ಭಾನುವಾರ, ಜೂನ್ 9, 2024
ಸ್ಪೀಕರ್ ಯುಟಿ ಖಾದರ್ ಗೆ ಮಂತ್ರಿ ಸ್ಥಾನ ಸಿಗುತ್ತಾ? ರಾಜಕೀಯ ಪಡಸಾಲೆಯಲ್ಲಿ‌ ಜೋರಾಗಿದೆ ಸುದ್ದಿ!-4 ಜನ ಬೆಸ್ಕಾಂ ಸಿಬ್ಬಂದಿಗಳು ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ; ರಾತ್ರಿಯಿಡೀ ಮರದಲ್ಲಿ ನೇತಾಡಿದ ಗಾಯಾಳು ಬೆಳಿಗ್ಗೆ ಸಾವು..!-ಮಂಗಳೂರು ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರವರಿಗೆ ಸ್ವಬೂತ್ ನಲ್ಲಿ ಬಹುದೊಡ್ಡ ಹಿನ್ನಡೆ: ಇದರ ಹಿಂದೆ ಇದ್ದಾರೆ ಯುವ ಮುಖಂಡ ಪ್ರಕಾಶ್ ಪೂಜಾರಿ ಗರೋಡಿ-ಮಧ್ಯಂತರ ನಿರೀಕ್ಷಣಾ ಜಾಮೀನು ಬೆನ್ನಲ್ಲೇ ಎಸ್ಐಟಿ ವಿಚಾರಣೆಗೆ ಭವಾನಿ ರೇವಣ್ಣ ಹಾಜರು-ದಾಂಪತ್ಯ ಜೀವನದಲ್ಲಿ ವಿಚ್ಛೇದನಕ್ಕೆ ಮುಂದಾದರೇ ಚಂದನ ಶೆಟ್ಟಿ ಮತ್ತು ನಿವೇದಿತಾ ಗೌಡ..?-ಕಂಗನಾಗೆ ಕಪಾಳಮೋಕ್ಷ ಮಾಡಿ ಕೆಲಸ ಕಳೆದುಕೊಂಡಿದ್ದ ಸಿಬ್ಬಂದಿಗೆ ನಾನು ಕೆಲಸ ಕೊಡುತ್ತೇನೆ; ಗಾಯಕ ವಿಶಾಲ್ ದದ್ಲಾನಿ-ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಕುಲ್ವಿಂದರ್‌ ಕೌರ್‌ ಅರೆಸ್ಟ್‌-ಸಿನೆಮಾಗೆ ಗುಡ್ ಬೈ ಹೇಳಿ ರಾಜಕೀಯವನ್ನೇ ಮುನ್ನಡೆಸುತ್ತಾರಾ ನಿಖಿಲ್ ಕುಮಾರಸ್ವಾಮಿ..?-T20 World cup: ದೈತ್ಯ ಪಾಕಿಸ್ತಾನವನ್ನು ಸೋಲಿಸಿದ ಕ್ರಿಕೆಟ್ ಶಿಶು ಅಮೆರಿಕ-ಬಿಜೆಪಿ ವಿರುದ್ಧ ಅಪಪ್ರಚಾರ ಪ್ರಕರಣ; ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾದ ರಾಹುಲ್ ಗಾಂಧಿಗೆ ಜಾಮೀನು ಮಂಜೂರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದಿಢೀರ್ ರಾಜೀನಾಮೆ ಕೊಟ್ಟ ಚುನಾವಣಾ ಆಯುಕ್ತ ಅರುಣ್ ಗೋಯಲ್..!

Twitter
Facebook
LinkedIn
WhatsApp
ದಿಢೀರ್ ರಾಜೀನಾಮೆ ಕೊಟ್ಟ ಚುನಾವಣಾ ಆಯುಕ್ತ ಅರುಣ್ ಗೋಯಲ್..!

ಅಚ್ಚರಿ ಮತ್ತು ಆಘಾತಕಾರಿ ಬೆಳವಣಿಗೆಯಲ್ಲಿ ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಅರುಣ್ ಗೋಯಲ್(Arun Goel) ಅವರು ಶನಿವಾರ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಚುನಾವಣಾ ಆಯೋಗದಲ್ಲಿ ಈಗಾಗಲೇ ಒಂದು ಪ್ರಮುಖ ಹುದ್ದೆ ಖಾಲಿ ಇದ್ದು, ಅರುಣ್ ಗೋಯಲ್ ಅವರ ರಾಜೀನಾಮೆಯಿಂದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ ಆಯೋಗದಲ್ಲಿ ಉಳಿದಂತಾಗಿದೆ.

