Cancer: ಬಾಯಿಯ ಕ್ಯಾನ್ಸರ್ ನ ಲಕ್ಷಣಗಳೇನು? ಯಾವುದೇ ಕೆಟ್ಟ ಹವ್ಯಾಸ ಇಲ್ಲದೆ ಇದ್ದರೂ ಹೇಗೆ ಹಬ್ಬುತ್ತೆ..!
ತನ್ನ ಅನೇಕ ಮಾರಕ ಬಗೆಗಳಿಂದ ಕುಖ್ಯಾತಿ ಪಡೆದಿರುವ ಮಹಾಮಾರಿ ಕ್ಯಾನ್ಸರ್ ರೋಗದ ಒಂದು ಬಹು ಮುಖ್ಯ ವಿಭಾಗ ಎಂದರೆ ಅದು ಬಾಯಿಯ ಕ್ಯಾನ್ಸರ್. ಮುಖಕ್ಕೆ ಸಂಬಂಧಪಟ್ಟ ಈ ಮಾರಕ ರೋಗ ಕುತ್ತಿಗೆ ಮತ್ತು ತಲೆಯ ಭಾಗವನ್ನು ಆವರಿಸಿಕೊಂಡಿರುತ್ತದೆ. ವಿಶ್ವದ ಶೇಕಡ 85 ರಷ್ಟು ಕ್ಯಾನ್ಸರ್ ಪ್ರಕರಣಗಳು ಈ ವಿಭಾಗಕ್ಕೆ ಸಂಬಂಧಪಟ್ಟ ಕಾಯಿಲೆಗಳೇ ಆಗಿರುತ್ತವೆ. ಆದರೂ ಅದರ ಗುಣ ಲಕ್ಷಣ ಮತ್ತು ಇನ್ನಿತರ ವಿಷಯಗಳ ಬಗ್ಗೆ ಜನರಿಗೆ ಈಗಲೂ ಅರಿವು ಕಡಿಮೆಯಿದೆ.
ಇತ್ತೀಚಿಗೆ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗಳು ಹಾಗೂ ಚುಚ್ಚು ಮದ್ದಿನ ಕುರಿತು ಅಧ್ಯಯನ ನಡೆಯುತ್ತಿದ್ದು, ಆರಂಭಿಕ ಹಂತದಲ್ಲೇ ಕ್ಯಾನ್ಸರ್‌ಗೆ ಚಿಕಿತ್ಸೆ ನೆರವೇರಿಸಬಹುದಾಗಿದೆ. ಹೀಗಿದ್ದೂ ಕೆಲವೊಂದು ಮಾದರಿಯ ಕ್ಯಾನ್ಸರ್ ಆರೋಗ್ಯವಂತ ವ್ಯಕ್ತಿಗಳಲ್ಲೂ ಕಂಡುಬರುತ್ತಿದೆ. ಅಂದರೆ ಯಾವ ವ್ಯಕ್ತಿ ಯಾವುದೇ ದುಷ್ಚಟ ಬೆಳೆಸಿಕೊಳ್ಳದಿದ್ದರೂ ಉತ್ತಮ ಆರೋಗ್ಯ ಹೊಂದಿದ್ದರೂ ಕ್ಯಾನ್ಸರ್ ಕಂಡುಬರುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಕ್ಯಾನ್ಸರ್ಗಳಲ್ಲಿ ಹಲವು ಬಗೆಗಳಿದ್ದು ಅವುಗಳಲ್ಲಿ ಬಾಯಿಯ ಕ್ಯಾನ್ಸರ್ ಸಹ ಒಂದು. ಬಾಯಿಯ ಕ್ಯಾನ್ಸರ್ ಬಾಯಿಯಲ್ಲಿ ಹುಣ್ಣುಗಳಾಗಿ ಕಾಣಿಸಿಕೊಳ್ಳುತ್ತದೆ. ಅದು ವರ್ಷಗಳ ಕಾಲ ಹೋಗುವುದಿಲ್ಲ. ಬಾಯಿಯ ಕ್ಯಾನ್ಸರ್ ಪ್ರತಿ ವರ್ಷ ಯುನೈಟೆಡ್ ಸ್ಟೇ‘ಟ್ನಲ್ಲಿ ಸುಮಾರು 50,000 ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂಕಿ-ಅಂಶಗಳು ತೋರಿಸಿವೆ.
