ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳನ್ನು ತಿದ್ದುಪಡಿ ಮಾಡಿ ಅಧಿಸೂಚನೆಯನ್ನು ಹೊರಡಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ!
ದೆಹಲಿ ಸೆಪ್ಟೆಂಬರ್ 28: ಮಾಹಿತಿ ಮತ್ತು ಪ್ರಸಾರ ಸಚಿವಾಲಯ(ministry of information and broadcasting) ಬುಧವಾರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು, 1994 (Cable Television Network Rules) ಅನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಹೊರಡಿಸಿದ್ದು ಈ ಮೂಲಕ ಮಲ್ಟಿ-ಸಿಸ್ಟಮ್ ಆಪರೇಟರ್ (MSO) ನೋಂದಣಿಗಳನ್ನು ನವೀಕರಿಸುವ ವಿಧಾನವನ್ನು ಪರಿಚಯಿಸಿದೆ. ಹೆಚ್ಚುವರಿಯಾಗಿ, ಕೊನೆಯ ಸ್ತರವರಗೆ ಇಂಟರ್ನೆಟ್ ತಲುಪುವಂತೆ ಮಾಡುವುದಕ್ಕಾಗಿ ಬ್ರಾಂಡ್ ಬ್ಯಾಂಡ್ ಸೇವಾ ಪೂರೈಕೆದಾರರೊಂದಿಗೆ ಕೇಬಲ್ ಆಪರೇಟರ್‌ಗಳು ಮೂಲಸೌಕರ್ಯಗಳನ್ನು ಹಂಚಿಕೊಳ್ಳಲು ನಿಯಮಗಳಲ್ಲಿ ಸಕ್ರಿಯಗೊಳಿಸುವ ನಿಬಂಧನೆಯನ್ನು ಸೇರಿಸಲಾಗಿದೆ.
ನವೀಕರಿಸಿದ ನಿಯಮಗಳ ಅಡಿಯಲ್ಲಿ, MSO ಗಳು ಆನ್‌ಲೈನ್ ನೋಂದಣಿ ಅಥವಾ ನವೀಕರಣಕ್ಕಾಗಿ ಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್ ಅನ್ನು ಬಳಸಬೇಕಾಗುತ್ತದೆ. ನೋಂದಣಿಗಳು ಒಂದು ದಶಕದವರೆಗೆ ಮಾನ್ಯವಾಗಿರುತ್ತವೆ, ನವೀಕರಣಕ್ಕಾಗಿ ₹1 ಲಕ್ಷದ ಪ್ರೊಸೆಸಿಂಗ್ ಶುಲ್ಕವಿರುತ್ತದೆ. ನವೀಕರಣಕ್ಕಾಗಿ ಅರ್ಜಿಗಳನ್ನು ಪ್ರಸ್ತುತ ನೋಂದಣಿಯ ಅವಧಿ ಮುಗಿಯುವ ಎರಡರಿಂದ ಏಳು ತಿಂಗಳ ಮೊದಲು ಸಲ್ಲಿಸಬೇಕು.
MSO ನೋಂದಣಿಗಾಗಿ ತಿದ್ದುಪಡಿ ಮಾಡಲಾದ ನಿಯಮಗಳು
- ಮಲ್ಟಿ-ಸಿಸ್ಟಮ್ ಆಪರೇಟರ್ ಗಳು MIB ಯ ಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್‌ನಲ್ಲಿ ನೋಂದಣಿ ಅಥವಾ ನೋಂದಣಿಯ ನವೀಕರಣಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
- ಮಲ್ಟಿ-ಸಿಸ್ಟಮ್ ಆಪರೇಟರ್ ನೋಂದಣಿಗಳನ್ನು ಹತ್ತು ವರ್ಷಗಳ ಅವಧಿಗೆ ಮಂಜೂರು ಮಾಡಬೇಕು ಅಥವಾ ನವೀಕರಿಸಬೇಕು.
- ಪ್ರೊಸೆಸಿಂಗ್ ಶುಲ್ಕ ಒಂದು ಲಕ್ಷ ರೂ
- ನೋಂದಣಿಯ ನವೀಕರಣದ ಅರ್ಜಿಯು ನೋಂದಣಿಯ ಅವಧಿ ಮುಗಿಯುವ ಮೊದಲು ಎರಡರಿಂದ ಏಳು ತಿಂಗಳವರೆಗೆ ಇರುತ್ತದೆ.