ಅರುಣ್ ಗೋಯಲ್ ಅವರು ಲೋಕಸಭೆ ಚುನಾವಣೆಯ ಸಿದ್ಧತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ವಿವಿಧ ರಾಜ್ಯಗಳಲ್ಲಿನ ತಯಾರಿಯ ಪರಿಶೀಲನೆಗಾಗಿ ಅವರು ನಿರಂತರ ಪ್ರವಾಸ ಕೈಗೊಂಡಿದ್ದರು. ಆದರೆ ಏಪ್ರಿಲ್- ಮೇ ತಿಂಗಳಲ್ಲಿ ಚುನಾವಣೆ ನಡೆಯಬೇಕಿದ್ದು, ಇದೇ ವಾರದ ಅಂತ್ಯದೊಳಗೆ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎನ್ನುವ ವರದಿಗಳ ನಡುವೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಅವರ ದಿಢೀರ್ ರಾಜೀನಾಮೆ ಅಚ್ಚರಿಗೆ ಕಾರಣವಾಗಿದೆ.

“ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರೆ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಚೇರಿ ಅವಧಿ) ಕಾಯ್ದೆ 2023ರ ಸೆಕ್ಷನ್ 11ರ 1 ನೇ ಪರಿಚ್ಛೇದದ ಅಡಿಯಲ್ಲಿ, ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಸಲ್ಲಿಸಿರುವ ರಾಜೀನಾಮೆಯನ್ನು 2024ರ ಮಾರ್ಚ್ 9ರಿಂದ ಜಾರಿಗೆ ಬರುವಂತೆ ರಾಷ್ಟ್ರಪತಿ ಅವರು ಅಂಗೀಕರಿಸಿದ್ದಾರೆ” ಎಂದ ಗೆಜೆಟ್ ಅಧಿಸೂಚನೆ ತಿಳಿಸಿದೆ.

1985ನೇ ಬ್ಯಾಚ್‌ನ ಪಂಜಾಬ್ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಅರುಣ್ ಗೋಯಲ್ ಅವರು 2022ರ ನವೆಂಬರ್ 18ರಂದು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಅದರ ಮರುದಿನವೇ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. 2022ರ ನವೆಂಬರ್ 21ರಂದು ಅವರು ಅಧಿಕಾರ ಸ್ವೀಕರಿಸಿದ್ದರು. ಅವರ ತರಾತುರಿಯ ನೇಮಕಾತಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಇಷ್ಟು ಅವಸರದ ತೀರ್ಮಾನಕ್ಕೆ ಕಾರಣವೇನು ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. 2027ರವರೆಗೂ ಅವರ ಅಧಿಕಾರಾವಧಿ ಇತ್ತು. ಗೋಯಲ್ ಅವರು ಈ ಹಿಂದೆ ಭಾರಿ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಗೋಯಲ್ ನೇಮಕಾತಿ ವಿರುದ್ಧದ ವಿಚಾರವನ್ನು ಸಾಂವಿಧಾನಿಕ ಪೀಠ ಪರಿಶೀಲನೆ ನಡೆಸಿತ್ತು. “ಅಂತಿಮಗೊಳಿಸಲಾದ ನಾಲ್ಕು ಹೆಸರುಳ ಪಟ್ಟಿಯನ್ನು ಕಾನೂನು ಸಚಿವಾಲಯ ಆಯ್ದುಕೊಂಡಿದೆ. ನವೆಂಬರ್ 18ರಂದು ಕಡತ ಸಿದ್ಧಪಡಿಸಿ, ಅದೇ ದಿನ ರವಾನಿಸಲಾಗಿದೆ. ಅದೇ ದಿನವೇ ಪ್ರಧಾನಿ ಕೂಡ ಹೆಸರನ್ನು ಶಿಫಾರಸುಗೊಳಿಸಿದ್ದಾರೆ. ಈ ಆವಸರ ಏಕೆ?” ಎಂದು ನ್ಯಾಯಪೀಠ ಪ್ರಶ್ನಿಸಿತ್ತು. ಆದರೆ ಗೋಯಲ್ ಅವರ ನೇಮಕಾತಿಯನ್ನು ರದ್ದುಗೊಳಿಸಲು ನಿರಾಕರಿಸಿದ್ದ ದ್ವಿಸದಸ್ಯ ಪೀಠ, ಕಳೆದ ವರ್ಷ ಅರ್ಜಿಯನ್ನು ವಜಾಗೊಳಿಸಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