ಚರ್ಚ್ ದ್ವಂಸ ಪ್ರಕರಣ: 135 ಆರೋಪಿಗಳ ಬಂದನ
ಇಸ್ಲಾಮಾಬಾದ್: ಕ್ರಿಶ್ಚಿಯನ್ (Christian) ಕುಟುಂಬವೊಂದು ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಉದ್ರಿಕ್ತ ಗುಂಪು ಪಾಕಿಸ್ತಾನದ (Pakistan) ಪಂಜಾಬ್ (Punjab) ಪ್ರಾಂತ್ಯದಲ್ಲಿ 21 ಚರ್ಚ್‌ಗಳನ್ನು (Church) ಧ್ವಂಸಗೊಳಿಸಿತ್ತು. ದಾಳಿಗೆ ಸಂಬಂಧಿಸಿಂತೆ 600 ಜನರ ಮೇಲೆ ಕೇಸ್ ದಾಖಲಾಗಿದ್ದು, ಪಾಕಿಸ್ತಾನದ ಅಧಿಕಾರಿಗಳು ಇಲ್ಲಿಯವರೆಗೆ 135 ಆರೋಪಿಗಳನ್ನು ಬಂಧಿಸಿದ್ದಾರೆ.
ಪಂಜಾಬ್‌ನ ರಾಜಧಾನಿ ಲಾಹೋರ್‌ನಿಂದ (Lahore) ಸುಮಾರು 130 ಕಿ.ಮೀ ದೂರದಲ್ಲಿರುವ ಫೈಸಲಾಬಾದ್ ಜಿಲ್ಲೆಯ ಜರನ್‌ವಾಲಾ ಪಟ್ಟಣದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಕೆರಳಿದ ಗುಂಪೊಂದು ಬುಧವಾರ 21 ಚರ್ಚ್ಗಳು ಹಾಗೂ ಹಲವಾರು ಕ್ರಿಶ್ಚಿಯನ್ನರ ಮನೆಗಳನ್ನು ಸುಟ್ಟುಹಾಕಿದೆ. ಕ್ರಿಶ್ಚಿಯನ್ ಸ್ಮಶಾನ ಮತ್ತು ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯನ್ನೂ ಧ್ವಂಸಗೊಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಗುರುವಾರ ಗಲಭೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ. ಹಾಗೂ ಹಾನಿಗೊಳಗಾದ ಎಲ್ಲಾ ಚರ್ಚ್‌ಗಳು ಹಾಗೂ ಅಲ್ಪಸಂಖ್ಯಾತರ ಮನೆಗಳನ್ನು ಮರು ನಿರ್ಮಾಣ ಮಾಡುವ ಭರವಸೆ ನೀಡಿದೆ.
ಭಯೋತ್ಪಾದನೆ ಹಾಗೂ ಧರ್ಮನಿಂದನೆ ಆರೋಪದಡಿಯಲ್ಲಿ 600 ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಂಜಾಬ್ ಉಸ್ತುವಾರಿ ಮಾಹಿತಿ ಸಚಿವ ಅಮೀರ್ ಮಿರ್ ತಿಳಿಸಿದ್ದಾರೆ. ಜರನ್‌ವಾಲಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಚರ್ಚ್‌ಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸಿದ 135 ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ ಎಂಬ ಉಗ್ರಗಾಮಿ ಗುಂಪಿನ ಸದಸ್ಯರು ಕೂಡಾ ಸೇರಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಸದ್ಯ ಪ್ರದೇಶದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ. ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಚರ್ಚ್‌ಗಳು ಮತ್ತು ಮನೆಗಳ ಹೊರಗೆ ಪೊಲೀಸ್ ಮತ್ತು ರೇಂಜರ್‌ಗಳ ಭಾರೀ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಮಿರ್ ಹೇಳಿದ್ದಾರೆ. ಹಲವು ಕಟ್ಟಡಗಳನ್ನು ಧ್ವಂಸಗೊಳಿಸುವ ದುಷ್ಕರ್ಮಿಗಳ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಶಿಮ್ಲಾ ಭೂಕುಸಿತದಲ್ಲಿ 3 ತಲೆಮಾರುಗಳನ್ನು ಕಳೆದುಕೊಂಡ ಕುಟುಂಬ; ಮೃತದೇಹಕ್ಕಾಗಿ ಮುಂದುವರಿದ ಹುಡುಕಾಟ