- ನವೀಕರಣ ಪ್ರಕ್ರಿಯೆಯು ವ್ಯವಹಾರವನ್ನು ಸುಲಭಗೊಳಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿದೆ. ಏಕೆಂದರೆ ಇದು ಕೇಬಲ್ ಆಪರೇಟರ್‌ಗಳಿಗೆ ತಮ್ಮ ಸೇವೆಗಳನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಖಚಿತತೆಯನ್ನು ನೀಡುತ್ತದೆ. ಆದ್ದರಿಂದ ವಿದೇಶಿ ಹೂಡಿಕೆಗೆ ವಲಯವನ್ನು ಆಕರ್ಷಕವಾಗಿಸುತ್ತದೆ.
- 7 ತಿಂಗಳೊಳಗೆ ನೋಂದಣಿ ಮುಕ್ತಾಯಗೊಳ್ಳುವ MSO ಗಳು ಬ್ರಾಡ್‌ಕಾಸ್ಟ್ ಸೇವಾ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅಗತ್ಯವಿದೆ ಎಂದು ಸಚಿವಾಲಯ ತಿಳಿಸಿದೆ. ಯಾವುದೇ ಸಹಾಯದ ಅಗತ್ಯವಿದ್ದರೆ, ಪೋರ್ಟಲ್‌ನಲ್ಲಿ ಲಭ್ಯವಿರುವ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಇಮೇಲ್ ಅನ್ನು sodas-moiab@gov.in ಗೆ ಕಳುಹಿಸಬಹುದು.
- ಹಿಂದೆ, ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ ನಿಯಮಗಳು, 1994 ರ ಅಡಿಯಲ್ಲಿ ಹೊಸ ಮಲ್ಟಿ-ಸಿಸ್ಟಮ್ ಆಪರೇಟರ್ ನೋಂದಣಿಗಳನ್ನು ಮಾತ್ರ ನೀಡಲಾಯಿತು. ನಿಯಮಗಳು ಮಲ್ಟಿ-ಸಿಸ್ಟಮ್ ಆಪರೇಟರ್ ನೋಂದಣಿಗಳಿಗೆ ಮಾನ್ಯತೆಯ ಅವಧಿಯನ್ನು ನಿರ್ದಿಷ್ಟಪಡಿಸಿಲ್ಲ ಅಥವಾ ಆನ್‌ಲೈನ್ ಅರ್ಜಿಗಳ ಕಡ್ಡಾಯ ಫೈಲಿಂಗ್ ಅನ್ನು ಗುರುತಿಸಲಿಲ್ಲ.
ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರರೊಂದಿಗೆ ಕೇಬಲ್ ಆಪರೇಟರ್‌ಗಳು ಮೂಲಸೌಕರ್ಯ ಹಂಚಿಕೆಗೆ ಸಂಬಂಧಿಸಿದ ನಿಬಂಧನೆಯನ್ನು ಸೇರಿಸುವುದರಿಂದ ವರ್ಧಿತ ಇಂಟರ್ನೆಟ್ ಪೂರೈಕೆ ಮತ್ತು ಸಂಪನ್ಮೂಲಗಳ ಸಮರ್ಥ ಬಳಕೆಯ ಪ್ರಯೋಜನವನ್ನು ಒದಗಿಸುತ್ತದೆ. ಇದು ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಹೆಚ್ಚುವರಿ ಮೂಲಸೌಕರ್ಯದ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಹಂಪಿಯನ್ನು ಅತ್ಯುತ್ತಮ ಪ್ರವಾಸೋದ್ಯಮ ತಾಣವೆಂದು ಘೋಷಿಸಿದ ಕೇಂದ್ರ
ಬೆಂಗಳೂರು, ಸೆ.28: ಕರ್ನಾಟಕದ ವಿಶ್ವ ಪಾರಂಪರಿಕ ತಾಣವಾದ ವಿಜಯನಗರ(Vijayanagara) ಸಾಮ್ರಾಜ್ಯದ ಹಂಪಿ (Hampi)ಗೆ ಈಗ ಮತ್ತೊಂದು ಗರಿ ಮೂಡಿದೆ. ಪ್ರವಾಸೋದ್ಯಮ ಸಚಿವಾಲಯವು ಬುಧವಾರ(ಸೆ.27)ದಂದು ಕರ್ನಾಟಕದ ಅಪ್ರತಿಮ ತಾಣವನ್ನು ಭಾರತದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ-2023 ಎಂದು ಘೋಷಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ಪ್ರವಾಸೋದ್ಯಮ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ‘ಇದೊಂದು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಈ ಘೋಷಣೆ ಮಾಡಲಾಗಿದೆ. ಯುನೆಸ್ಕೋ-ರಕ್ಷಿತ ಸೈಟ್, ಸಚಿವಾಲಯದ ಅಡಿಯಲ್ಲಿ ಕೇಂದ್ರೀಯ ನೋಡಲ್ ಏಜೆನ್ಸಿ, ರೂರಲ್ ಟೂರಿಸಂ ಮತ್ತು ರೂರಲ್ ಹೋಂಸ್ಟೇ ಆಯೋಜಿಸಿದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಸ್ಪರ್ಧೆ-2023 ಆವೃತ್ತಿಯನ್ನು ಆಯೋಜಿಸಲಾಗಿತ್ತು. ರಾಜ್ಯ ಸರ್ಕಾರದ ಅಧಿಕಾರಿಗಳು ಬುಧವಾರ ನವದೆಹಲಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇನ್ನು ಈ ಘೋಷಣೆಯಿಂದ ಗ್ರಾಮೀಣ ಮೂಲಸೌಕರ್ಯ ಮತ್ತು ಅದರ ಸಂಸ್ಕೃತಿಯನ್ನು ಸುಧಾರಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹಣವನ್ನು ಪಡೆಯಲು ಸಹಾಯ ಮಾಡುತ್ತದೆ.
