ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ನಾಪತ್ತೆ?

Twitter
Facebook
LinkedIn
WhatsApp
inbound1476974211635198000 3

ಬೀಜಿಂಗ್: ಚೀನಾದ (China) ವಿದೇಶಾಂಗ ಸಚಿವ (Foreign Minister) ಕ್ವಿನ್ ಗ್ಯಾಂಗ್ (Quin Gang) ಕಳೆದ ಮೂರು ವಾರಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಹಿನ್ನೆಲೆ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತವೆ.

ಕಳೆದ ವಾರ ಜಕರ್ತಾದಲ್ಲಿ ನಡೆದ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ ಶೃಂಗಸಭೆಗೆ ಕ್ವಿನ್ ಗ್ಯಾಂಗ್ ಗೈರು ಹಾಜರಾಗಿದ್ದರು. ಜೂನ್ 25ರಂದು ಬೀಜಿಂಗ್‌ನಲ್ಲಿ ವಿಯೇಟ್ನಾಂ, ರಷ್ಯಾ ಮತ್ತು ಶ್ರೀಲಂಕಾದ ರಾಯಭಾರಿಗಳನ್ನು ಭೇಟಿಯಾಗಿದ್ದರು. ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡದ್ದು ಈ ಭೇಟಿಯಲ್ಲಿಯೇ ಎಂದು ವರದಿಗಳು ಹೇಳಿವೆ.

ಕ್ವಿನ್ ಗ್ಯಾಂಗ್ ಸತತ ಮೂರು ವಾರಗಳಿಂದ ಎಲ್ಲಿಯೂ ಕಾಣಿಸಿಕೊಳ್ಳದ ಹಿನ್ನೆಲೆ ಅವರ ಸ್ಥಾನವನ್ನು ದೇಶದ ಉನ್ನತ ರಾಜತಾಂತ್ರಿಕ ಮತ್ತು ಮುಖ್ಯಸ್ಥರಾಗಿರುವ ವಾಂಗ್ ಯೀ (Wang Yi) ಅವರು ತೆಗೆದುಕೊಂಡಿದ್ದಾರೆ. ಅಲ್ಲದೇ ಕ್ವಿನ್ ಅವರ ಅನುಪಸ್ಥಿತಿಯಲ್ಲಿ ಚೀನಾದ ಅಂತರಾಷ್ಟ್ರೀಯ ಸಂಬಂಧಗಳನ್ನು ಮುನ್ನಡೆಸಿದ್ದಾರೆ. 

ಕ್ವಿನ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅವರು ಕಣ್ಮರೆಯಾಗಿದ್ದಾರೆ ಎಂದು ಚೀನಾ ಅಧಿಕೃತವಾಗಿ ಹೇಳಿದೆ. ಆದರೆ ಅವರು ಚಿಕಿತ್ಸೆ ಪಡೆಯುತ್ತಿರುವ ಅಥವಾ ಆಸ್ಪತ್ರೆಯಲ್ಲಿರುವ ಯಾವುದೇ ಫೋಟೋಗಳು ಹೊರಬಾರದ ಕಾರಣ ನಾಪತ್ತೆಯಾಗಿದ್ದರೆ ಎಂಬ ವದಂತಿಗಳು ಎಲ್ಲೆಡೆ ಕೇಳಿಬರುತ್ತಿವೆ.

ವದಂತಿಗಳ ಪ್ರಕಾರ ಕ್ವಿನ್ ಅವರು ಹಾಂಗ್‌ಕಾಂಗ್ ಮೂಲದ ಫೀನಿಕ್ಸ್ ಟವಿಯೊಂದಿಗೆ ಸಂಯೋಜಿತವಾಗಿರುವ ಫೂ ಕ್ಸಿಯಾಟಿನ್ ಎಂಬ ಟವಿ ಶೋ ಹೋಸ್ಟ್‌ನೊಂದಿಗೆ ಸಂಬಂಧ ಹೊಂದಿದ್ದರು. ಅಲ್ಲದೇ ಅವರು ಮದುವೆಗು ಮುನ್ನವೇ ಫೂ ಕ್ಸಿಯಾಟಿನ್ ಅವರೊಂದಿಗೆ ಮಗುವನ್ನು ಹೊಂದಿದ್ದರು ಎಂದು ವರದಿಗಳು ತಿಳಿಸಿವೆ. 

ಚೀನಾ ಅಧ್ಯಕ್ಷ ಕ್ಸಿ ಅವರ ವಿಶ್ವಾಸಾರ್ಹ ಮಿತ್ರ ಮತ್ತು ಸಂವಾದಕರಾಗಿದ್ದ ಕ್ವಿನ್ (57) ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿದೇಶಾಂಗ ಸಚಿವರನ್ನಾಗಿ ನೇಮಿಸಿದ್ದರು. ಅವರು ದೇಶದ ಅತ್ಯಂತ ಕಿರಿಯ ಅಧಿಕಾರಿಗಳಲ್ಲಿ ಒಬ್ಬರು. 

