ಚಿಕ್ಕಮಗಳೂರು (ಮೇ.11): ಅದು ಮುಗಿಲೆತ್ತರದ ಬೆಟ್ಟ-ಗುಡ್ಡಗಳ ಸೌಂದರ್ಯದ ಖಣಿ. ಹಾವು-ಬಳುಕಿನ ಮೈಕಟ್ಟಿನ ರಸ್ತೆಯ ರೋಮಾಂಚನಕಾರಿ ಪ್ರಯಾಣ. ಅಲ್ಲಿ ಸೌಂದರ್ಯವೂ ಉಂಟು. ಅಪಾಯವೂ ಉಂಟು. ಆ ಸೌಂದರ್ಯದಲ್ಲಿ ಮೈಮರೆಯುತ್ತಿರೋ ಪ್ರವಾಸಿಗರಿಗೆ (Tourists) ಮತ್ತದೇ ಪ್ರವಾಸಿಗರೇ ಮಗ್ಗಲ ಮುಳ್ಳಾಗಿದ್ದಾರೆ. ಅಪಘಾತವಾಗಿ (Accident) ಸಹಾಯ ಕೋರುತ್ತಿದ್ದವರನ್ನ ಸುಲಿಗೆ ಮಾಡ್ತಿದ್ದಾರೆ. ಸಹಾಯದ ನೆಪದಲ್ಲಿ ದರೋಡೆಗೆ ಮುಂದಾಗಿದ್ದಾರೆ. ಹುಷಾರು. ಈ ಮಾರ್ಗದಲ್ಲಿ ಮಧ್ಯರಾತ್ರಿ ಬರಲೇಬೇಡಿ. ದರೋಡೆಕೋರರೇನೋ ಸಿಕ್ಕಿದ್ರು. ಆದ್ರೆ, ಪೊಲೀಸರಿಗೆ (Police) ನೆರವಾದ ಆ ವ್ಯಕ್ತಿ ಮಾತ್ರ ಸಿಕ್ತಿಲ್ಲ. ಆ ವ್ಯಕ್ತಿ-ಆ ಮಾರ್ಗ ಯಾವ್ದು ಅಂತೀರಾ.
ಪ್ರವಾಸಿಗರನ್ನ ಪ್ರವಾಸಿಗರೇ ದರೋಡೆ ಪ್ರಕರಣ ಆರೋಪಿಗಳ ಬಂಧನ: ಮೇ 3ರಂದು ಚಾರ್ಮಾಡಿ (Charmadi Ghat) ರಸ್ತೆಯಲ್ಲಿ ಕಾರೊಂದು ಅಪಘಾತವಾಗಿತ್ತು. ಕಾರ್ ಸುತ್ತ ಎರಡು ಬೈಕ್, 5 ಜನ ಯುವಕರು ,ಇದನ್ನು ನೋಡಿ ಅನುಮಾನಗೊಂಡು ತರಕಾರಿ ಗಾಡಿ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆಗುಂತಕ ಅಷ್ಟು ಹೇಳಿದ್ದೇ ತಡ ಪೊಲೀಸರು ಅಲರ್ಟ್ ಆದ್ರು, 3 ಠಾಣೆಗೂ ಮಾಹಿತಿ ನೀಡಿ ನಾಖಾಬಂಧಿ ಹಾಕಿ ರಾಬರ್ಸ್ಗಳನ್ನ ಹಿಡಿದಿದ್ದಾರೆ (Arrest). ಆದ್ರು ಪ್ರವಾಸಿಗರೇ ಬಿ ಕೇರ್ ಫುಲ್. ಇದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರನ್ನ ಪ್ರವಾಸಿಗರೇ ದರೋಡೆ ಮಾಡಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದು ಮಧ್ಯರಾತ್ರಿ ಅಪಘಾತವಾಗಿತ್ತು. ಕಾರಿನಲ್ಲಿದ್ದವರು ಸಹಾಯ ಬಯಸುತ್ತಿದ್ದರೇ ಅದೇ ಮಾರ್ಗದಲ್ಲಿ ಬೈಕಿನಲ್ಲಿ ಬರುತ್ತಿದ್ದವರು ಸಹಾಯ ಮಾಡುವ ನೆಪದಲ್ಲಿ ಅವರನ್ನ ಹೆದರಿಸಿ ಹಣ, ಉಂಗುರ, ಚೈನ್ ಹಾಗೂ ಮೊಬೈಲ್ ದೋಚಿದ್ದರು. ಈ ರೀತಿಯ ಪ್ರಕರಣ ಚಾರ್ಮಾಡಿಯ ಸೌಂದರ್ಯದಲ್ಲಿ ಇದೇ ಮೊದಲಲ್ಲ. ಹಾಗಾಗಿ, ಸ್ಥಳಿಯರು ಇದು ಬಹುಪಯೋಗಿ ರಸ್ತೆ. ಶಾಲಾ-ಕಾಲೇಜು, ವ್ಯಾಪಾರ, ಆಸ್ಪತ್ರೆ ಹೀಗೆ ನಾನಾ ಕಾರಣಗಳಿಂದ ಜನ ಅವಲಂಬಿತರಾಗಿದ್ದಾರೆ. ದಿನದ 24 ಗಂಟೆಯೂ ಓಡಾಡ್ತಿರ್ತಾರೆ. ಹಾಗಾಗಿ, ಮತ್ತೆ ಇಂತಹಾ ಪ್ರಕರಣ ನಡೆಯದಿರಲು ಚಿಕ್ಕಮಗಳೂರು-ದಕ್ಷಿಣ ಕನ್ನಡ ಪೊಲೀಸರು ಇಲ್ಲಿ ರಾತ್ರಿ ನಿರಂತರವಾಗಿ ಗಸ್ತು ತಿರುಗಬೇಕೆಂದು ಸ್ಥಳೀಯರಾದ ಸಂಜಯ್ ಕೊಟ್ಟಿಗೆಹಾರ ಮನವಿ ಮಾಡಿದ್ದಾರೆ.
ಮಾಹಿತಿ ನೀಡಿದ ಆಗುಂತಕನಿಗೆ ರಿವಾರ್ಡ್ ನೀಡಲು ಪೊಲೀಸರ ಹುಡುಕಾಟ: ಆ ಆಗುಂತಕನಿಂದ ದರೋಡೆಯಾದ 24 ಗಂಟೆಯಲ್ಲಿ ಕಾಫಿನಾಡ ಖಾಕಿಗಳು ದರೋಡೆಕೋರರನ್ನ ಬಂಧಿಸಿದ್ದಾರೆ. ಆದ್ರೀಗ, ಆ ಆಗುಂತಕನನ್ನ ಹುಡುಕ ಹೊರಟಿದ್ದಾರೆ. ಅವನ್ಯಾರು ಅಂತ ಸಿಕ್ತಿಲ್ಲ. ದಾರಿಹೊಕ್ಕ ತೋರಿದ ಅದೊಂದು ಅನುಮಾನ ತಕ್ಕಮಟ್ಟಿಗೆ ಭವಿಷ್ಯದ ದರೋಡೆಯನ್ನೂ ತಡೆದಿದೆ. ಹಾಗಾಗಿ, ಕಾಫಿನಾಡ ಪೊಲೀಸರು ಅವನಿಗೊಂದು ರಿವಾರ್ಡ್ ನೀಡಲು ಹುಡುಕುತ್ತಿದ್ದಾರೆ. ಆದರೆ, ಆತ ಯಾರೆಂದು ಪತ್ತೆಯಾಗಿಲ್ಲ. ಅವನು ಮಾಹಿತಿ ನೀಡಿದ ಕೂಡಲೇ ಅಲರ್ಟ್ ಆದ ಪೊಲೀಸರು ಅವನ ಮಾಹಿತಿಯನ್ನೂ ಪಡೆದಿಲ್ಲ.
