ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸಿಎಂ ಸಿದ್ದರಾಮಯ್ಯ ಭೇಟಿಯಾದ ಅಶ್ವಿನಿ ಪುನೀತ್ ರಾಜ್‌ಕುಮಾರ್

Twitter
Facebook
LinkedIn
WhatsApp
ಸಿಎಂ ಸಿದ್ದರಾಮಯ್ಯ ಭೇಟಿಯಾದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಸ್ಯಾಂಡಲ್‌ವುಡ್ (Sandalwood) ನಟ ಪುನೀತ್ ಪತ್ನಿ ಅಶ್ವಿನಿ ರಾಜ್‌ಕುಮಾರ್, ಇಂದು (ಅ.8) ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ನೀಡಿದ್ದಾರೆ. ಈ ಕುರಿತ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಪಿಆರ್‌ಕೆ ಪ್ರೋಡಕ್ಷನ್ ರೂವಾರಿ, ನಿರ್ಮಾಪಕಿ ಅಶ್ವಿನಿ(Ashwini Rajkumar) ಅವರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದರು. ಬಳಿಕ ಖಾಸಗಿ ಕಾರ್ಯಕ್ರಮವೊಂದಕ್ಕೆ ಸಿಎಂ ಅವರನ್ನು ಅಶ್ವಿನಿ ಆಹ್ವಾನಿಸಿದ್ದರು

ಈ ಸಂದರ್ಭದಲ್ಲಿ, ನಗರಾಭಿವೃದ್ಧಿ ಬೈರತಿ ಸುರೇಶ್, ಮಾಜಿ ಸಚಿವ ಹೆಚ್.ಎಂ ರೇವಣ್ಣ ಉಪಸ್ಥಿತರಿದ್ದರು.

ಮೃತರ ಕುಟುಂಬಕ್ಕೆ ಸಹಾಯ ಮಾಡುವೆ: ನಟ ನಾಗಭೂಷಣ್

ಪಘಾತದ (Car Accident) ಬಳಿಕ ನಟ ನಾಗಭೂಷಣ್ (Nagabhushan) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ನಿನ್ನೆ ಸುದ್ಧಿಗೋಷ್ಠಿ ಆಯೋಜಿಸಿದ್ದು ಘಟನೆ ಬಗ್ಗೆ ವಿವರಿಸಿದರು. ಆ ಕುಟುಂಬಕ್ಕೆ ಆದ ನೋವು ಎನ್ನುವುದು ನನಗೆ ಅರಿವಿದೆ. ಅವರ ಕುಟುಂಬದ ಹತ್ತಿರದವರ ಜೊತೆ ಮಾತನಾಡಿದ್ದೇವೆ. ಆ ಕುಟುಂಬಕ್ಕೆ ಏನು ಸಹಾಯ ಬೇಕಿದ್ದರೂ ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ನಾಗಭೂಷಣ್ ಜೊತೆ ಅವರ ಪರ ವಕೀಲರಾದ ದಿಲೀಪ್ ಪತ್ರಿಕಾಗೋಷ್ಠಿಯಲ್ಲಿದ್ದರು. ನಾಗಭೂಷಣ್ ಮಾತನಾಡಿ, ಹಿಟ್ ಅಂಡ್ ರನ್ ಅಂತ ಹೇಳಬೇಡಿ, ಅಪಘಾತ ಬಳಿಕ ನಾನೇ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದು ಎಂದು ಭಾವುಕರಾದರು. ಘಟನೆ ನಡೆದು ಅನೇಕ ದಿನಗಳ ಬಳಿಕ ನಿಮ್ಮ ಮುಂದೆ ಬಂದಿದ್ದೀನಿ, ನನಗೆ ಆ ಘಟನೆ ಅರಗಿಸಿಕೊಳ್ಳಲು ಇನ್ನೂ ಸಮಯ ಬೇಕು. ಹಾಗಾಗಿ ನಾನು ತಡವಾಗಿ ಮಾತನಾಡುತ್ತಿದ್ದೀನಿ ಎಂದು ಹೇಳಿದರು.