ಶಿಮ್ಲಾ: ಶಿಮ್ಲಾದಲ್ಲಿ (Shimla) ಸಂಭವಿಸಿದ ಭೂಕುಸಿತದಲ್ಲಿ (LandSlide) ಒಟ್ಟು ಮೂರು ತಲೆಮಾರುಗಳು ಕಳೆದುಕೊಂಡ ಕುಟುಂಬದ ಸದಸ್ಯರು ಮೃತದೇಹಗಳಿಗಾಗಿ ಕಾಯುತ್ತಿದ್ದಾರೆ ಮೂವರು ಮಕ್ಕಳು ಸೇರಿದಂತೆ ಮೃತ ಏಳುಮಂದಿಗೆ ಗೌರವ ಸಲ್ಲಿಸುವುದಕ್ಕಾಗಿ ಈ ಕುಟುಂಬ ಕಾಯುತ್ತಿದೆ.ಸೋಮವಾರ ಮೇಘಸ್ಫೋಟದಿಂದ ಉಂಟಾದ ಭೂಕುಸಿತದಿಂದಾಗಿ ದೇವಸ್ಥಾನ ಕುಸಿದು ಬಿದ್ದಿತ್ತು. ಈ ವೇಳೆ ಮೂವರು ಮಕ್ಕಳು ಸೇರಿದಂತೆ ಕುಟುಂಬದ ಏಳು ಮಂದಿ ಒಳಗಿದ್ದರು. ನನ್ನ ಸಹೋದರ, ಮೂವರು ಮಕ್ಕಳು, ಅತ್ತಿಗೆ, ನಮ್ಮ ಒಬ್ಬ ಹೆಣ್ಣುಮಕ್ಕಳು ಸೇರಿದಂತೆ ಐವರು ನಾಪತ್ತೆಯಾಗಿದ್ದಾರೆ. ರಕ್ಷಣಾ ಸಿಬ್ಬಂದಿ ಶವಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ. ಕನಿಷ್ಠ ಅವರ ಅಂತ್ಯಕ್ರಿಯೆಯನ್ನು ನಾನು ಮಾಡಬೇಕೆಂದು ಬಯಸುತ್ತೇನೆ, ನನ್ನ ಸಹೋದರನ ಅಂತ್ಯಕ್ರಿಯೆಯನ್ನು ನನ್ನ ಅಂತ್ಯದ ಮೊದಲು ಹೊರಡುವ ಸಮಯ ಬಂದಿದೆ ಎಂದು ಘಟನೆಯಲ್ಲಿ ಸಾವಿಗೀಡಾದ ಕುಟುಂಬದ ಒಬ್ಬ ವ್ಯಕ್ತಿ ಪವನ್‌ನ ಸಹೋದರ ವಿನೋದ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಇನ್ನೆರಡು ಮೃತದೇಹಗಳು ಪತ್ತೆಯಾಗಬೇಕಿದೆ. ಈ ನೋವು ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಇರುತ್ತದೆ” ಎಂದು ಕುಟುಂಬದ ಮಹಿಳೆಯೊಬ್ಬರು ಹೇಳಿದ್ದಾರೆ. ಶಿಮ್ಲಾದಿಂದ ಹೊರಗೆ ಇರುವ ಪವನ್ ಅವರ ತಂಗಿ, ಕುಟುಂಬದ ಸದಸ್ಯರಲ್ಲಿ ಒಬ್ಬರು ಫೋನ್‌ಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದರು. ಶಿಮ್ಲಾಕ್ಕೆ ಹೋಗುವ ರಸ್ತೆಯನ್ನು ಸಹ ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಾವು ನಮ್ಮ ಸಹೋದರ ಮತ್ತು ಇತರರ ಶವವನ್ನು ಹುಡುಕಲು ಬಯಸುತ್ತೇವೆ” ಎಂದು ಪವನ್ ಅವರ ಅಕ್ಕ ಹೇಳಿದ್ದಾರೆ. ನನ್ನ ಕುಟುಂಬದ ಏಳು ಮಂದಿ ಹೋಗಿದ್ದಾರೆ. ಅವರು ನನ್ನನ್ನು ಇಲ್ಲಿಗೆ ಬರಲು ಕೇಳುತ್ತಿದ್ದರು. ಆದರೆ ನಾನು ಮಾಡಲಿಲ್ಲ. ಬಹುಶಃ ನಾನು ಇನ್ನೂ ಸಾಯಲು ಉದ್ದೇಶಿಸಿರಲಿಲ್ಲ. ಮೃತದೇಹ ಸಿಕ್ಕಿದರೆ ನಾವು ಅಂತಿಮ ವಿಧಿವಿಧಾನಗಳನ್ನು ಮಾಡಬಹುದು, ನಮ್ಮ ಕುಟುಂಬ ನಾಶವಾಗಿದೆ,” ಅವರು ಹೇಳಿದರು.
ಹಿಮಾಚಲ ಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳು ಈ ಮಾನ್ಸೂನ್‌ನಲ್ಲಿ 60 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಪರಿಸರ ಮತ್ತು ಆಸ್ತಿ ಹಾನಿ ಮತ್ತು ಸಾವುನೋವುಗಳಿಂದಾಗಿ ರಾಜ್ಯವು ₹ 10,000 ಕೋಟಿ ನಷ್ಟವನ್ನು ಅನುಭವಿಸಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಜಲಾಶಯದಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ಗ್ರಾಮಗಳಿಗೆ ಪ್ರವೇಶಿಸಲು ಸಾಧ್ಯವಾಗದ ಕಾರಣ ಪಾಂಗ್ ಅಣೆಕಟ್ಟಿನ ಬಳಿಯ ಕಾಂಗ್ರಾದಲ್ಲಿ ತಗ್ಗು ಪ್ರದೇಶಗಳಿಂದ 800 ಕ್ಕೂ ಹೆಚ್ಚು ಜನರನ್ನು ಬುಧವಾರ ಸ್ಥಳಾಂತರಿಸಲಾಯಿತು.