ಊತ/ದಪ್ಪವಾಗುವುದು, ಉಂಡೆಗಳು ಅಥವಾ ಉಬ್ಬುಗಳು, ಒರಟಾದ ಕಲೆಗಳು/ಅಥವಾ ತುಟಿಗಳು, ಒಸಡುಗಳು, ಕೆನ್ನೆಗಳು ಅಥವಾ ಬಾಯಿಯೊಳಗಿನ ಇತರ ಪ್ರದೇಶಗಳಲ್ಲಿ ಸವೆತದ ಪ್ರದೇಶಗಳು. ಬಾಯಿಯಲ್ಲಿ ವೆಲ್ವೆಟ್, ಬಿಳಿ, ಕೆಂಪು, ಅಥವಾ ಮಚ್ಚೆಯ (ಬಿಳಿ ಮತ್ತು ಕೆಂಪು) ಪ್ಲೇಕ್‌ಗಳು. ಬಾಯಿಯಲ್ಲಿ ರಕ್ತಸ್ರಾವ. ಅರ್ಥಮಾಡಿಸಲಾಗದ ಮರಗಟ್ಟುವಿಕೆ, ಬೇಸರದ ಭಾವನೆ, ಅಥವಾ ಮುಖ, ಬಾಯಿ ಅಥವಾ ಕತ್ತಿನ ಪ್ರದೇಶದಲ್ಲಿ ನೋವು
ಮುಖ, ಕುತ್ತಿಗೆ ಅಥವಾ ಬಾಯಿಯ ಮೇಲೆ ನಿರಂತರವಾದ ಹುಣ್ಣುಗಳು. ಹಾಗೆಯೇ ರಕ್ತಸ್ರಾವವಾಗುತ್ತವೆ ಮತ್ತು 2 ವಾರಗಳಾದರು ಗುಣವಾಗುವುದಿಲ್ಲ. ಗಂಟಲಿನ ಹಿಂಭಾಗದಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿದೆ ಎಂಬ ನೋವು ಅಥವಾ ಭಾವನೆ. ಅಗಿಯಲು ಅಥವಾ ನುಂಗಲು, ಮಾತನಾಡಲು ಅಥವಾ ದವಡೆ ಅಥವಾ ನಾಲಿಗೆಯನ್ನು ಚಲಿಸಲು ತೊಂದರೆ. ಒರಟುತನ, ದೀರ್ಘಕಾಲದ ನೋಯುತ್ತಿರುವ ಗಂಟಲು ಅಥವಾ ಧ್ವನಿಯಲ್ಲಿ ಬದಲಾವಣೆ. ಕಿವಿ ನೋವು. ಇವು ಬಾಯಿ ಕ್ಯಾನ್ಸರ್ನ ಲಕ್ಷಣಗಳು.
- ಸಂಶೋಧನೆ ಹೇಳಿರುವ ಪ್ರಕಾರ ಯಾವ ವ್ಯಕ್ತಿ ಅತಿ ಯಾಗಿ ಕುಡಿತ ಮತ್ತು ಬೀಡಿ-ಸಿಗರೇಟು ಹಾಗು ತಂಬಾಕು ಸೇವನೆಯ ಚಟವನ್ನು ಹೊಂದಿರುತ್ತಾರೆಯೋ, ಅಂತಹ ವರಲ್ಲಿ ಬಾಯಿಯ ಕ್ಯಾನ್ಸರ್ ಬರುವ ಲಕ್ಷಣ ಶೇಕಡ 100 ರಷ್ಟು ಅಧಿಕವಾಗಿರುತ್ತದೆ ಎಂದು ಎಚ್ಚರಿಕೆಯನ್ನು ನೀಡುತ್ತಾರೆ.
