ಗುರುವಾರ, ಮಾರ್ಚ್ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಾಗರಹಾವು ಕಚ್ಚಿಸಿ ಪ್ರಿಯಕರನ ಕೊಲೆ ಮಾಡಿಸಿದ ಯುವತಿ!

Twitter
Facebook
LinkedIn
WhatsApp
905074751b132cc8d18bb788cf60f6d6 1

ಡೆಹ್ರಾಡೂನ್‌: ಯುವತಿಯೊಬ್ಬಳು ತನ್ನ ಗೆಳೆಯನ ಜತೆಗೂಡಿ ಪ್ರಿಯಕರನನ್ನೇ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವ ಆಘಾತಕಾರಿ ಪ್ರಕರಣ ಉತ್ತರಾಖಂಡ್‌ನಲ್ಲಿ ನಡೆದಿದೆ. ಘಟನೆ ಬಳಿಕ ಪ್ರಿಯತಮೆ ತನ್ನ ಗೆಳೆಯನ ಜೊತೆ ನೇಪಾಳಕ್ಕೆ ಪರಾರಿಯಾಗಿದ್ದಾಳೆ. ಇಲ್ಲಿನ ರಾಂಪುರ ನಿವಾಸಿ ಅಂಕಿತ್‌ ಚೌಹಾಣ್‌ (32) ಮತ್ತು ಆರೋಪಿ ಮಹಿ ಡೇಟಿಂಗ್‌ ಮಾಡುತ್ತಿದ್ದರು. ಅಂಕಿತ್‌ ಯುವ ಉದ್ಯಮಿಯಾಗಿದ್ದು ಮಹಿಯನ್ನು ಪ್ರೀತಿಸುತ್ತದ್ದ. ಆದರೆ ಮಹಿಗೆ ಆತ ತನ್ನ ಜೀವನದಲ್ಲಿ ಹಸ್ತಕ್ಷೇಪ ಮಾಡುವುದು ಇಷ್ಟವಿರಲಿಲ್ಲ. ಹೀಗಾಗಿ ತನ್ನ ಇನ್ನೊಬ್ಬ ಸ್ನೇಹಿತನ ಜೊತೆ ಸೇರಿ ಅಂಕಿತ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು.

ಜು.15 ರಂದು ಕಾರಿನ ಹಿಂಬದಿ ಸೀಟಲ್ಲಿ ಅಂಕಿತ್‌ ಶವವಾಗಿ ಪತ್ತೆಯಾಗಿದ್ದ. ಈ ವೇಳೆ ಕಾರಿನ ಏಸಿಯಿಂದ ಕಾರ್ಬಬ್‌ ಮೊನಾಕ್ಸೈಡ್‌ ಹೊರಹೊಮ್ಮುತ್ತಿದ್ದರಿಂದ ಆತ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ ಎಂದು ಭಾವಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ 2 ಕಾಲುಗಳಿಗೆ ಹಾವು (Snake) ಕಚ್ಚಿ ಅಂಕಿತ್‌ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದ್ದು. ಬಳಿಕ ಅಂಕಿನ್‌ನ ಸೋದರಿ ನೀಡಿದ ದೂರಿನ ಆಧಾರದಲ್ಲಿ ತನಿಖೆ (Enquiry) ನಡೆಸಿದಾಗ ಮಹಿ, ಹಾವಾಡಿನೊಬ್ಬನಿಗೆ ಕರೆ ಮಾಡಿದ್ದು ಬೆಳಕಿಗೆ ಬಂದಿತ್ತು. 