ಒಂದು ವೇಳೆ ಅವರು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವುದೇ ಆದರೇ ಮತ್ತೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ವದಂತಿಗಳ ಊಹಾಪೋಹಗಳು ನಿಜವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಅನಾಥ ಶವಗಳ ಸಂಸ್ಕಾರ: ಮೈಸೂರಿನ ಬಾಡಿ ಮಿಯಾನ್​ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಪ್ರಧಾನಿಗೆ ಪತ್ರ

ಮೈಸೂರು: ಸಾಮಾಜದಲ್ಲಿ ನಮ್ಮ ಮಧ್ಯೆ ಅದೆಷ್ಟೋ ಕಾಣದ ಕೈಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಆ ಕೈಗಳು ಬೆಳಕಿಗೆ ಬಾರದೆ ಎಲೆ ಮರೆ ಕಾಯಿಯಂತೆ ಸೇವೆಯಲ್ಲೇ ನಿರತವಾಗಿರುತ್ತವೆ. ಅದರಂತೆ ಮೈಸೂರಿನ “ಬಾಡಿ ಮಿಯಾನ್​​” (Body Miyan) ಅಯೂಬ್ ಅಹಮದ್‌ ಸಾವಿರಾರು ಅನಾಥ ಶವಗಳ ಸಂಸ್ಕಾರ ಮಾಡುವ ಮೂಲಕ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಗಿ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಶಾಸಕ ತನ್ವೀರ್ ಸೇಠ್ (Tanveer Seth) ಮತ್ತು ಸಂಸದ ಪ್ರತಾಪ್ ಸಿಂಹ (Pratap Simha) ಪತ್ರ ಬರೆದಿದ್ದಾರೆ.

ಅಯೂಬ್ ಅಹಮದ್‌ ಅವರು ಕಳೆದ 22 ವರ್ಷಗಳಿಂದ ಈ ಕಾರ್ಯ ಮಾಡುತ್ತಿದ್ದು ಇದುವರೆಗೂ ತಮ್ಮದೆ ಖರ್ಚಿನಲ್ಲಿ 16 ಸಾವಿರ ಅನಾಥ ಶವಗಳ ಸಂಸ್ಕಾರ ಮಾಡಿದ್ದಾರೆ. ಇವರು ಮೈಸೂರು ಮಾತ್ರವಲ್ಲದೇ ಚಾಮರಾಜನಗರ ಸೇರಿದಂತೆ ಹಲವು ಭಾಗಗಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಯೂಬ್ ಅಹಮದ್‌ ಅವರು ಅನಾಥಶ್ರಮ ಮತ್ತು ಟೈಲರಿಂಗ್ ತರಬೇತಿ ಸಂಸ್ಥೆ ನಡೆಸುತ್ತಿದ್ದಾರೆ.

ಯಾರು ಈ ಬಾಡಿ ಮಿಯಾನ್​

ಅಯೂಬ್ ಅಹಮದ್‌ 22 ವರ್ಷಗಳ ಹಿಂದೆ ಗುಂಡ್ಲುಪೇಟೆಯಿಂದ ಮೈಸೂರಿಗೆ ಬಸ್​​​ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ಸಿನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಅನಾಥ ಶವವೊಂದನ್ನು ನೋಡಿದರು. ಎಂಟು ಗಂಟೆಗಳ ನಂತರ ಹಿಂದಿರುಗುವ ಪ್ರಯಾಣದಲ್ಲೂ ಶವ ಹಾಗೆ ಇತ್ತು. ಇದನ್ನು ಕಂಡು ಮರುಗಿದ ಅಯೂಬ್​ ಅಹಮದ್​ ಅಂದಿನಿಂದ ಅನಾಥ ಶವಗಳ ಸಂಸ್ಕಾರ ಮಾಡಲು ಪ್ರಾರಂಭಿಸಿದರು.

ಮೈಸೂರಿನ ಸುತ್ತಮುತ್ತಲಿನ ಊರುಗಳಿಂದ ಇವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ನಂತರ ಇವರು ಅಲ್ಲಿಂದ ಅನಾಥ ಶವಗಳನ್ನು ತಂದು ಕೆಆರ್ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಇಡುತ್ತಾರೆ. ಬಳಿಕ ತಮ್ಮ ಅಂಬಾಸಿಡರ್ ಕಾರನಲ್ಲಿ ತೆಗೆದುಕೊಂಡು ಹೋಗಿ ಅಂತಿಮ ವಿಧಿವಿಧಾನ ನೆರವೇರಿಸುತ್ತಾರೆ. ಅಲ್ಲದೇ ಕೊರೊನಾ ಸಮಯದಲ್ಲೂ ಅನೇಕ ಶವಗಳ ಸಂಸ್ಕಾರ ಮಾಡಿದ್ದಾರೆ.

ಇವರ ಈ ಸಮಾಜ ಕಾರ್ಯಕ್ಕೆ 2020ರಲ್ಲಿ ಅಮೆರಿಕದ ಹಾರ್ಮೊನಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್​​ ಲಭಿಸಿದೆ. ಹಾಗೇ ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