ಸಿವಿಲ್ ಸರ್ವೀಸ್ ವಿದ್ಯಾರ್ಥಿ ಕೋಚಿಂಗ್ ತರಗತಿಯಲ್ಲಿ ಕುಳಿತಿರುವಾಗಲೇ ಹೃದಯಾಘಾತದಿಂದ ಸಾವು.!

ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ಸಿವಿಲ್ ಸರ್ವಿಸ್ (civil service) ವಿದ್ಯಾರ್ಥಿಯೊಬ್ಬ (MPPSC student) ಕೋಚಿಂಗ್ ತರಗತಿಯಲ್ಲಿ ಕುಳಿತಿರುವಾಗಲೇ ಹೃದಯಾಘಾತದಿಂದ ಬುಧವಾರ ಸಂಜೆ ಸಾವನ್ನಪ್ಪಿದ್ದಾನೆ. ಇದರ ದೃಶ್ಯ ತರಗತಿಯ ಸಿಸಿಟಿವಿಯಲ್ಲಿ (Viral video) ಸೆರೆಯಾಗಿದೆ.
ಇಂದೋರ್ ನಗರದ ಭನ್ವಾರ್ಕುವಾನ್ ಪ್ರದೇಶದ ನಿವಾಸಿ ಮಾಧವ್ (18), ಮಧ್ಯಪ್ರದೇಶ ಲೋಕಸೇವಾ ಆಯೋಗದ (ಎಂಪಿಪಿಎಸ್ಸಿ) ಪ್ರವೇಶ ಪರೀಕ್ಷೆಗೆ ಓದುತ್ತಿದ್ದರು. ನಗರದ ಹಲವಾರು ಕೋಚಿಂಗ್ ಸೆಂಟರ್ಗಳಲ್ಲಿ ಒಂದರಲ್ಲಿ ತರಗತಿಗೆ ಹಾಜರಾಗಿದ್ದ ಈತ ತರಗತಿಯಲ್ಲಿ ಕುಳಿತಿರುವಾಗಲೇ ಎದೆನೋವು ಕಾಣಿಸಿಕೊಂಡು ಕುಸಿದರು. ತರಗತಿಯ ಸಿಸಿಟಿವಿ ದೃಶ್ಯಾವಳಿ ಈ ದುಃಖಕರ ಘಟನೆಯನ್ನು ಸೆರೆಹಿಡಿದಿದೆ.
ವಿಡಿಯೋದಲ್ಲಿ, ಕಪ್ಪು ಶರ್ಟ್ ಧರಿಸಿರುವ ಯುವಕ, ತರಗತಿಯಲ್ಲಿ ಕಿಕ್ಕಿರಿದ MPPSC ಆಕಾಂಕ್ಷಿಗಳ ಮಧ್ಯೆ ಕುಳಿತಿದ್ದಾನೆ. ತರಗತಿಯಲ್ಲಿ ನೂರಾರು ವಿದ್ಯಾರ್ಥಿಗಳು ಕೈಕಾಲು ಅಲ್ಲಾಡಿಸಲೂ ಜಾಗವಿಲ್ಲದಂತೆ ಇಕ್ಕಟ್ಟಾಗಿ ಕುಳಿತಿರುವುದು ವಿಡಿಯೋದಲ್ಲಿದೆ. 32 ಸೆಕೆಂಡ್ಗಳ ವೀಡಿಯೊದಲ್ಲಿ, ಆರಂಭದಲ್ಲಿ ಮಾಧವ್ ಎಲ್ಲರಂತೆ ಸಹಜವಾಗಿದ್ದು, ಕೊನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದಿದ್ದಾರೆ. ತನ್ನ ಮೇಜಿನ ಮೇಲೆ ಕುಸಿದ ಆತ ಅಸ್ವಸ್ಥತೆಯಲ್ಲಿರುವಂತೆ ತೋರಿದ್ದು, ಅವನ ಪಕ್ಕದಲ್ಲಿ ಕುಳಿತಿದ್ದ ಯುವಕ ಮಾಧವ್ನ ಬೆನ್ನನ್ನು ಸವರಿದ್ದಾನೆ. ಮತ್ತು ನೋವು ಇದೆಯೇ ಎಂದು ಕೇಳಿದ್ದಾನೆ.
