ಚಿತ್ರದುರ್ಗ: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕೊಬ್ಬರಿ ಬೆಂಕಿಗಾಹುತಿ
ಚಿತ್ರದುರ್ಗ: ಕೊಬ್ಬರಿ ಗೋದಾಮುವೊಂದಕ್ಕೆ (Coconut Warehouse) ಆಕಸ್ಮಿಕ ಬೆಂಕಿ (Fire) ತಗುಲಿದ ಪರಿಣಾಮ ಗೋದಾಮು ಹೊತ್ತಿ ಉರಿದಿದ್ದು, ಲಕ್ಷಾಂತರ ಮೌಲ್ಯದ ಕೊಬ್ಬರಿ ಬೆಂಕಿಗಾಹುತಿಯಾದ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ (Hosadurga) ತಾಲೂಕಿನ ಚಿಕ್ಕಬ್ಯಾಲದಕೆರೆ (Chikkabyaladakere) ಗ್ರಾಮದಲ್ಲಿ ಘಟನೆ ನಡೆದಿದೆ. ಚಿಕ್ಕಬ್ಯಾಲದಕೆರೆ ಬಳಿಯ ತೋಟದಲ್ಲಿದ್ದ ಗೋದಾಮು ಉದ್ಯಮಿ ಜಗದೀಶ್ ಎಂಬವರಿಗೆ ಈ ಕೊಬ್ಬರಿ ಗೋದಾಮು ಸೇರಿದ್ದು, ಗ್ರಾಮದ ಹೊರವಲಯದಲ್ಲಿತ್ತು.
ಇದೀಗ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕೊಬ್ಬರಿ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಶ್ರೀರಾಂಪುರ ಠಾಣೆ ಪಿಐ ಮಧು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಹಿಳೆ ಸ್ನಾನ ಮಾಡುವಾಗ ಕಿಟಕಿಯಿಂದ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್ – ಕಾಮುಕನ ವಿರುದ್ಧ ದೂರು
ಹಾಸನ: ಸ್ನಾನ ಮಾಡುತ್ತಿದ್ದಾಗ ಮಹಿಳೆಯೊಬ್ಬರ (Women) ಫೋಟೋ ತೆಗೆದು, ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸದಿದ್ದರೇ ನಿನ್ನ ಫೋಟೋ ವೈರಲ್ ಮಾಡ್ತೀನಿ ಅಂತ ಬ್ಲಾಕ್ ಮೇಲ್ ಮಾಡುತ್ತಿದ್ದ ವಿಕೃತ ಕಾಮುಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆ (Hassan Police Station) ಮೆಟ್ಟಿಲೇರಿದ್ದಾರೆ.
ನಡೆದಿದ್ದೇನು?
ಹಾಸನ (Hassan) ಜಿಲ್ಲೆ ಅರಕಲಗೂಡು ತಾಲ್ಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ತಾಲ್ಲೂಕಿನ ಗ್ರಾಮವೊಂದರ ನಿವಾಸಿ ಲಕ್ಷ್ಮೀಶ ಎಂಬಾತ, ಮಹಿಳೆಯೊಬ್ಬರು ಸ್ನಾನ ಮಾಡುವಾಗ ಕಿಟಕಿಯಿಂದ ನಗ್ನ ಫೋಟೋಗಳನ್ನ ಕ್ಲಿಕ್ಕಿಸಿದ್ದ. ನಂತರ ಆ ಮಹಿಳೆಗೆ ಫೋಟೋ ಕಳುಹಿಸಿ ಇಂತಿಷ್ಟು ಹಣ ನೀಡುವಂತೆ ಡಿಮ್ಯಾಂಡ್ ಮಾಡುತ್ತಿದ್ದ. ಅಲ್ಲದೇ ನನ್ನೊಂದಿನ ಲೈಂಗಿಕವಾಗಿ ಸಹಕರಿಸಬೇಕು. ಇಲ್ಲದಿದ್ದರೆ ನಿನ್ನ ಫೋಟೋಗಳನ್ನು ವೈರಲ್ ಮಾಡುತ್ತೀನಿ ಎಂದು ಬೆದರಿಕೆ ಹಾಕುತ್ತಿದ್ದ. ಇದರಿಂದ ಮಹಿಳೆ ಸಂಪೂರ್ಣ ಹೆದರಿದ್ದಳು ಎಂದು ಮೂಲಗಳು ತಿಳಿಸಿವೆ.
ಇದೇ ವಿಚಾರಕ್ಕೆ ಕೆಲ ದಿನಗಳ ಹಿಂದೆ ಲಕ್ಷ್ಮೀಶನಿಗೆ ಗ್ರಾಮದ ಹಿರಿಯರು ಬುದ್ಧಿ ಹೇಳಿದ್ದರು. ಆದರೂ ಬದಲಾಗದ ಕಾಮುಕ, ಮಹಿಳೆಗೆ ಬ್ಲಾಕ್‌ಮೇಲ್ ಮಾಡೋದನ್ನ ಮುಂದುವರಿಸಿದ್ದಾನೆ.
ಇದರಿಂದ ಬೇಸತ್ತ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನಗೆ ತೊಂದರೆಯಾಗುತ್ತಿದೆ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.