ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ತಲೆಮರೆಸಿಕೊಂಡಿದ್ದ ಅಭಿನವ ಹಾಲಶ್ರೀ ಅರೆಸ್ಟ್!
ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ತಲೆಮರೆಸಿಕೊಂಡಿದ್ದ ಅಭಿನವ ಹಾಲಶ್ರೀ ಅರೆಸ್ಟ್.
ಚೈತ್ರಾ ಕುಂದಾಪುರ (Chaitra Kundapura) ಅಂಡ್ ಗ್ಯಾಂಗ್ ವಂಚನೆ ಪ್ರಕರಣದ 3ನೇ ಆರೋಪಿ ಹಾಲಾಶ್ರೀ ಸ್ವಾಮೀಜಿಯನ್ನು ಒಡಿಶಾದ ಕಟಕ್ನಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲ ಸಮಯದ ಹಿಂದೆಯೇ ಸಿಸಿಬಿ ಪೊಲೀಸರು ಸ್ವಾಮಿಜಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಸದ್ಯ ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸಿಸಿಬಿ ಕಣ್ತಪ್ಪಿಸಿ ಹಾಲಶ್ರೀ ಸ್ವಾಮೀಜಿ ದಿನಕ್ಕೊಂದು ಸ್ಥಳವನ್ನು ಬದಲಾಯಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಮೊದಲು ಸ್ವಾಮಿಜಿಯ ಕಾರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಚಲಿಸುತ್ತಿದ್ದ ರೈಲಿನಲ್ಲೇ ಹಾಲಶ್ರೀಯನ್ನು ಬಂಧಿಸಿರುವ ಪೊಲೀಸರು ಅಲ್ಲಿಂದ ಬೆಂಗಳೂರಿಗೆ ಕರೆ ತರುತ್ತಿದ್ದಾರೆ ಎನ್ನಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದ.
ಇಂದು ಸಿಸಿಬಿ ಪೊಲೀಸರಿಂದ ಸ್ವಾಮೀಜಿ ಆತ್ಮೀಯ ಸಂಪರ್ಕದಲ್ಲಿದ್ದವರ ವಿಚಾರಣೆ ಮಾಡಲಾಗುತ್ತದೆ. ಮಠದ ಕೆಲ ಆತ್ಮೀಯರು ಹಾಗೂ ಚಾಲಕ ಸೇರಿ ಕೊನೆ ಕ್ಷಣದ ಕರೆಗಳ ಆಧರಿಸಿ ವಿಚಾರಣೆ ಮಾಡಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.
ಇಂದು ಹಣಕಾಸು ವಿಚಾರದ ಬಗ್ಗೆ ಚೈತ್ರಾ ಮತ್ತು ಗಗನ್ ಇಬ್ಬರನ್ನು ಮುಖಾಮುಖಿ ಮಾಡಿ ಪ್ರಶ್ನೆಗಳನ್ನಿಟ್ಟು ವಿಚಾರಣೆ ಮಾಡುವ ಸಾಧ್ಯತೆಗಳಿವೆ. ಆರೋಪಿಗಳ ಮೊಬೈಲ್ಗಳಲ್ಲಿಯೂ ಎಲ್ಲಾ ಸಂದೇಶಗಳು, ಕರೆಗಳು, ಪೋಟೋಸ್, ಡೀಟೆಲ್ಸ್ ಡಿಲೀಟ್ ಆಗಿತ್ತು. ಈ ಹಿನ್ನೆಲೆ ಮೊಬೈಲ್ಗಳ ರಿಟ್ರೀವ್ ಮಾಡಲು ಪೊಲೀಸರು ನೀಡಿದ್ದರು. ಇಂದು ಆರೋಪಿತರ ಮೊಬೈಲ್ ರಿಟ್ರೀವ್ ವರದಿ ಬರೋ ಸಾಧ್ಯತೆಗಳಿವೆ.
ಚೈತ್ರಾ ಕುಂದಾಪುರ ನೀಡಿದ ಮೊದಲ ಪ್ರತಿಕ್ರಿಯೆ ಹೊಸ ಸಂಚಲನ ಸೃಷ್ಟಿಸಿದೆ. ಸ್ವಾಮೀಜಿಗಳು ಸಿಕ್ಕಿ ಹಾಕಿಕೊಳ್ಳಲಿ. ಎಲ್ಲಾ ಸತ್ಯ ಗೊತ್ತಾಗುತ್ತೆ ಸರ್. ಸ್ವಾಮೀಜಿ ಸಿಕ್ಕಿ ಹಾಕಿಕೊಂಡ ನಂತರ ದೊಡ್ಡ ದೊಡ್ಡವರ ಹೆಸರುಗಳು ಹೊರ ಬರುತ್ತವೆ. ಇಂದಿರಾ ಕ್ಯಾಂಟೀನ್ ಬಿಲ್ ಪೆಡ್ಡಿಂಗ್ ಇರೋ ಕಾರಣ ಈ ಷಡ್ಯಂತ್ರ ರಚನೆಯಾಗಿದೆ. ಎ1 ಆರೋಪಿ ನಾನೇ ಆಗಿರಬಹುದು. ಸ್ವಾಮೀಜಿ ಸಿಕ್ಕ ನಂತರವೇ ಎಲ್ಲವೂ ಗೊತ್ತಾಗಲಿದೆ ಎಂದು ಹೇಳುತ್ತಿದ್ದ ಚೈತ್ರಾಳನ್ನು ಪೊಲೀಸರು ಕಚೇರಿ ಒಳಗೆ ಕರೆದುಕೊಂಡು ಹೋದರು.
ಚೈತ್ರಾ ಕುಂದಾಪುರ ಆಸ್ತಿ
ಆಪ್ತ ಶ್ರೀಕಾಂತ್ ಹೆಸ್ರಲ್ಲಿ ಬ್ಯಾಂಕ್ನಲ್ಲಿ ₹1.08ಕೋಟಿ ಆಸ್ತಿಪಾಸ್ತಿ ದಾಖಲೆ ಪತ್ತೆಯಾಗಿದೆ ಎನ್ನಲಾಗಿದೆ. ₹65 ಲಕ್ಷ ಮೌಲ್ಯದ ಚಿನ್ನಾಭರಣ, ಸಹಕಾರಿ ಬ್ಯಾಂಕ್ನಲ್ಲಿ ₹40 ಲಕ್ಷ ಠೇವಣಿ ಇರೋದರ ಬಗ್ಗೆ ತಿಳಿದು ಬಂದಿದೆ. ಕುಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ಮಹಡಿ ಮನೆ ಕಟ್ಟಲಾಗುತ್ತಿದೆ.