ಹಾಗಾಗಿ, ಇದೀಗ, ಆ ಆಗುಂತಕನಿಗಾಗಿ ಅವನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಚಾರ್ಮಾಡಿಯಲ್ಲಿ ಪೊಲೀಸರು ಕೂಡ ಹೈ ಅಲರ್ಟ್ ಆಗಿದ್ದಾರೆ. ಅದು ನಿರ್ಜನ ಪ್ರದೇಶ. ಕರೆಂಟ್ ಇಲ್ಲ. ನೆಟ್ವರ್ಕ್ ಇಲ್ಲ. ಮಧ್ಯರಾತ್ರಿ ಸಹಾಯಕ್ಕೆ ಬರುವವರು ಕೂಡ ಕಡಿಮೆ. ಪೊಲೀಸ್ ಹಾಗೂ 112 ನಿರಂತರ ಗಸ್ತು ತಿರುಗುತ್ತಿದ್ದರು ಇಂತಹಾ ಪ್ರಕರಣ ನಡೆಯುತ್ತವೆ. ಈಗಾಗಲೇ ಮೂರ್ನಾಲ್ಕು ನಡೆದಿವೆ. ಹಾಗಾಗಿ, ಇನ್ಮುಂದೆ ಹೀಗೆ ಆಗಬಾರದು. ಬಣಕಲ್ನಿಂದ ಚಿಕ್ಕಮಗಳೂರು ಗಡಿಯ ಅಣ್ಣಪ್ಪ ಸ್ವಾಮಿ ದೇಗುಲದವರೆಗೂ ಇನ್ಮುಂದೆ ಮತ್ತಸ್ಟು ಅಲರ್ಟ್ ಆಗಿ ಇರುತ್ತೇವೆ ಅಂತಾರೆ ಎಸ್ಪಿ ಅಕ್ಷಯ್.
ಚಾರ್ಮಾಡಿ ರಸ್ತೆಯಲ್ಲಿ ಪೊಲೀಸ್ ಗಸ್ತು ಹೆಚ್ಚಳಕ್ಕೆ ಮನವಿ: ಆ ತರಕಾರಿ ಗಾಡಿಯವನು ಮಾಹಿತಿ ನೀಡಿದ್ದರಿಂದ ರಾಬರ್ಸ್ ಸಿಕ್ಕಿದ್ರು. ಅವನು ಹೇಳದಿದ್ದರೆ ಗೊತ್ತೇ ಆಗ್ತಿರ್ಲಿಲ್ಲ. ಕಂಪ್ಲೆಂಟ್ ಆಗೋದು. ಕೊಟ್ಟಿಗೆಹಾರ ಚೆಕ್ಪೋಸ್ಟ್ ಸಿಸಿಟಿವಿ ಕೂಡ ಸ್ಥಗಿತಗೊಂಡಿದೆ. ಪೊಲೀಸರು ಎಲ್ಲಿ ಹುಡುಕುತ್ತಿದ್ದರು. ಆ ರಾಬರ್ಸ್ಗಳಿಗೆ ಮುಂದಿನ ದಿನಗಳಲ್ಲಿ ಮತ್ತೇ ದರೋಡೆ ಮಾಡುವ ಆಸೆ-ಧೈರ್ಯ ಎರಡು ಬರೋದು. ಆದ್ರೆ, ಆ ಟೆಂಪೋ ಚಾಲಕನಿಂದ ಒಂದೊಳ್ಳೆ ಕೆಲಸವಾಗಿದೆ. ಅವನಿಗೊಂದು ಥ್ಯಾಂಕ್ಸ್ ಹೇಳಲೇಬೇಕು. ಈ ಮಾರ್ಗದಲ್ಲಿ ಆಸ್ಪತ್ರೆಗೆ ಹಣ ಕೊಂಡೊಯ್ಯುವವರು ಇರ್ತಾರೆ. ನಿಜಕ್ಕೂ ಪೊಲೀಸರು ಈ ಮಾರ್ಗದಲ್ಲಿ ಹೈ ಅಲರ್ಟ್ ಘೋಷಿಸೋದು ಒಳ್ಳೆಯದು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist