ಸಬ್ ರಿಜಿಸ್ಟ್ರಾರ್ ಕಛೇರಿಯ ಕರ್ತವ್ಯದ ಸಮಯ ಬದಲಾವಣೆ ; ಸೆ.30 ರವರೆಗೆ ಬೆ.8 ರಿಂದ ರಾತ್ರಿ 8 ರವರೆಗೆ ಓಪನ್!
ಬೆಂಗಳೂರು: ಸ್ಥಿರಾಸ್ತಿ ಮಾರ್ಗಸೂಚಿ ದರ ಅ. 1ರಿಂದ ಹೆಚ್ಚಳವಾಗಲಿರುವ ಹಿನ್ನೆಲೆಯಲ್ಲಿ ಈ ಮಾಸಾಂತ್ಯದವರೆಗೆ ಆಸ್ತಿ ನೋಂದಣಿ ಸಂಖ್ಯೆ ಹೆಚ್ಚಾಗಬಹುದಾಗಿದ್ದು, ರಾಜ್ಯದ ಎಲ್ಲ ಸಬ್ ರಿಜಿಸ್ಟ್ರಾರ್ ಕಚೇರಿಗಳು ಸೆ. 23ರಿಂದ ಸೆ. 30ರ ವರೆಗೆ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕೆಲಸ ನಿರ್ವಹಿಸಲಿವೆ.
ಸೆ. 23, ನಾಲ್ಕನೇ ಶನಿವಾರ ಕೂಡ ಸಬ್ ರಿಜಿಸ್ಟ್ರಾರ್ ಕಚೇರಿಗಳು ಕಾರ್ಯನಿರ್ವಹಿಸ ಲಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಬಿ.ಆರ್. ಮಮತಾ ತಿಳಿಸಿದ್ದಾರೆ.
ಚೈತ್ರಾ ಕುಂದಾಪುರ ಆಡಿಯೋ ಬಹಿರಂಗ..?
ಬೆಂಗಳೂರು, ಸೆ.16: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಹಣ ಪಡೆದ ವಂಚನೆ ಎಸಗಿದ ಪ್ರಕರಣ ಸಂಬಂಧ ಆರೋಪಿಗಳಾದ ಚೈತ್ರಾ ಕುಂದಾಪುರ (Chaitra Kundapur) ಮತ್ತು ಗ್ಯಾಂಗ್ ಕೃತ್ಯ ಎಸಗಲು ಸ್ಕ್ರಿಪ್ಟ್ಗೆ ತಕ್ಕಂತೆ ಅಗ್ಗಾಗ ಲೊಕೋಶನ್ಗಳನ್ನು ಬದಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ನಿನ್ನೆ ಕೆಲವೆಡೆ ಸ್ಥಳ ಮಹಜರು ನಡೆಸಿದ ಸಿಸಿಬಿ ಪೊಲೀಸರು ಇಂದು ಮತ್ತೆ ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ. ಈ ನಡುವೆ ಚೈತ್ರಾ ಕಬಾಬ್ ಗ್ಯಾಂಗ್ ಡೀಲಿಂಗ್ ನಡೆಸಿದ ಆಡಿಯೋ ಬಹಿರಂಗವಾಗಿದೆ.
ಪ್ರಸಾದ ಮತ್ತು ಚೈತ್ರಾ ನಡುವಿನ ಆಡಿಯೋ ಸಂಭಾಷಣೆ ಇದಾಗಿದೆ. ಅಲ್ಲದೆ, ಈ ಸಂಭಾಷಣೆ ವೇಳೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಪ್ರಸಾದ್ ಚೈತ್ರಾಗೆ ಪರಿಚಯಿಸಿದ್ದಾನೆ.
ಕೃತ್ಯಕ್ಕೆ ಲೊಕೇಶನ್ ಬದಲಾಯಿಸುತ್ತಿದ್ದ ಚೈತ್ರಾ ಆ್ಯಂಡ್ ಗ್ಯಾಂಗ್
ಕೃತ್ಯಕ್ಕೆ ಆಗಾಗ ಲೊಕೇಶನ್ ಬದಲಿಸುತ್ತಿದ್ದ ಹಿನ್ನೆಲೆ ನಿನ್ನೆ ಆರೋಪಿಗಳನ್ನು ಮೂರು ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದ ಸಿಸಿಬಿ ಪೊಲೀಸರು, ಇಂದು ಮತ್ತೆ ಹಲವೆಡೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸುವ ಸಾಧ್ಯತೆ ಇದೆ.
ಮಂಗಮ್ಮನಪಾಳ್ಯ ದಲ್ಲಕರುವ ಗೋವಿಂದ ಬಾಬು ಪೂಜಾರಿ ಕಚೇರಿ, ವಿಜಯನಗರದಲ್ಲಿರುವ ಅಭಿನವ ಹಾಲಶ್ರೀ ನಿವಾಸ, ಕೆ.ಕೆ ಗೆಸ್ಟ್ ಹೌಸ್ ಸೆಕೆಂಡ್ ಫ್ಲೋರ್ನಲ್ಲಿರುವ 207 ನಂಬರ್ ರೂಮ್ ಅನ್ನು ನಿನ್ನೆ ಮಹಜರು ನಡೆಸಲಾಗಿದೆ.
ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ಮೀಟಿಂಗ್ ನಡೆಸಿ ಆರೋಪಿ ಗಗನ್ ಅಲ್ಲಿಂದಲೇ ಹಣ ತೆಗೆದುಕೊಂಡು ಹೋಗಿರುವುದು ತಿಳಿದುಬಂದಿದೆ. ಅಭಿನವ ಹಾಲಶ್ರೀ ಅವರು ವಿಜಯನಗರ ನಿವಾಸದಲ್ಲೇ ಒಂದೂವರೆ ಕೋಟಿ ಪಡೆದ್ದು, ಕೆ.ಕೆ.ಗೆಸ್ಟ್ ಹೌಸ್ನಲ್ಲಿ ಹಲವು ಬಾರಿ ಮೀಟಿಂಗ್ ನಡೆದಿತ್ತು. ಕಬಾಬ್ ವ್ಯಾಪಾರಿ ಚನ್ನಾ ನಾಯ್ಕ್ ಚುನಾವಣ ಸಮಿತಿ ಸದಸ್ಯ ಎಂದು ಭೆಟಿಯಾಗಿದ್ದು ಇಲ್ಲೇ ಎಂದು ತಿಳಿದುಬಂದಿದೆ.