ಸಿಸಿಬಿ ಕಚೇರಿ ಬಳಿ ಕುಸಿದು ಬಿದ್ದ ಚೈತ್ರಾ ; ವಿಕ್ಟೋರಿಯ ಆಸ್ಪತ್ರೆಯ ಐಸಿಯು ಗೆ ಶಿಪ್ಟ್!

ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ (CCB Office) ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ.
ವಿಚಾರಣೆ ವೇಳೆ ಮೂರ್ಛೆ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚೈತ್ರಾ ಬಾಯಿಯಲ್ಲಿ ನೊರೆ ಬಂದ ದೃಶ್ಯ ಸೆರೆಯಾಗಿದೆ. ಈಗ ಬಂದಿರುವ ಮಾಹಿತಿ ಪ್ರಕಾರ ಚೈತ್ರಾ ಮೂರ್ಛೆ (Fits) ರೋಗದಿಂದ ಬಳಲುತ್ತಿದ್ದು, ಚಾರಣೆ ವೇಳೆ ಪ್ರಜ್ಞೆ ತಪ್ಪಿರುವ ಸಾಧ್ಯತೆಯಿದೆ.
ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?
ಬೆಂಗಳೂರು: ವಂಚನೆ ಪ್ರಕರಣದ (Fraud Case) ಎ1 ಆರೋಪಿ ಚೈತ್ರಾ ಕುಂದಾಪುರ (Chaithra Kundapura) ತನಿಖೆ ವೇಳೆ ಒಂದೊಂದೇ ವಿಚಾರವನ್ನು ಬಾಯ್ಬಿಡಲು ಶುರು ಮಾಡಿದ್ದಾಳೆ
ಆರೋಪಿ ಗಗನ್ ಹೇಳಿದಂತೆ ನಾನು ಮಾಡಿದ್ದೇನೆ. ಈ ವಿಚಾರದಲ್ಲಿ ನನಗೇನು ಗೊತ್ತಿಲ್ಲ ಎಂದು ಪೊಲೀಸರ (Police) ಮುಂದೆ ಹೇಳಿದ್ದಾಳೆ. ಈ ಹಿಂದೆ ಅರೆಸ್ಟ್ ಆದ ದಿನ, ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ. ಅದು ಐದು ಕೋಟಿ ರೂ. ಕೊಡ್ತಾರಾ? ಎಂದು ತನಿಖಾಧಿಕಾರಿ ಮುಂದೆ ಬಣ್ಣದ ಮಾತುಗಳನ್ನಾಡಿದ್ದಳು.
ಚೈತ್ರಾಳನ್ನು ಮುಂದೆ ಕೂರಿಸಿ ಉಳಿದ ಆರೋಪಿಗಳಿಗೆ ಸಿಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಈ ವೇಳೆ ಆಕೆ ವಿಚಾರಣೆ ನೋಡಿ ಒಂದೊಂದೆ ವಿಚಾರವನ್ನು ಬಾಯ್ಬಿಡಲು ಶುರು ಮಾಡಿದ್ದಾಳೆ. ನನಗೇನು ಗೊತ್ತಿಲ್ಲ ಮೇಡಂ, ಎಲ್ಲಾ ಗಗನ್ ಮಾಡಿರೋದು ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾಳೆ. ಇನ್ನಷ್ಟು ವಿಚಾರಣೆ ಆದ ಮೇಲೆ ಪ್ರಕರಣದಲ್ಲಿ ಆಕೆಯ ಪಾತ್ರವೂ ಹೊರ ಬರುವ ಸಾಧ್ಯತೆ ಇದೆ.