ಪೊಲೀಸರು ಆತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಮಹಿ ಮನೆಗೆ ಅಂಕಿತ್‌ ಭೇಟಿ ನೀಡಿದಾಗ ಆತನ ಕಾಲಿಗೆ ಎರಡು ಬಾರಿ ಹಾವಿನಿಂದ (Snake) ಕಡಿಸಿದ್ದೆ. ಇದಕ್ಕಾಗಿ ಮಹಿ ನನಗೆ 10000 ನೀಡಿದ್ದಳು ಎಂದು ಹಾವಾಡಿಗ ಒಪ್ಪಿಕೊಂಡಿದ್ದಾನೆ. ಅಂಕಿತ್‌ಗೆ ಕುಡಿತದ ಚಟ ಇದ್ದ ಕಾರಣ, ಆತ ಕುಡಿದ ಮತ್ತಿನಲ್ಲಿ ಇದ್ದಾಗ ಹಾವಿನಿಂದ ಕಡಿಸಿರಬಹುದು ಎನ್ನಲಾಗಿದೆ. ಇದಾದ ಬಳಿಕ ಆತನ ದೇಹ (Body)ವನ್ನು ಕಾರಿನಲ್ಲಿಟ್ಟು ಆಕಸ್ಮಿಕ ಸಾವಿನ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿಂದೆ ಕೇರಳದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿತ್ತು. 

ವಿಷಸರ್ಪ ಕಚ್ಚಿಸಿ ಮಡದಿಯನ್ನೇ ಸಾಯಿಸಿದ್ದ, ತನಿಖೆಯಿಂದ ಬಯಲಾಗಿತ್ತು ಸತ್ಯ
ಕೇರಳದಲ್ಲೊಬ್ಬ ವ್ಯಕ್ತಿ ವರ್ಷಗಳ ಹಿಂದೆ ವಿಷಸರ್ಪದಿಂದ ಕಚ್ಚಿಸಿ ಮುದ್ದಿನ ಮಡದಿಯನ್ನೇ ಸಾಯಿಸಿದ್ದ. ಒಂದು ಸಾರಿ ಹಾವು ಕಚ್ಚಿಸಿ ಆಕೆ ಬದುಕುಳಿದಾಗ ಆಸ್ಪತ್ರೆಯಲ್ಲಿ ಆಕೆಯ ಆರೈಕೆ ಮಾಡಿದಂತೆ ನಟಿಸಿದ್ದ. ಮತ್ತೆ ಹಾವನ್ನು ತರಿಸಿ ಆಕೆಯನ್ನು ಸಾಯಿಸಿದ್ದ ಅಳುತ್ತಾ ನಿಂತಿದ್ದ ಗಂಡನೇ ಕೊಲೆ ಮಾಡಿದ್ದಾನೆಂಬ ರಹಸ್ಯ ವಾರಗಳ ತನಿಖೆಯ ನಂತರವಷ್ಟೇ ಬಯಲಿಗೆ ಬಂದಿತ್ತು. 

ಕೇರಳದಲ್ಲಿ 2020ರಲ್ಲಿ ಈ ಘಟನೆ ನಡೆದಿತ್ತು. ಕೊಲ್ಲಂ ನಿವಾಸಿ ಸೂರಜ್‌ ನಾಗರಹಾವನ್ನು ಬಳಸಿ ಪತ್ನಿಯನ್ನು ಕೊಲೆಗೈದಿದ್ದ. ಈ ವಿಚಾರ ದೇಶಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದು ಸ್ವಾಭಾವಿಕ ಹಾವು ಕಡಿತದಿಂದ ಉಂಟಾದ ಸಾವು ಎಂದೇ ಮೊದಲು ಅಂದುಕೊಳ್ಳಲಾಗಿತ್ತು. ಆದರೆ ತನಿಖೆ (Investigation) ಮಾಡುತ್ತಾ ಹೋದಂತೆ ಎಲ್ಲವೂ ಬಯಲಾಗುತ್ತಾ ಹೋಯಿತು. ಪತ್ನಿಯ ಸಾವಿನಿಂದ ಅಳುತ್ತಾ ನಿಂತಿದ್ದ ಗಂಡನೇ ಆಕೆಯ ಸಾವಿನ ಹಿಂದಿದ್ದ ಎಂಬುದು ಬಯಲಾಯ್ತು. ಪತ್ನಿಯನ್ನು ಕೊಲೆ (Murder) ಮಾಡಲು ಸೂರಜ್‌ ಹಾವನ್ನು ಬಳಸಿದ್ದ. ವಿಷಸರ್ಪವನ್ನು ಬಳಸಿ ಆಕೆಯ ಜೀವ ತೆಗೆದಿದ್ದ. 

ಘಟನೆಯ ವಿವರ:
ಕೊಲ್ಲಂ ಜಿಲ್ಲೆಯ ಅಂಚಲಾ ಎಂಬಲ್ಲಿ 25 ವರ್ಷದ ಉತ್ತರಾ, ಮೇ 7, 2020ರಂದು ಗಂಡನ (Husband) ಮನೆಯಲ್ಲಿ ಮಲಗಿದ್ದಲ್ಲಿಯೇ ಹಾವು ಕಡಿತದಿಂದ ಮೃತಪಟ್ಟಿದ್ದರು. ಆಕೆ ಮಲಗಿದ್ದಲ್ಲಿಯೇ ಹಾವು ಬಂದು ಕಚ್ಚಿ ಆಕೆಯ ಸಾವಾಗಿತ್ತು. ಆಕೆಗೆ ಈ ಹಿಂದೆಯೂ ಒಂದು ಸಾರಿ ಹಾವು ಕಚ್ಚಿ ಆಸ್ಪತ್ರೆಗೆ (Hospital) ದಾಖಲಾಗಿ ಚೇತರಿಸಿಕೊಂಡು ಬಂದಿದ್ದರು. ಹೀಗಾಗಿ ಜನರು ಸರ್ಪದೋಷದಿಂದಲೇ ಹೀಗಾಗಿದೆ ಎಂದು ಮಾತನಾಡಿಕೊಂಡಿದ್ದರು. ಆಕೆಯ ಸಾವು ಸಾಕಷ್ಟು ಪ್ರಶ್ನೆಗಳನ್ನು ಬಳಸಿಕೊಂಡು ನಿಗೂಢವಾಗಿಯೇ ಉಳಿದಿತ್ತು. ಆದರೆ ಉತ್ತರಾ ಪೋಷಕರು ಗಂಡನ ಕೈವಾಡವಿರುವುದರ ಬಗ್ಗೆ ಆರೋಪಿಸಿದರು. ಪೊಲೀಸರು ತನಿಖೆ ನಡೆಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.

ಪತ್ನಿ ಜತೆ ಅಕ್ರಮ ಸಂಬಂಧ ಶಂಕೆ; ನೌಕರನಿಂದ ಹೊಟೇಲ್ ಕ್ಯಾಷಿಯರ್ ಹತ್ಯೆ

ಬೆಂಗಳೂರು (ಜು.21) :  ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಹೋಟೆಲ್‌ವೊಂದರ ಕ್ಯಾಶಿಯರ್‌ನನ್ನು ಅದೇ ಹೋಟೆಲ್‌ನ ಸ್ವಚ್ಛತಾ (ಹೌಸ್‌ಕೀಪರ್‌) ಕೆಲಸಗಾರ ಹತ್ಯೆಗೈದು ಪರಾರಿಯಾಗಿರುವ ಘಟನೆ ಜೆ.ಬಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಮರುಗೇಶ್‌ ಪಾಳ್ಯದ ಸಿಟಾಡೆಲ್‌ ಹೋಟೆಲ್‌ನ ಕ್ಯಾಶಿಯರ್‌ ಸುಭಾಷ್‌ (26) ಹತ್ಯೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿ ಅಭಿಷೇಕ್‌ ಪತ್ತೆಗೆ ತನಿಖೆ ನಡೆದಿದೆ. ಹೋಟೆಲ್‌ ಆವರಣದ ಸೋಫಾ ಮೇಲೆ ಮಲಗಿದ್ದಾಗ ಸುಭಾಷ್‌ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದು ಅಭಿಷೇಕ್‌ ಪರಾರಿಯಾಗಿದ್ದಾನೆ. ಈ ಚೀರಾಟ ಕೇಳಿ ಹೋಟೆಲ್‌ ಸಿಬ್ಬಂದಿ ಜಮಾಯಿಸುತ್ತಿದ್ದಂತೆ ಆತ ಕಾಲ್ಕಿತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
 

