9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ; ಕೋಚಿಂಗ್ ಆಪರೇಟರ್ ನಿಂದ ಹತ್ಯೆ!
ವಾರಣಸಿ ನಿವಾಸಿಯಾಗಿರುವ 9ನೇ ತರಗತಿ ವಿದ್ಯಾರ್ಥಿನಿ ಕೋಚಿಂಗ್ ಸೆಂಟರ್ ಸೇರಿಕೊಂಡಿದ್ದಾಳೆ. ಕೋಚಿಂಗ್ ಆಪರೇಟರ್ 43 ವರ್ಷದ ಸಂಜಯ್ ಪಟೆಲ್ ಈ ವಿದ್ಯಾರ್ಥಿನಿ ಮೇಲೆ ಕಣ್ಣು ಹಾಕಿದ್ದಾನೆ. ಪುಸಲಾಯಿಸಿ ಸ್ನೇಹ ಬೆಳೆಸಿದ್ದಾನೆ. ಬಳಿಕ ಒಳ್ಳೆ ಕೆಲಸ, ಉತ್ತಮ ವಿಧ್ಯಾಭ್ಯಾಸ ಸೇರಿದಂತೆ ಹಲವು ಆಮಿಷಗಳನ್ನು ಒಡ್ಡಿದ್ದಾನೆ. ಇಷ್ಟೇ ಅಲ್ಲ ಕೆಲ ಫೋಟೋಗಳನ್ನು ಎಡಿಟ್ ಮಾಡಿ ಬೆದರಿಕೆ ತಂತ್ರವನ್ನೂ ಉಪಯೋಗಿಸಿದ್ದಾನೆ.
ಪ್ರತಿ ದಿನ ಸಂಜೆ ಕೋಚಿಂಗ್ ಸೆಂಟರ್ಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಪರಿಣಾಮ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ಗರ್ಭಿಣಿಯಾದ ಮಾಹಿತಿ ತಿಳಿಯುತ್ತದ್ದಂತೆ ವಿದ್ಯಾರ್ಥಿನಿ ಆತಂಕಗೊಂಡಿದ್ದಾಳೆ. ಈ ಮಾಹಿತಿಯನ್ನು ಕೋಚಿಂಗ್ ಆಪರೇಟರ್ ಸಂಜಯ್ ಪಟೇಲ್ಗೆ ತಿಳಿಸಿದ್ದಾಳೆ. ಇತ್ತ ಸಂಜಯ್ ಪಟೇಲ್ ಅಬಾರ್ಶನ್ ಮಾಡಿಸಿಕೊಂಡು ಬರಲು ಸೂಚಿಸಿದ್ದಾನೆ. ವಿದ್ಯಾರ್ಥಿನಿಗೆ ಪೋಷಕರಲ್ಲೂ ಹೇಳಲು ಆಗದೆ, ಇತ್ತ ಏಕಾಂಗಿಯಾಗಿ ಹೋಗಿ ಅಬಾರ್ಶನ್ ಮಾಡಿಸಿಕೊಳ್ಳಲು ಸಾಧ್ಯವಾಗದೇ ವಿದ್ಯಾರ್ಥಿನಿ ನೊಂದಿದ್ದಾಳೆ.
ಅಬಾರ್ಷನ್ ಮಾಡದೆ ಇದ್ದ ಕಾರಣ ಆಕ್ರೋಶಗೊಂಡ ಸಂಜಯ್ ಪಟೇಲ್ ಅಬಾರ್ಶನ್ ಮಾಡಿಸಿಕೊಂಡಿಲ್ಲ ಎಂದು ವಿದ್ಯಾರ್ಥಿನಿ ಬಾಯಿಗೆ ಪಾಲಿಥಿನ್ ಬಟ್ಟೆ ತುರುಕಿಸಿ ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕೆ ಆಯೆಕ ಮೃತದೇಹವನ್ನು ಪ್ಯಾಕ್ ಮಾಡಿ ರೈಲಿನ ಬೋಗಿಯಲ್ಲಿ ಇಟ್ಟು ಪರಾರಿಯಾಗಿದ್ದಾನೆ.
ರೈಲಿನಲ್ಲಿನ ಅನಾಥ ಪ್ಯಾಕೇಜ್ ನೋಡಿದ ಅಧಿಕಾರಿಗಳು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಸಿಸಿಟಿವಿ ಪರಿಶೀಲಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಬಳಿಕ ಆರೋಪಿ ಸಂಜಯ್ ಪಾಟೀಲ್ ಅರೆಸ್ಟ್ ಮಾಡಿದ್ದಾರೆ.ವಿಚಾರಣೆ ವೇಳೆ ನಡೆದ ಘಟನೆ ಬಹರಂಗವಾಗಿದೆ.