ಚಿಕನ್ ಶವರ್ಮಾ ತಿಂದು 14 ವರ್ಷದ ಬಾಲಕಿ ಸಾವು; 13 ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!

ತಮಿಳುನಾಡು: ಚಿಕನ್ ಅಂದ್ರೇನೇ ಸಾಕು ಮಾಂಸಹಾರಿಗಳಿಗೆ ಬಾಯಲ್ಲಿ ನೀರೂರುವುದಂತೂ ಖಂಡಿತಾ. ಆದರೆ ಮಾಂಸಹಾರಿಗಳಿಗೆ ಭಯ ಹುಟ್ಟಿಸುವ ಘಟನೆಯೊಂದು ನಡೆದಿದೆ. ಚಿಕನ್ ಶವರ್ಮಾ(Chicken shawarma) ತಿಂದ ಕೆಲಹೊತ್ತಿನಲ್ಲಿ 14ರ ಹರೆಯದ ಬಾಲಕಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಸ್ಪ್ರತೆಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದಲ್ಲದೇ ಇದೇ ರೆಸ್ಟೋರೆಂಟ್‌ನಲ್ಲಿ ಸೇವಿಸಿದ 13 ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಶವರ್ಮಾ ತಿಂದಿದ್ದು, ತಿಂದ ಕೆಲ ಹೊತ್ತಿನಲ್ಲೇ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಬಾಲಕಿಯನ್ನು ತಮಿಳುನಾಡಿನ ನಾಮಕ್ಕಲ್‌ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿರುವುದು ವರದಿಯಾಗಿದೆ. ಬಾಲಕಿಯ ತಂದೆ ರೆಸ್ಟೋರೆಂಟ್‌ನಿಂದ ಹಲವಾರು ಮಾಂಸಾಹಾರಿ ಆಹಾರವನ್ನು ಮನೆಗೆ ತಂದಿದ್ದು, ಬಾಲಕಿ ಚಿಕನ್ ಶವರ್ಮಾ ತಿಂದಿದ್ದಾಳೆ.
ಇದೇ ರೆಸ್ಟೋರೆಂಟ್‌ನಲ್ಲಿ ಮಾಂಸಾಹಾರ ಸೇವಿಸಿ 13 ವೈದ್ಯಕೀಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳು ತಕ್ಷಣ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ, ಆಹಾರದ ಮಾದರಿಗಳನ್ನು ಸಂಗ್ರಹಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಗ್ರಿಲ್ಡ್ ಚಿಕನ್, ತಂದೂರಿ ಚಿಕನ್ ಅಥವಾ ಷಾವರ್ಮಾ ತಿಂದ ನಂತರ ಅಸ್ವಸ್ಥಗೊಂಡಿರುವುದರಿಂದ ಅಲ್ಲಿ ಬಳಸಲಾಗಿದ್ದ ಮಾಂಸವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಆಹಾರ ಸುರಕ್ಷತಾ ತಂಡ ತಿಳಿಸಿದೆ.
ರಾಯಚೂರು: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು, ಪತಿ ಕುಟುಂಬಸ್ಥರ ಮೇಲೆ ಆರೋಪ
ರಾಯಚೂರು, ಸೆ.20: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ನೇತಾಜಿ ನಗರದಲ್ಲಿ ತಡ ರಾತ್ರಿ ನಡೆದಿದೆ. ಶಿಲ್ಪಾ(28) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ(Death) ಗೃಹಿಣಿ. ಮಗಳು ಸಾವು ಹಿನ್ನೆಲೆ ಘಟನಾ ಸ್ಥಳದಲ್ಲಿ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದು ಘಟನೆಗೆ ಪತಿ ಶರತ್, ತಾಯಿ ಶಶಿಕಲಾ& ತಂದೆ ಸುರೇಶ್ ಕಾರಣ ಎಂದು ಆರೋಪ ಮಾಡಿದ್ದಾರೆ. ತಡರಾತ್ರಿ ಶಿಲ್ಪಾಳನ್ನ ಎರಡನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಶಿಲ್ಪಾ ಸಾವಿಗೆ ಪತಿ ಕುಂಟುಂಬಸ್ಥರು ಕಾರಣ. ಶಿಲ್ಪಾಳನ್ನ ಎರಡನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾರೆ ಎಂದು ಆಂಧ್ರ ಮೂಲದ ಶಿಲ್ಪಾ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಮನೆ ಹೊರಗಿದ್ದ ಮೃತದೇಹವನ್ನು ಮನೆಯೊಳಗೆ ತಂದಿಟ್ಟು, ಪರಾರಿಯಾಗಿರೊ ಪತಿ ಬರೋ ವರೆಗೂ ಮೃತದೇಹ ಶಿಫ್ಟ್ ಮಾಡಲ್ಲ ಎಂದು ಶಿಲ್ಪಾ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಶಿಲ್ಪಾ ಪೋಷಕರು 50 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವರದಕ್ಷಿಣೆ ಕೊಟ್ಟು ಮದುವೆ ಮಾಡಿಸಿದ್ದರು. ಕಳೆದೊಂದು ವರ್ಷದ ಹಿಂದೆ ಬಿಟೆಕ್ ಮುಗಿಸಿದ್ದ ಶಿಲ್ಪಾಳನ್ನ ರೈಸ್ ಮಿಲ್ ಮಾಲೀಕ ಶರತ್ ಜೊತೆ ಮದುವೆ ಮಾಡಿಸಲಾಗಿತ್ತು. ಮದುವೆಯಾದ ಬಳಿಕ ಪತ್ನಿಗೆ ಶರತ್ ಕಿರುಕುಳ ನೀಡ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಪತಿ ಟಾರ್ಚರ್ಗೆ ಶಿಲ್ಪಾ ಡಿಪ್ರೆಶನ್ ಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಈ ಹಿನ್ನೆಲೆ ಇಂದು ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗೋಕೆ ಪ್ಲಾನ್ ಮಾಡಿದ್ದರು. ಆದರೆ ಮಗಳ ಮನೆಗೆ ಬಂದು ನೀಡಿದಾಗ ಮಗಳು ಅನುಮಾನಾಸ್ಪದ ರೀತಿಯಲ್ಲಿ ಸತ್ತು ಬಿದ್ದಿದ್ದಳು.