ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮ; ಯಾರಿಗೆಲ್ಲಾ ಸಿಗಲಿದೆ ಅವಕಾಶ?
ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಬಿಡುಗಡೆಗೊಳಿಸಿದೆ. ಬಾಕಿ ಉಳಿದ 21 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಈ ವಾರಾಂತ್ಯದಲ್ಲೇ ಎರಡನೇ ಪಟ್ಟಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ರಾಜ್ಯ ಕಾಂಗ್ರೆಸ್ ಗೆ ಕಗ್ಗಂಟಾಗಿದ್ದ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ನಾಯಕರು ಅಂತಿಮಗೊಳಿಸಿ, ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ (ಸಿಇಸಿ) ರವಾನಿಸಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಸಿಇಸಿ ಸಭೆಯ ಅನುಮೋದನೆ ಬಳಿಕ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಏಳು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಇದೀಗ ಎರಡನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
21 ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ?
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
ಬೆಂಗಳೂರು ಉತ್ತರ – ಪ್ರೊ.ರಾಜೀವ್‌ಗೌಡ
ಬೆಂಗಳೂರು ಸೆಂಟ್ರಲ್ -ಮನ್ಸೂರ್ ಆಲಿ ಖಾನ್
ಕಲಬುರಗಿ -ರಾಧಾಕೃಷ್ಣ ದೊಡ್ಡಮನಿ
ಬಳ್ಳಾರಿ -ವೆಂಕಟೇಶ ಪ್ರಸಾದ್
ಕೋಲಾರ -ಕೆ.ಎಚ್.ಮುನಿಯಪ್ಪ/ ಡಾ.ಎಲ್.ಹನುಮಂತಯ್ಯ
ಚಾಮರಾಜನಗರ -ಸುನಿಲ್ ಬೋಸ್
ಮೈಸೂರು -ಎಂ.ಲಕ್ಷ್ಮಣ್
ಚಿಕ್ಕಮಗಳೂರು- ಉಡುಪಿ -ಜಯಪ್ರಕಾಶ್ ಹೆಗ್ಡೆ
ದಕ್ಷಿಣ ಕನ್ನಡ -ಪದ್ಮರಾಜ್
ಚಿತ್ರದುರ್ಗ -ಬಿ.ಎನ್.ಚಂದ್ರಪ್ಪ
ಬೆಳಗಾವಿ -ಮೃಣಾಲ್ ಹೆಬ್ಬಾಳ್ಕರ್
ಚಿಕ್ಕೋಡಿ -ಪ್ರಿಯಾಂಕಾ ಜಾರಕಿಹೊಳಿ
ಹುಬ್ಬಳ್ಳಿ -ಧಾರವಾಡ -ವಿನೋದ್ ಅಸೂಟಿ
ಬಾಗಲಕೋಟೆ -ಸಂಯುಕ್ತ ಪಾಟೀಲ್
ಉತ್ತರಕನ್ನಡ -ಅಂಜಲಿ ನಿಂಬಾಳ್ಕರ್
ದಾವಣಗೆರೆ – ಲತಾ ಮಲ್ಲಿಕಾರ್ಜುನ
ಕೊಪ್ಪಳ -ರಾಜಶೇಖರ ಹಿಟ್ನಾಳ/ ಅಮರೇಗೌಡ ಬಯ್ಯಾಪುರ
ರಾಯಚೂರು -ಜಿ. ಕುಮಾರ ನಾಯ್ಕ್
ಬೀದರ್ – ರಾಜಶೇಖರ ಪಾಟೀಲ/ ಸಾಗರ್ ಬಿ. ಖಂಡ್ರೆ