ಇನ್ನು ಪ್ರವಾಸೋದ್ಯಮ ಸ್ಪರ್ಧೆಯಲ್ಲಿ ಹಂಪಿಯ ಒಂಬತ್ತು ಸ್ತಂಭಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸುವ ಮೂಲಕ ಪ್ರವಾಸೋದ್ಯಮ ಗ್ರಾಮವಾಗಿ ಹಂಪಿ ಗುರುತಿಸಲ್ಪಟ್ಟಿದೆ ಎಂದು ಸಚಿವಾಲಯವು ತಿಳಿಸಿದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಿದ 795 ಅರ್ಜಿಗಳಲ್ಲಿ ಹಂಪಿಯನ್ನು ಆಯ್ಕೆ ಮಾಡಲಾಗಿದೆ. ಇದೊಂದು ಹೆಮ್ಮೆಯ ಕ್ಷಣ ಎಂದು ಕರ್ನಾಟಕ ಪ್ರವಾಸೋದ್ಯಮ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಹೇಳಿದ್ದಾರೆ.
ಇದರೊಂದಿಗೆ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತವು ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸಲು , ಜನಪ್ರಿಯಗೊಳಿಸುವ ಕೆಲಸ ಮಾಡಬಹುದು ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದು ಗ್ರಾಮೀಣ ಕಲೆ ಮತ್ತು ಕರಕುಶಲತೆಯನ್ನು ಜನಪ್ರಿಯಗೊಳಿಸಲು ಮತ್ತು ಹಳ್ಳಿಯ ಅನುಭವವನ್ನು ಪಡೆಯಲು ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಕೃಷಿ ಮತ್ತು ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ರಾಜ್ಯಕ್ಕೆ ದೊಡ್ಡ ಉತ್ತೇಜನವಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮತ್ತೊಬ್ಬ ಅಧಿಕಾರಿ ಹೇಳಿದರು.
ಏತನ್ಮಧ್ಯೆ, ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮತ್ತು ಸ್ವಚ್ಛತಾ ಪಖವಾಡ (ಸ್ವಚ್ಛತೆ ಪಾಕ್ಷಿಕ) ಮತ್ತು ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಇಲಾಖೆಯು ಒಂಬತ್ತು ಸ್ಥಳಗಳಲ್ಲಿ ಸ್ವಚ್ಛತೆ ಮತ್ತು ಜಾಗೃತಿ ಅಭಿಯಾನವನ್ನು ಕೈಗೊಂಡಿತು- ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನ, ಹಂಪಿ, ಪಟ್ಟದಕಲ್ಲು, ಬೇಲೂರು, ಶೃಂಗೇರಿ, ಸೋಮನಾಥಪುರ, ಮೇಲುಕೋಟೆ ಮತ್ತು ಶ್ರೀರಂಗಪಟ್ಟಣ. ಇಲಾಖೆಯು ಎಲೆಕ್ಟ್ರಿಕ್ ಬೈಕ್ ರ್ಯಾಲಿಯನ್ನು ಸಹ ಆಯೋಜಿಸಿದ್ದು, ವರ್ಷದ ಥೀಮ್-ಗ್ರೀನ್ ಇನ್ವೆಸ್ಟ್ಮೆಂಟ್ ಅನ್ನು ಒತ್ತಿಹೇಳಿತು.