#WATCH | MPPSC Student Suffers Heart Attack In Coaching Class In #Indore, Dies #MadhyaPradesh #MPNews pic.twitter.com/gzWoo1YMrS
— Free Press Madhya Pradesh (@FreePressMP) January 18, 2024
ಮಾಧವ್ ಇನ್ನೂ ನೋವಿನಿಂದ ಬಳಲುತ್ತಿರುವಂತೆ, ಅವನ ಸ್ನೇಹಿತ ಟೀಚರ್ ಗಮನ ಸೆಳೆಯಲು ಯತ್ನಿಸಿದ್ದಾನೆ. ಕೆಲವು ಸೆಕೆಂಡುಗಳ ನಂತರ ಮಾಧವ್ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಅವನ ಮೇಜಿನಿಂದ ಜಾರಿ ನೆಲದ ಮೇಲೆ ಬಿದ್ದಿದ್ದಾನೆ. ಗಾಬರಿಗೊಂಡ ಇತರ ವಿದ್ಯಾರ್ಥಿಗಳು ಸಹಾಯ ಮಾಡಲು ಧಾವಿಸಿದ್ದಾರೆ. ಮಾಧವ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ನಂತರ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿದ್ದಾನೆ.
ಮಾಧವ್ ಅವರ ಸಾವು ಮತ್ತೆ ʼಸೈಲೆಂಟ್ ಹಾರ್ಟ್ ಅಟ್ಯಾಕ್’ಗಳ (silent heart attack) ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಕಳೆದ ಕೆಲವು ವಾರಗಳಲ್ಲಿ ಇಂದೋರ್ನಲ್ಲಿ ಇದು ಕನಿಷ್ಠ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಹರಾನಿ ಸರೋವರದಲ್ಲಿ ದೋಣಿ ಮುಳುಗಿ 9 ಮಕ್ಕಳು ಸೇರಿ 12 ಮಂದಿ ದಾರುಣ ಸಾವು
ಗಾಂಧೀನಗರ: ಗುಜರಾತ್ನ ವಡೋದರದ (Gujrat Vadodara) ಹರಾನಿ ಸರೋವರದಲ್ಲಿ (Harani Lake) ದೋಣಿ ಮುಳುಗಿ 9 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದಾರೆ.
ಅಧಿಕಾರಿಗಳ ಪ್ರಕಾರ, ವಿಹಾರಕ್ಕೆಂದು ತೆರಳಿದ್ದ ದೋಣಿಯಲ್ಲಿ (Boat) 23 ಮಕ್ಕಳು ಮತ್ತು ನಾಲ್ವರು ಶಿಕ್ಷಕರು ಇದ್ದರು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿ ಕೆರೆಯಿಂದ ಐವರು ಮಕ್ಕಳನ್ನು ರಕ್ಷಣೆ ಮಾಡಿದೆ. ಉಳಿದ ವಿದ್ಯಾರ್ಥಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ವಡೋದರಾದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಾರ್ಥ್ ಬ್ರಹ್ಮಭಟ್ ಅವರು, ವಿಹಾರಕ್ಕೆಂದು ಬಂದಿದ್ದ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಹರಾನಿ ಸರೋವರದಲ್ಲಿ ಮಗುಚಿ ಬಿದ್ದಿದೆ. ಅಗ್ನಿಶಾಮಕ ದಳವು ಇದುವರೆಗೆ 7 ವಿದ್ಯಾರ್ಥಿಗಳನ್ನು ರಕ್ಷಿಸಿದೆ, ನಾಪತ್ತೆಯಾದವರಿಗಾಗಿ ಶೋಧ ನಡೆಯುತ್ತಿದೆ. ಅಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲೇ ಸ್ಥಳೀಯರು ಕೆಲವು ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಹೇಳಿದರು.