ಸೋಮವಾರ, ಅಕ್ಟೋಬರ್ 2, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕ್ರೋಮಿಂಗ್ ಟ್ರೆಂಡ್ ಗೆ ಬಲಿಯಾದ 13 ವರ್ಷದ ಬಾಲಕಿ! ಬ್ಲೂವೇಲ್ ರೀತಿಯ ಈ ಗೇಮಿಂಗ್ ಯಾವುದು?

Twitter
Facebook
LinkedIn
WhatsApp
Aamir Khans daughter Ira Khan shares picture in a yellow and black bikini 3 3

ನವದೆಹಲಿ (ಮೇ.30): ಬಹುಶಃ ಕಳೆದೊಂದು ದಶಕದಲ್ಲಿ ಯಾವುದಾದರೂ ಸೋಶಿಯಲ್‌ ಮೀಡಿಯಾ ಟ್ರೆಂಡ್‌ ಜನರ ಬದುಕಿನ ಮೇಲೆ ನೇರವಾದ ಪರಿಣಾಮ ಬೀರಿದ್ದರೆ, ಅದು ಬ್ಲ್ಯೂ ವೇಲ್‌ ಚಾಲೆಂಜ್‌. 2016ರಲ್ಲಿ ವಿಶ್ವದಲ್ಲಿ ಬಹಳ ಜನಪ್ರಿಯತೆಯೊಂದಿಗೆ ಅಷ್ಟೇ ಪ್ರಮಾಣದ ಕುಖ್ಯಾತಿಯನ್ನೂ ಪಡೆದುಕೊಂಡಿದ್ದ ಈ ಚಾಲೆಂಜ್‌ಗೆ ನೂರಾರು ಮಂದಿ ಸಾವು ಕಂಡಿದ್ದರು. ಭಾರತದಲ್ಲೂ ಇದರ ಪರಿಣಾಮ ಬೀರಿತ್ತಲ್ಲದೆ, ಸರ್ಕಾರ ಕೂಡ ಈ ಚಾಲೆಂಜ್‌ನಲ್ಲಿ ಭಾಗವಹಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು.  ಈ ಚಾಲೆಂಜ್‌ನಲ್ಲಿ ಭಾಗವಹಿಸಿ ಹಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರು. ಈಗ ಮತ್ತೊಂದು ರೀತಿಯ ಸೋಶಿಯಲ್‌ ಮೀಡಿಯಾ ಚಾಲೆಂಜ್‌ ವೈರಲ್‌ ಆಗುತ್ತಿದೆ. ಇದು ಮೂಲವಾಗಿ ಟಿಕ್‌ಟಾಕ್‌ನಲ್ಲಿ ವೈರಲ್‌ ಆಗಿದ್ದು, ಅದರೊಂದಿಗೆ ಬೇರೆ ಬೇರೆ ಸೋಶಿಯಲ್‌ ಮೀಡಿಯಾ ವೇದಿಕೆಗೂ ಹಬ್ಬಿಕೊಳ್ಳುತ್ತಿದೆ. ಆಸ್ಟ್ರೇಲಿಯಾದಲ್ಲಿ 13 ವರ್ಷದ ಬಾಲಕಿ ಎಸ್ರಾ ಹೇಯ್ನೆಸ್‌, ಈ ಸೋಶಿಯಲ್‌ ಮೀಡಿಯಾ ಟ್ರೆಂಡ್‌ಗೆ ಬಲಿಯಾಗಿದ್ದಾಳೆ. ಜನರ ಪ್ರಾಣಕ್ಕೆ ಕಂಟಕವಾಗಿರುವ ಈ ಸೋಶಿಯಲ್‌ ಮೀಡಿಯಾ ಟ್ರೆಂಡ್‌ಅನ್ನು ‘ಕ್ರೋಮಿಂಗ್‌’ ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ಡಿಯೋಡ್ರೆಂಟ್‌ ಕ್ಯಾನ್‌ಅನ್ನು ಈ ಚಾಲೆಂಜ್‌ನಲ್ಲಿ ಭಾಗವಹಿಸಲು ಬಳಸಿದ್ದ ಬಾಲಕಿ, ಹೃದಯಸ್ತಂಭನದಿಂದ ಸಾವು ಕಂಡಿದ್ದಾಳೆ. ಆಕೆಯ ಮೆದುಳು ಕೂಡ ಸಂಪೂರ್ಣವಾಗಿ ಹಾನಿಯಾಗಿದ್ದು, ಚಿಕಿತ್ಸೆಗೆ ಸ್ವಲ್ಪವೂ ಸಹಕರಿಸದ ರೀತಿಯಲ್ಲಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಏನಿದು ಕ್ರೋಮಿಂಗ್‌ ಟ್ರೆಂಡ್‌: ಈ ಚಾಲೆಂಜ್‌ನ ಪ್ರಮುಖ ಅಂಶ ಏನೆಂದರೆ, ವಿಷಕಾರಿ ಆಗಿರುವ ವಸ್ತುಗಳನ್ನು ಉಸಿರಾಡಬೇಕು. ಇದು ಮತ್ತು ಏರಿಸುವಂಥ ಉತ್ಪನ್ನಗಳಾಗಿರಬೇಕು. ಮೆಟಾಲಿಕ್‌ ಪೇಂಟ್‌, ಪೆಟ್ರೋಕೆಮಿಕಲ್ಸ್‌, ಸ್ಲೋವಲೆಂಟ್ಸ್‌, ಡಿಯೋಡ್ರೆಂಟ್‌ ಹಾಗೂ ಕೆಮಿಕಲ್ಸ್‌ಗಳನ್ನು ಉಸಿರಾಡಬೇಕು. ಉದ್ದೇಶಪೂರ್ವಕವಾಗಿ ಇವುಗಳನ್ನು ಉಸಿರಾಡಿದರೆ, ಅಥವಾ ಮಿತಿಮೀರಿಯಾಗಿ ಇವುಗಳ ಉಸಿರಾಟ ಮಾಡಿದರೆ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮೂಲವಾಗಿ ಇದು ಆಸ್ಟ್ರೇಲಿಯಾದಲ್ಲಿ ಈ ಟ್ರೆಂಡ್‌ ಆರಂಭವಾಗಿದ್ದು, ಈಗ ಜಗತ್ತಿನಲ್ಲಿ ವ್ಯಾಪಕವಾಗಿದೆ. ಕ್ರೋಮಿಂಗ್‌ನಿಂದಾಗಿ, ಶ್ವಾಸಕೋಶ, ಹೃದಯ ಹಾಗೂ ಮೆದುಳಿಗೆ ಆಮ್ಲಜನಮಕದ ಕೊರತೆ ವಿಪರೀತವಾಗಿ ಕುಂಠಿತವಾಗುತ್ತದೆ. ಸರಿಯಾದ ಮಾರ್ಗೋಪಾಯಗಳು ಇಲ್ಲದೇ ಹೋದಲ್ಲಿ ಇವುಗಳಿಗೆ ಹಾನಿಯಾಗಲಿದ್ದು, ಪ್ರಾಣಕ್ಕೆ ಕಂಟಕವಾಗಲಿದೆ. 

