಲ್ಲ-ಇಂದು ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶ; ಮತ ಎಣಿಕೆ ಶುರು-ಮಡಿಕೇರಿ ದಸರಾಕ್ಕೆ ದಸರಾ ಇತಿಹಾಸದಲ್ಲಿ ಅತಿ ಹೆಚ್ಚು 1.50 ಕೋಟಿ ರೂಪಾಯಿ ಅನುದಾನ: ಡಾ. ಮಂತರ್ ಗೌಡ-ಬಿಜೆಪಿಯಿಂದ ವಿಧಾನಪರಿಷತ್ತಿಗೆ ಕಾರ್ಯಕರ್ತ ಅಭ್ಯರ್ಥಿ: ಪುತ್ತೂರಿನ ಕಿಶೋರ್ ಬೊಟ್ಯಾಡಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ.-30 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತ, 2 ಬಾರಿ ಜಿ. ಪಂ ಚುನಾವಣೆಯಲ್ಲಿ ಘಟಾನುಘಟಿಗಳನ್ನು ಸೋಲಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಯವರಿಗೆ ಸಿಗಬಹುದೇ ಕಾಂಗ್ರೆಸ್ ಟಿಕೆಟ್?-ಮುಡಾ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ; 14 ನಿವೇಶನ ವಾಪಸ್ ನೀಡಲು ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ!-Naravi: ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು-Udayanidhi Stalin: ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನೇಮಕ; ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ!-CM Siddaramaiah: ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕು ಅಲ್ಲವೇ?-MLC Election:ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಚುನಾವಣೆ: ಕಾಂಗ್ರೆಸ್ಸಿನಿಂದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಡಿ. ಆರ್. ರಾಜು ಹೆಸರು ಮುಂಚೂಣಿಯಲ್ಲಿ.
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣದ ರಾಜ್ಯಗಳಿಗೆ ಕಾಂಗ್ರೆಸ್‌ ಮೊದಲ ಪಟ್ಟಿ ಪ್ರಕಟ

Twitter
Facebook
LinkedIn
WhatsApp
ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣದ ರಾಜ್ಯಗಳಿಗೆ ಕಾಂಗ್ರೆಸ್‌ ಮೊದಲ ಪಟ್ಟಿ ಪ್ರಕಟ

ನವದೆಹಲಿ (ಅ.16): ಮುಂದಿನ ತಿಂಗಳು ನಡೆಯಲಿರುವ ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಧ್ಯಪ್ರದೇಶಕ್ಕೆ 144, ಛತ್ತೀಸ್‌ಗಢಕ್ಕೆ 30 ಹಾಗೂ ತೆಲಂಗಾಣಕ್ಕೆ 55 ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಮಧ್ಯಪ್ರದೇಶದಲ್ಲಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರಿಗೆ ಅವರ ಕ್ಷೇತ್ರವಾದ ಚಿಂದ್ವಾರಾ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಪುತ್ರ ಜೈವರ್ಧನ್‌ ಸಿಂಗ್‌ ಅವರಿಗೆ ರಾಘೋಘಡದ ಟಿಕೆಟ್‌ ನೀಡಿದೆ. ಒಟ್ಟು 69 ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗಿದೆ.

ತಾರಾ ಬಲಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್ 2018ರಲ್ಲಿ ಕಿರುತೆರೆಯಲ್ಲಿ ಪ್ರಸಾರವಾದ ರಾಮಾಯಣದ ಹನುಮನ ಪಾತ್ರದಾರಿ ವಿಕ್ರಮ್‌ ಮಸ್ತಾಲ್‌ ಅವರನ್ನು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ಕಣಕ್ಕಿಳಿಸಿದೆ.

ಛತ್ತೀಸ್‌ಗಢದಲ್ಲಿ ಹಾಲಿ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ಗೆ ಅವರ ಪಾಟನ್‌ ಕ್ಷೇತ್ರ ಹಾಗೂ ಉಪ ಮುಖ್ಯಮಂತ್ರಿ ಟಿ.ಎಸ್‌.ಸಿಂಗ್‌ ದೇವ್‌ ಅವರಿಗೆ ಅಂಬಿಕಾಪುರ ಕ್ಷೇತ್ರ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಹಾಲಿ ಸಂಸದ ದೀಪಕ್‌ ಬೈಜ್‌ ಅವರಿಗೆ ಚಿತ್ರಕೂಟದ ಟಿಕೆಟ್‌ ನೀಡಲಾಗಿದೆ.

ತೆಲಂಗಾಣದಲ್ಲಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಹಾಲಿ ಸಂಸದ ಅನುಮಾಲ ರೇವಂತ್‌ ರೆಡ್ಡಿ ಅವರಿಗೆ ಕೋಡಂಗಲ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಅವರಿಗೆ ಮಧಿರಾ ಕ್ಷೇತ್ರದ ಟಿಕೆಟ್‌ ನೀಡಿದೆ. ಹಾಲಿ ಸಂಸದ ಉತ್ತಮ ಕುಮಾರ್‌ ರೆಡ್ಡಿಗೆ ಹುಜೂರ್‌ನಗರ ಕ್ಷೇತ್ರದ ಟಿಕೆಟ್‌, ಪಕ್ಷದ ರಾಷ್ಟ್ರೀಯ ವಕ್ತಾರ ಪವನ್‌ ಖೇರಾ ಅವರ ಪತ್ನಿ ಕೋಟ ನೀಲಿಮಾ ಅವರಿಗೆ ಸನತ್‌ನಗರ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ.

ಛತ್ತೀಸ್‌ಗಢದಲ್ಲಿ ನ.7 ಹಾಗೂ 17ರಂದು, ಮಧ್ಯಪ್ರದೇಶದಲ್ಲಿ ನ.17ರಂದು ಹಾಗೂ ತೆಲಂಗಾಣದಲ್ಲಿ ನ.30ರಂದು ಮತದಾನ ನಡೆಯಲಿದೆ. ಡಿ.3ರಂದು ಫಲಿತಾಂಶ ಪ್ರಕಟವಾಗಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