- ಈ ಕಾಯಿಲೆಯ ಪ್ರಮುಖ ರೋಗಲಕ್ಷಣಗಳು, ಏನೆಂದರೆ ಬಾಯಿಯ ಒಳಗಿನ ಭಾಗದಲ್ಲಿ ಅನಿರೀಕ್ಷಿತವಾದ ಮಾಂಸಖಂಡದ ಬೆಳವಣಿಗೆ ಕಂಡು ಬರುವುದು ಅಥವಾ ಬಾಯಿಯ ಒಳಗಿನ ಭಾಗ ಇದ್ದಕ್ಕಿದ್ದಂತೆ ಊದಿಕೊಳ್ಳು ವುದು.
- ಬಾಯಿಯ ಯಾವುದೇ ಭಾಗದಲ್ಲಿ ಅಂದರೆ ದವಡೆ ಹಾಗೂ ಕುತ್ತಿಗೆ ಭಾಗವನ್ನು ಸೇರಿಕೊಂಡು ಈ ಮೇಲಿನ ಲಕ್ಷಣಗಳು ಕಂಡು ಬಂದರೆ, ಅಥವಾ ದುಗ್ದರಸ ಗ್ರಂಥಿ ಗಳಲ್ಲಿ ಈ ರೀತಿಯ ಗಂಟುಗಳು ಇದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ.
- ನಿಮ್ಮ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಈ ರೀತಿಯ ಕೆಂಪು ಅಥವಾ ಬಿಳಿ ಬಣ್ಣದ ಗಾಯದ ಅನುಭವ ಇದ್ದರೆ ಅದನ್ನು ಬಾಯಿ ಕ್ಯಾನ್ಸರ್ ಎಂದು ಕರೆಯ ಲಾಗುತ್ತದೆ. ಯಾವುದಕ್ಕೂ ಡಾಕ್ಟರ್ ಬಳಿ ಒಮ್ಮೆ ಚೆಕ್ ಮಾಡಿಸಿಕೊಳ್ಳಿ.
- ಕೆಲವರಿಗೆ ಊಟ ಮಾಡುವಾಗ ಸರಿಯಾಗಿ ಬಾಯಿ, ದವಡೆ ಅಥವಾ ನಾಲಿಗೆ ಆಡಿಸಲು ಬರುವುದಿಲ್ಲ. ಅಂದ್ರೆ ಕಷ್ಟ ವಾಗುತ್ತದೆ.
- ಇದು ತಾತ್ಕಾಲಿಕವಾಗಿ ಇದ್ದರೆ ಯಾವುದೇ ತೊಂದರೆ ಇಲ್ಲ. ಆದರೆ ನಿರಂತರವಾಗಿ ಮುಂದುವರೆದರೆ ಅಂದರೆ ಕನಿಷ್ಠ ಆರು ವಾರಗಳಿಗಿಂತ ಹೆಚ್ಚಾಗಿದ್ದರೆ, ನಿಮ್ಮ ವೈದ್ಯರ ಬಳಿ ತೋರಿಸಿಕೊಳ್ಳಿ.
ಬಾಯಿಯ ಕ್ಯಾನ್ಸರ್ ಅನ್ನು ಅನೇಕ ಇತರ ಕ್ಯಾನ್ಸರ್ಗಳಿಗೆ ನೀಡಲಾಗುವಂತೆ ಚಿಕಿತ್ಸೆ ನೀಡಲಾಗುತ್ತದೆ. ಕ್ಯಾನ್ಸರ್ ಬೆಳವಣಿಗೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯೊಂದಿಗೆ, ವಿಕಿರಣ ಚಿಕಿತ್ಸೆ ಮತ್ತುಅಥವಾ ಯಾವುದೇ ಉಳಿದ ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಕೀಮೋಥೆರಪಿ (ಔಷಧ ಚಿಕಿತ್ಸೆಗಳು) ಮೂಲಕ ಚಿಕಿತ್ಸೆ ನೀಡಲಾಗುತ್ತದೆ.