ಇನ್ನು ಎಸ್ರಾ ಹೇಯ್ನಸ್‌ ಡಿಯೋಡ್ರೆಂಟ್‌ ಚಾಲೆಂಜ್‌ಅನ್ನು ಕ್ರೋಮಿಂಕ್‌ನಲ್ಲಿ ಮಾಡಿದ್ದರು. ರಾತ್ರಿ ಮಲಗುವ ವೇಳೆ ಎಸ್ರಾ ಡಿಯೋಡ್ರೆಂಟ್‌ ಚಾಲೆಂಜ್‌ ಮಾಡಿ ಮಲಗಿದ್ದಳು. ಡಿಯೋಡ್ರೆಂಟ್‌ಅನ್ನು ಉಸಿರಾಡಿದ್ದರಿಂದ ರಾತ್ರಿ ನಿದ್ರೆಯಲ್ಲಿಯೇ ಆಕೆಗೆ ಹೃದಯಸ್ತಂಭನವಾಗಿದೆ. 8 ದಿನಗಳ ಕಾಲ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾಳೆ. ಆಕೆಯ ಮೆದುಳಿಗೆ ಎಷ್ಟು ಪ್ರಮಾಣದ ಹಾನಿಯಾಗಿತ್ತೆಂದರೆ, ಚಿಕಿತ್ಸೆ ಮಾಡೋದು ಸಾಧ್ಯವೇ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕೊನೆಗೆ ವೆಂಟಿಲೇಟರ್‌ಅನ್ನು ಆಫ್‌ ಮಾಡಿದ ಬೆನ್ನಲ್ಲಿಯೇ ಆಕೆ ಸಾವು ಕಂಡಿದ್ದಾಳೆ.

ಈಕೆಯ ಸಾವು ಆಸ್ಟ್ರೇಲಿಯಾದಲ್ಲಿ ಆಘಾತಕ್ಕೆ ಕಾರಣವಾಗಿದೆ. ಕ್ರೋಮಿಂಗ್‌ ಚಾಲೆಂಜ್‌ ಪ್ರಾಣವನ್ನೂ ತೆಗೆಯಬಹುದು ಎನ್ನುವ ಅರಿವು ಮೂಡಿಸಲಾಗುತ್ತಿದೆ. ಇದು ಸಾಮಾನ್ಯವಾಗಿ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒಬ್ಬರು ಹೃದಯಾಘಾತಕ್ಕೆ ಒಳಗಾಗುತ್ತಾರೆ. ಕ್ರೋಮಿಂಗ್ ಬಗ್ಗೆ ಜಾಗೃತಿ ಹೆಚ್ಚುತ್ತಿದೆ.

‘ನನ್ನ ಮಗಳ ಸಾವಿನೊಂದಿಗೆ ನಾನು ಉಳಿದ ಎಲ್ಲಾ ಮಕ್ಕಳಿಗೂ ಒಂದು ಮಾತನ್ನು ಹೇಳಲು ಬಯಸುತ್ತೇನೆ. ಇಂಥ ಸಿಲ್ಲಿಯಾಗಿರುವ ಟ್ರ್ಯಾಪ್‌ಗಳಿಗೆ ಬಲಿಯಾಗಬೇಡಿ. ಇಷ್ಟುದಿನ ಮನೆಯಲ್ಲಿ ಆಟವಾಡಿಕೊಂಡು ಇರುತ್ತಿದ್ದ ನನ್ನ ಮಗಳು ಈಗ ಇಲ್ಲ ಎಂದುಕೊಳ್ಳೋದು ಹೇಗೆ’ ಎಂದು ಬಾಲಕಿಯ ತಂದೆ ಪೌಲ್‌ ಹೇಯ್ನಸ್‌ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