ದರೋಡೆ ಎಂಬಂತೆ ಬಿಂಬಿಸಲು ಯತ್ನ:

ಸಿಟಡೆಲ್‌ ಹೋಟೆಲ್‌ನಲ್ಲಿ ತಿಂಗಳ ಹಿಂದೆ ಪಶ್ಚಿಮ ಬಂಗಾಳ ಮೂಲದ ಸುಭಾಷ್‌ ಕೆಲಸಕ್ಕೆ ಸೇರಿದ್ದು, ಹೋಟೆಲ್‌ನಲ್ಲೇ ಆತ ವಾಸವಾಗಿದ್ದ. ಇನ್ನು ಅದೇ ಹೋಟೆಲ್‌ನಲ್ಲಿ ಆರು ತಿಂಗಳಿಂದ ಪಶ್ಚಿಮ ಬಂಗಾಳದ ಅಭಿಷೇಕ್‌ ಹೌಸ್‌ಕೀಪರ್‌ ಆಗಿದ್ದ. ಒಂದೇ ರಾಜ್ಯದವರಾಗಿದ್ದರಿಂದ ಇಬ್ಬರ ಮಧ್ಯೆ ಆತ್ಮೀಯತೆ ಮೂಡಿದೆ. ಆಗ ಗೆಳೆಯನ ಪತ್ನಿ ಪರಿಚಯವಾಗಿ ಸುಭಾಷ್‌ಗೆ ಸಲುಗೆ ಬೆಳೆದಿದೆ. ಈ ಸ್ನೇಹದ ವಿಚಾರ ತಿಳಿದು ಕೋಪಗೊಂಡ ಅಭಿಷೇಕ್‌, ಪತ್ನಿಗೆ ಸುಭಾಷ್‌ ಸಹವಾಸ ಬಿಡುವಂತೆ ತಾಕೀತು ಮಾಡಿದ್ದ. ಅಲ್ಲದೆ ಗೆಳೆಯನಿಗೂ ಸಹ ತನ್ನ ಸಂಸಾರದಲ್ಲಿ ಎರವಾಗದಂತೆ ಆತ ಎಚ್ಚರಿಕೆ ನೀಡಿದ್ದ. ಹೀಗಿದ್ದರೂ ಪತ್ನಿ ಜತೆ ಸುಭಾಷ್‌ ಸ್ನೇಹ ಮುಂದುವರೆಸಿದ್ದ ಅಭಿಷೇಕ್‌ನನ್ನು ಕೆರಳಿಸಿತು. ಈ ಹಿನ್ನಲೆಯಲ್ಲಿ ಕೊನೆಗೆ ಗೆಳೆಯನ ಹತ್ಯೆ ನಿರ್ಧರಿಸಿದ ಅಭಿಷೇಕ್‌, ಹೋಟೆಲ್‌ ರಾತ್ರಿ ಪಾಳಿಯದಲ್ಲಿದ್ದ ನಸುಕಿನಲ್ಲಿ ನಿದ್ರೆಯಲ್ಲಿದ್ದ ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣ ದೋಚಿದ ಆರೋಪಿ

ಈ ಹತ್ಯೆ ಬಳಿಕ ಹೋಟೆಲ್‌ ಗಲ್ಲಾದ ಪೆಟ್ಟಿಗೆಯಲ್ಲಿದ್ದ ಹಣ ದೋಚಿ ಆರೋಪಿ ಪರಾರಿಯಾಗಿದ್ದಾನೆ. ಅಲ್ಲದೆ ಕೊಲೆಗೂ ಮುನ್ನ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾವನ್ನು ಸಹ ಜಖಂಗೊಳಿಸಿದ್ದಾನೆ. ಹೀಗಾಗಿ ಮೇಲ್ನೋಟಕ್ಕೆ ದರೋಡೆ ಕೃತ್ಯ ಎಂಬಂತೆ ಬಿಂಬಿಸಲು ಆತ ಯತ್ನಿಸಿದ್ದಾನೆ ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist