ಸಿನಿಮಾ ಪ್ರಚಾರಕ್ಕಾಗಿ ಮಿತಿಮೀರಿ ಸೀರೆ ಬಿಚ್ಚಿದ ನಟಿ ನೇಹಾ ಶೆಟ್ಟಿ


ಒಂದು ಸಿನಿಮಾ ರಿಲೀಸ್ ಆಗ್ತಿದೆ ಅಂದರೆ ಆ ಚಿತ್ರವನ್ನ ಬಗೆ ಬಗೆಯ ರೀತಿಯಲ್ಲಿ ಮಾರ್ಕೆಟಿಂಗ್ ಮಾಡುತ್ತಾರೆ. ಇತ್ತೀಚೆಗೆ ಎಲ್ಲ ಸಿನಿಮಾಗಳು ಎಲ್ಲ ಭಾಷೆಗಳಲ್ಲಿ ಡಬ್ ಆಗುತ್ತಿರುವುದಿಂದ ಯಾವ ಸಿನಿಮಾ ನೋಡಬೇಕೆಂಬ ಗೊಂದಲ ಪ್ರೇಕ್ಷಕರಲ್ಲಿ ಮೂಡಿದೆ. ಅಷ್ಟೊಂದು ಸಿನಿಮಾಗಳು ಪ್ರತಿ ವಾರ ತೆರೆ ಕಾಣುತ್ತವೆ. ಹೀಗಾಗಿ ಜನರನ್ನು ಸೆಳೆಯಲು ಚಿತ್ರತಂಡಗಳು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿವೆ. ಆದರೆ, ಕೆಲವೊಮ್ಮೆ ಇಂತಹ ಪ್ರಯತ್ನ ವಿವಾದಕ್ಕೆ ದಾರಿ ಮಾಡಿಕೊಡುತ್ತದೆ.

ನಟ ವಿಶ್ವಕ್ ಸೇನ್- ನೇಹಾ ಶೆಟ್ಟಿ(Neha Shetty) ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಇಬ್ಬರು ಮಿತಿ ಮೀರಿ ನಡೆದುಕೊಂಡಿದ್ದಾರೆ. ಈ ಸಿನಿಮಾದ ಮೊದಲ ಹಾಡು ಸುತ್ತಮ್ಲ ಸುಸಿ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಈ ಹಾಡಿಗೆ ಯುವನ್ ಶಂಕರ್ ರಾಜಾ ಮ್ಯೂಸಿಕ್ ನೀಡಿದ್ದಾರೆ. ನಿನ್ನೆಯಷ್ಟೇ ಈ ಹಾಡು ಬಿಡುಗಡೆಯಾಗಿದೆ.
ಸಿನಿಮಾದ ಹಾಡಿನ ಹುಕ್ ಸ್ಟೆಪ್ಸ್ ಸಹ ಇದೆ. ಇದಕ್ಕೆ ನೇಹಾ ಮತ್ತು ವಿಶ್ವಕ್ (Vishwak Sen) ವೇದಿಕೆ ಮೇಲೆಯೇ ಹೆಜ್ಜೆ ಹಾಕಿದರು. ಈ ವೇಳೆ ನೇಹಾ ತಮ್ಮ ಸೀರೆಯ ಒಂದು ಎಳೆಯನ್ನು ಬಿಚ್ಚಿ ಹೀರೋ ವಿಶ್ವಕ್ ಮೇಲೆ ಹಾಕಿ ಹುಕ್ ಸ್ಟೆಪ್ಸ್ ಮಾಡಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೇಹಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ವೇದಿಕೆ ಮೇಲೆ ಈ ರೀತಿ ನಡೆದುಕೊಳ್ಳಬಾರದು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮನ್ನ ಫಾಲೋ ಮಾಡೋ ಅನೇಕ ಅಭಿಮಾನಿಗಳಿರುತ್ತಾರೆ. ನೀವೇ ಹೀಗೆ ಮಾಡಿದ್ರೆ ಹೇಗೆ ಎಂದು ನಟಿಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಇಂಜಿನಿಯರ್ ಹುಡುಗನ ಕಥೆ ವ್ಯಥೆ ಹೇಳ್ತಾರಂತೆ ಧನುಷ್
ಚಂದನವನಕ್ಕೆ ಪ್ರತಿಭಾವಂತರು, ವಿದ್ಯಾವಂತರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ. ಅಂತ ಪ್ರತಿಭಾವಂತರ ಸಾಲಿಗೆ ಭದ್ರಾವತಿ ಮೂಲದ ಧನುಷ್ (Dhanush) ಸೇರಿಕೊಳ್ಳುತ್ತಾರೆ. ಸದ್ಯ ಎಂಎನ್‌ಸಿ ಕಂಪೆನಿಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಇವರು, ಈ ಮಧ್ಯೆ ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದು ಹಿರಿಯ ನಟಿ ರೇಖಾದಾಸ್ ಗರಡಿಯಲ್ಲಿ ಅಭಿನಯದ ತರಬೇತಿ ಪಡೆದುಕೊಂಡಿದ್ದಾರೆ. ಇವೆಲ್ಲಾದರ ಪರಿಣಾಮ ‘ರಾಯಲ್ ಮೆಕ್’ (Royal Mech) ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಾಯಕನಾಗಿ ಪರಿಚಯಗೊಂಡಿದ್ದಾರೆ. ಒಂದಷ್ಟು ಸ್ನೇಹಿತರು ಗೆಳೆಯನ ಸಲುವಾಗಿ ಶಬರಿ ಫಿಲಿಂಸ್ ಮುಖಾಂತರ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ನಾಗಭೂಷಣ್.ಜೆ.ಹೆಚ್.ಎಂ (Nagabhushan) ಮತ್ತು ಜಯದೇವ ಹಾಸನ್ (Jayadeva Haasan) ಜಂಟಿಯಾಗಿ ಆಕ್ಷನ್ ಕಟ್ ಹೇಳಿದ್ದಾರೆ. ‘ಲೈಫ್ ಅಂದ್ಕೊಂಡಷ್ಟು ರಾಯಲ್ ಅಲ್ಲ’ ಅಂತ ಅಡಿಬರಹ ಚಿತ್ರಕ್ಕಿದೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಮಾಜಿ ಸಚಿವ ರೇಣುಕಾಚಾರ್ಯ ಮತ್ತು ರೇಖಾದಾಸ್ ಆಗಮಿಸಿ ತಂಡಕ್ಕೆ ಶುಭಹಾರೈಸಿದರು.
ಚಿತ್ರದ ಕುರಿತು ಹೇಳುವುದಾದರೆ ಅವನು ಇಂಜಿನಿಯರ್. ಗೆಳೆಯನಿಂದ ಮೋಸ, ಮನೆಯಲ್ಲಿ ನಡೆಯುವ ಘಟನೆಗಳಿಂದ ವಿಚಲಿತನಾಗಿ ಹೊರಬಂದು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ, ಮನದೊಳಗೆ ತಾನು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಕಾಡುತ್ತಿರುತ್ತದೆ. ಒಂದು ಹಂತದಲ್ಲಿ ಒಬ್ಬ ವ್ಯಕ್ತಿಯಿಂದ ಪ್ರೇರಣೆ ಸಿಗುತ್ತದೆ. ಇದನ್ನೆ ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಗುರಿ ತಲುಪಲು ಅನುಕೂಲವಾಯಿತಾ? ಈತನ ಬದುಕಿನಲ್ಲಿ ಬಂದಿದ್ದ ಇಬ್ಬರ ಹುಡುಗಿಯರ ಪೈಕಿ ಯಾರು ಒಲಿಯುತ್ತಾರೆ? ಕೊನೆಗೆ ಎಲ್ಲವನ್ನು ಗೆದ್ದ ಮೇಲೆ ಏನು ಮಾಡ್ತಾನೆ ಎಂಬುದನ್ನು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸಲಾಗಿದೆ. ಶೀರ್ಷಿಕೆಯು ಕಥೆಗೆ ಸಂಬಂಧ ಪಡುವುದರಿಂದ ಇದನ್ನೇ ಇಡಲಾಗಿದೆ ಎನ್ನುತ್ತದೆ ಚಿತ್ರತಂಡ.
ನಿರ್ದೇಶಕನ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ನಾಯಕನಿಗೆ ಹುರಿದುಂಬಿಸುವ ಶ್ರಾವ್ಯ ರಾವ್, ಕಾಲೇಜು ವಿದ್ಯಾರ್ಥಿಯಾಗಿ ಗೌತಮಿ ಜಯರಾಂ ನಾಯಕಿಯರು. ಇವರೊಂದಿಗೆ ಪೋಷಕರಾಗಿ ರಮೇಶ್‌ಭಟ್, ವಿನಯಪ್ರಸಾದ್, ಖಳನಾಗಿ ನೀನಾಸಂ ಅಶ್ವಥ್, ನಗಿಸಲು ಕುರಿ ಪ್ರತಾಪ್, ಪವನ್ ಕುಮಾರ್, ರೇಖಾದಾಸ್ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಉಡುಪಿ, ಕುಂದಾಪುರ, ಕಾಪು ಬೀಚ್, ಚಿಕ್ಕಮಗಳೂರು, ಕ್ಯಾತಮಕ್ಕಿ ಬೆಟ್ಟ ಸುಂದರತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಪ್ರಮೋದ್ ಮರವಂತೆ, ದೇವಪ್ಪ ಹಾಸನ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ರಿಜ್ವಾನ್ ಅಹ್ಮದ್ ಸಂಗೀತ ಸಂಯೋಜಿಸಿದ್ದಾರೆ. ಚಂದ್ರಮೌಳಿ ಛಾಯಾಗ್ರಹಣ, ರುತ್ವಿಕ್ ಶೆಟ್ಟಿ ಮತ್ತು ನವೀನ್ ಶೆಟ್ಟಿ ಸಂಕಲನ, ಫಯಾಜ್ ಖಾನ್, ಅಶೋಕ್ ಸಾಹಸ, ನೃತ್ಯ ಸ್ಟೀಫನ್ ಅವರದಾಗಿದೆ. ಸೆನ್ಸಾರ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರ ನೀಡಿದೆ.