Congress 2nd List: 43 ಅಭ್ಯರ್ಥಿಗಳ ಕಾಂಗ್ರೆಸ್ ನ 2ನೇ ಪಟ್ಟಿ ಪ್ರಕಟ..!
ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ನಾಲ್ಕು ರಾಜ್ಯಗಳ 43 ಅಭ್ಯರ್ಥಿಗಳ ಹೆಸರಿರುವ ಎರಡನೇ ಪಟ್ಟಿಯನ್ನು (Congress candidate list) ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕಾಂಗ್ರೆಸ್ನ ಮುಂಚೂಣಿ ನಾಯಕರ ಮಕ್ಕಳ ಹೆಸರುಗಳು ಪ್ರಧಾನವಾಗಿ ಕಂಡು ಬಂದಿದೆ. ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಪುತ್ರ ಗೌರವ್ ಗೊಗೊಯ್, ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಮತ್ತು ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಸೇರಿದಂತೆ ಕಾಂಗ್ರೆಸ್ನ ಹೊಸ ಪೀಳಿಗೆಯ ನಾಯಕರು ಕಾಣಿಸಿಕೊಂಡಿದ್ದಾರೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಹಂತದಲ್ಲಿ ಅದನ್ನು ಬಿಡುಗಡೆ ಮಾಡಿಲ್ಲ.
ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿತ್ತು. ಅದೀಗ ದೆಹಲಿ ತಲುಪಿದೆ. ಹೀಗಾಗಿ ಕರ್ನಾಟಕದ 28 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಮೂರನೇ ಹಂತದಲ್ಲಿ ಬಿಡುಗಡೆಗೊಳ್ಳಬಹುದು. ರಾಜಸ್ಥಾನದ ಜರೋಲ್ನಿಂದ ಸ್ಪರ್ಧಿಸಲಿರುವ ವೈಭವ್ ಗೆಹ್ಲೋಟ್ 2019 ರಲ್ಲಿ ಜೋಧ್ಪುಟ್ ಕ್ಷೇತ್ರದಿಂದ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ಸೋತಿದ್ದರು. ಇದಲ್ಲದೆ ರಾಜ್ಯದ ಮಾಜಿ ಪೊಲೀಸ್ ಮುಖ್ಯಸ್ಥ ಹರೀಶ್ ಮೀನಾ ಅವರು ಟೋಂಕ್-ಸವಾಯಿ ಮಾಧೋಪುರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿಯಿಂದ ಪಕ್ಷಾಂತರಗೊಂಡ ರಾಹುಲ್ ಕಸ್ವಾ ಚುರುವಿನಿಂದ ಮತ್ತು ಬ್ರಿಜೇಂದ್ರ ಓಲಾ ಜುಂಜುನುದಿಂದ ಕಣಕ್ಕೆ ಇಳಿಯುತ್ತಾರೆ.
The Congress Central Election Committee, under the leadership of Congress President Shri @kharge, has finalised the second list of candidates for the 2024 Lok Sabha elections. The panel has selected 43 candidates to contest from Assam, Gujarat, Madhya Pradesh, Rajasthan,… pic.twitter.com/cO9LY5wbpe
— Congress (@INCIndia) March 12, 2024
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅಸ್ಸಾಂನ ಜೋಹರ್ತ್ನಿಂದ, ನಕುಲ್ ನಾಥ್ ಮಧ್ಯಪ್ರದೇಶದ ಚಿಂದ್ವಾರದಿಂದ ಸ್ಪರ್ಧಿಸಲಿದ್ದಾರೆ.
ಈ ಪಟ್ಟಿಯಲ್ಲಿ 43 ಅಭ್ಯರ್ಥಿಗಳಲ್ಲಿ 10 ಸಾಮಾನ್ಯ ಅಭ್ಯರ್ಥಿಗಳು, 13 ಒಬಿಸಿ ಅಭ್ಯರ್ಥಿಗಳು, 10 ಎಸ್ಸಿ ಅಭ್ಯರ್ಥಿಗಳು, 9 ಎಸ್ಟಿ ಅಭ್ಯರ್ಥಿಗಳು ಮತ್ತು 1 ಮುಸ್ಲಿಂ ಅಭ್ಯರ್ಥಿ ಇದ್ದಾರೆ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು. “ನಾವು ಈಗಾಗಲೇ ಲೋಕಸಭಾ ಚುನಾವಣೆಗೆ ನಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದೇವೆ. ಇಂದು, ನಾವು ಎರಡನೇ ಪಟ್ಟಿಯನ್ನು ಪ್ರಕಟಿಸಲಿದ್ದೇವೆ. ನಿನ್ನೆ, ಸಿಇಸಿ ಸಭೆ ಸೇರಿ ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನದಿಂದ ಸುಮಾರು 43 ಹೆಸರುಗಳ ಪಟ್ಟಿಯನ್ನು ಅಂತಿಗೊಳಿಸಿದ್ದೇವೆ ಎಂದು ಕೆ.ಸಿ.ವೇಣುಗೋಪಾಲ್ ಮಂಗಳವಾರ ಹೆಸರುಗಳನ್ನು ಹೇಳಿದ್ದಾರೆ.
कांग्रेस अध्यक्ष श्री @kharge की अध्यक्षता में आयोजित CEC की बैठक में लोकसभा चुनाव, 2024 के लिए 43 लोकसभा सीटों पर कांग्रेस उम्मीदवारों की दूसरी लिस्ट जारी की गई। pic.twitter.com/kgWoEkzKt6
— Congress (@INCIndia) March 12, 2024