‘ಕೋಣನಕುಂಟೆ ಕ್ರಾಸ್ ಬಳಿ ಘಟನೆ ನಡೆದಿದ್ದು, ಅವರು ನನ್ನ ಕಾರಿಗೆ ದಿಢೀರ್ ಅಂತ ಅಡ್ಡ ಬಂದರು ಅಪಘಾತವಾಯಿತು ಬಳಿಕ ನಾನೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದೆ. ಆಸ್ಪತ್ರೆಗೆ ಹೋಗುವಾಗ ಪೋಲಿಸರಿಗೆ ನಾನೆ ಫೋನ್ ಮಾಡಿ ಘಟನೆ ಬಗ್ಗೆ ವಿವರಿಸಿದೆ’ ಎಂದು ಹೇಳಿದರು. ಪೊಲೀಸರು ಗಾಯಾಳುಗಳ ಸಂಬಂಧಿಗಳ ಮುಂದೆಯೇ ಆಲ್ಕೋಹಾಲ್ ಪರೀಕ್ಷೆ ಹಾಗೂ ರಕ್ತ ಪರೀಕ್ಷೆ ಮಾಡಿಸಿದರು ನಂತರ ನಾನು ಆಸ್ಪತ್ರೆಯಿಂದ ಪೊಲೀಸ್ ಸ್ಟೇಷನ್‌ಗೆ ಹೋದೆ ಬೆಳಗ್ಗೆ ಸ್ಟೇಷನ್ ಬೇಲ್ ಮೂಲಕ ಹೊರಬಂದೆ’ ಎಂದು ಘಟನೆ ವಿವರಿಸಿದರು.

ದುರಂತ ಎಂದರೆ ನಾಗಭೂಷಣ್ ತಂದೆ ಕೂಡ ಹಿಟ್ ಅಂಡ್ ರನ್ ಪ್ರಕರಣಲ್ಲಿಯೇ ನಿಧನಹೊಂದಿದ್ದು. ತಂದೆಯ ಸಾವನ್ನು ನೆನಪಿಸಿಕೊಂಡ ನಾಗಭೂಷಣ್ ‘ಕಳೆದುಕೊಂಡ ನೋವು ಏನು ಅಂತ ನನಗೆ ಗೊತ್ತಿದೆ. ನನ್ನ ತಂದೆ ಕೂಡ ಅಪಘಾತದಲ್ಲಿಯೇ ನಿಧನರಾಗಿದ್ದು. ಅವರನ್ನು ಸಾಯಿಸಿದ್ದು ಯಾರು ಅಂತ ಇವತ್ತಿಗೂ ನಮಗೆ ಗೊತ್ತಿಲ್ಲ. ಆದರೀಗ ನಾನು ಅವರ ನೋವಿನಲ್ಲಿ ಭಾಗಿಯಾಗಿದ್ದೀನಿ’ ಎಂದು ಭಾವುಕರಾದರು.

ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದೇವೆ. ನನ್ನ ಕೈಯಲ್ಲಿ ಏನು ಸಹಾಯ ಮಾಡಲು ಸಾಧ್ಯವಾಗುತ್ತೊ ನಾನು ಖಂಡಿತ ಮಾಡುತ್ತೇನೆ. ಈ ಸಮಯದಲ್ಲಿ ನಾನು ಇನ್ನೇನು ಮಾಡಲು ಸಾಧ್ಯ ಎಂದು ನಾಗಭೂಷಣ್ ಭಾವುಕರಾದರು. ಇದೇ ಸಮಯದಲ್ಲಿ ಅಪಘಾತ ಮಾಡಿದರೆ ದಯವಿಟ್ಟು ಯಾರು ಓಡಿ ಹೋಗಬೇಡಿ ಎಂದು ಮನವಿಮಾಡಿದರು. ಇದರಿಂದ ಹೊರಬರಲು ನನಗೆ ಸಮಯ ಬೇಕು . ನಂತರ ಮತ್ತೆ ನಿಮಗೆ ಸಿಗುತ್ತೇನೆ ಎಂದರು

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