ಮಂಗಳವಾರ, ಡಿಸೆಂಬರ್ 5, 2023
ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಇಂದು ಮಿಜೋರಾಂ ನೂತನ ಸಿಎಂ ಸ್ಥಾನಕ್ಕೆ ಸಜ್ಜು..!-ಚೆನ್ನೈನಲ್ಲಿ ಭಾರಿ ಮಳೆ ; 5 ಮಂದಿ ಸಾವು - ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!-ಮಣಿಪುರದಲ್ಲಿ ಮತ್ತೆ ಹಿಂಸಾಚಾರ ; 13 ಜನ ಸಾವು!-ಉದ್ಯಮಿಗೆ ವಂಚನೆ ಆರೋಪ ಪ್ರಕರಣ ; ಚೈತ್ರಾ ಸಹಿತ ಇಬ್ಬರಿಗೆ ಜಾಮೀನು ಮಂಜೂರು..!-ಲೋಕಸಭಾ ಚುನಾವಣೆ 2024: ಕಾಂಗ್ರೆಸ್ ನಿಂದ ಹರೀಶ್ ಕುಮಾರ್ ಅಥವಾ ರಮನಾಥ ರೈ ನಳಿನ್ ವಿರುದ್ಧ ಅಭ್ಯರ್ಥಿ ?-ಅರಬ್ಬಿ ಸಮುದ್ರಕ್ಕೆ ಇಳಿದಿದ್ದ 27 ಮೀನುಗಾರರಿದ್ದ ಬೋಟ್​ ನಾಪತ್ತೆ-Gold Rate : ದುಬಾರಿಯತ್ತ ಬಂಗಾರದ ಬೆಲೆ ; ಇಂದಿನ ಚಿನ್ನದ ದರ ಹೇಗಿದೆ?-8 ಬಾರಿ ಮೈಸೂರು ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು; ಕಾಡಾನೆ ಸೆರೆ ಹಿಡಿಯುವ ವೇಳೆ ದುರ್ಘಟನೆ..!-ದಿವ್ಯಾಂಗರು, ಅಂಗವಿಕಲರ ಕಲ್ಯಾಣದ ಮಹತ್ವದ ವಿಷಯದ ಕುರಿತಂತೆ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್-ಪ್ರತಾಪ್ ಸಿಂಹರವರು ಸತತ ಎರಡು ಬಾರಿ ಗೆದ್ದಂತಹ ಮೈಸೂರು ಲೋಕಸಭಾ ಕ್ಷೇತ್ರ ಈ ಬಾರಿ ಜೆಡಿಎಸ್ ತೆಕ್ಕೆಗೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

2025ರ ವೇಳೆಗೆ ಭಾರತದಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿತ ಸಾಧ್ಯತೆ ; ವಿಶ್ವಸಂಸ್ಥೆ

Twitter
Facebook
LinkedIn
WhatsApp
2025ರ ವೇಳೆಗೆ ಭಾರತದಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿತ ಸಾಧ್ಯತೆ ; ವಿಶ್ವಸಂಸ್ಥೆ

ಹೊಸದಿಲ್ಲಿ: ಭಾರತದಲ್ಲಿನ ಇಂಡೋ- ಗಂಗಾ (Indo Ganges) ಜಲಾನಯನ ಪ್ರಾಂತ್ಯದ ಕೆಲವು ಪ್ರದೇಶಗಳು ಈಗಾಗಲೇ ಅಂತರ್ಜಲ (Groundwater Level) ಕುಸಿತದ ಮಿತಿಯನ್ನು ದಾಟಿವೆ ಮತ್ತು ದೇಶದ ಸಂಪೂರ್ಣ ವಾಯುವ್ಯ ಪ್ರದೇಶ 2025ರ ವೇಳೆಗೆ ತುಂಬಾ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುತ್ತದೆ (Groundwater scarcity) ಎಂದು ವಿಶ್ವಸಂಸ್ಥೆಯ ಹೊಸ ವರದಿ (UN report) ತರ್ಕಿಸಿದೆ.

ಸೌದಿ ಅರೇಬಿಯಾದಂತಹ ಕೆಲವು ದೇಶಗಳು ಈಗಾಗಲೇ ಅಂತರ್ಜಲ ಕೊರತೆಯ ಅಪಾಯದ ತುದಿಯನ್ನು ಮೀರಿವೆ. ಭಾರತ ಸೇರಿದಂತೆ ಇತರರೂ ಈ ಅಪಾಯದಿಂದ ದೂರವಿಲ್ಲ. “ಇಂಟರ್‌ಕನೆಕ್ಟೆಡ್ ಡಿಸಾಸ್ಟರ್ ರಿಸ್ಕ್ ರಿಪೋರ್ಟ್ 2023” ಎಂಬ ಶೀರ್ಷಿಕೆಯಡಿ ವಿಶ್ವಸಂಸ್ಥೆಯ ಇನ್‌ಸ್ಟಿಟ್ಯೂಟ್ ಫಾರ್ ಎನ್ವಿರಾನ್‌ಮೆಂಟ್ ಅಂಡ್ ಹ್ಯೂಮನ್ ಸೆಕ್ಯುರಿಟಿ (ಯುಎನ್‌ಯು-ಇಹೆಚ್‌ಎಸ್) ಇದರಿಂದ ವರದಿ ಪ್ರಕಟವಾಗಿದೆ.

ವರದಿಯಲ್ಲಿ ಪ್ರಪಂಚ ಎದುರಿಸಲಿರುವ ಆರು ಪಾರಿಸರಿಕ ಅಪಾಯಗಳನ್ನು ತೋರಿಸಲಾಗಿದೆ- ಜೀವಪ್ರಭೇದಗಳ ಅಳಿವಿನ ಹೆಚ್ಚಳ, ಅಂತರ್ಜಲ ಕುಸಿತ, ಪರ್ವತ ಹಿಮನದಿಗಳ ಕರಗುವಿಕೆ, ಬಾಹ್ಯಾಕಾಶ ಅವಶೇಷಗಳ ಹೆಚ್ಚಳ, ಅಸಹನೀಯ ಶಾಖ ಮತ್ತು ಊಹಿಸಲಾಗದ ಭವಿಷ್ಯ.

ಪರಿಸರದ ಟಿಪ್ಪಿಂಗ್ ಪಾಯಿಂಟ್‌ಗಳು ಭೂಮಿಯ ವ್ಯವಸ್ಥೆಗಳಲ್ಲಿ ನಿರ್ಣಾಯಕ ಮಿತಿಗಳಾಗಿವೆ. ಅದನ್ನು ಮೀರಿ ಹಠಾತ್ ಬದಲಾವಣೆಗಳು ಸಂಭವಿಸುತ್ತಿವೆ. ಇದು ಪರಿಸರ ವ್ಯವಸ್ಥೆಗಳು, ಹವಾಮಾನ ಮಾದರಿಗಳು ಮತ್ತು ಒಟ್ಟಾರೆ ಪರಿಸರದಲ್ಲಿ ಆಳವಾದ ಮತ್ತು ಕೆಲವೊಮ್ಮೆ ದುರಂತಗಳಿಗೆ ಕಾರಣವಾಗುತ್ತವೆ.

ಅಂತರ್ಜಲದಲ್ಲಿ ಸುಮಾರು 70 ಪ್ರತಿಶತವನ್ನು ಕೃಷಿಗಾಗಿ, ನೆಲದ ಮೇಲಿನ ನೀರಿನ ಮೂಲಗಳು ಸಾಕಷ್ಟಿಲ್ಲದಿದ್ದಾಗ ಬಳಸಲಾಗುತ್ತಿದೆ. ಜಲಕ್ಷಾಮದಿಂದ ಉಂಟಾಗುವ ಕೃಷಿ ನಷ್ಟವನ್ನು ತಗ್ಗಿಸುವಲ್ಲಿ ಜಲಸೆಲೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಹವಾಮಾನ ಬದಲಾವಣೆಯಿಂದಾಗಿ ಈ ಸವಾಲು ಉಲ್ಬಣಗೊಳ್ಳುವ ನಿರೀಕ್ಷೆಯಿದೆ.

ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಪ್ರಮುಖ ಜಲಸೆಲೆಗಳು ನೈಸರ್ಗಿಕವಾಗಿ ಮರುಪೂರಣಗೊಳ್ಳುವುದಕ್ಕಿಂತ ವೇಗವಾಗಿ ಕ್ಷೀಣಿಸುತ್ತಿವೆ. ಅಸ್ತಿತ್ವದಲ್ಲಿರುವ ಬಾವಿ ಕೆರೆಗಳಿಂದ ನೀರಿನ ಮಟ್ಟ ಮತ್ತೂ ಕಡಿಮೆಯಾದಾಗ ರೈತರು ನೀರಿನ ನೆಲೆಯನ್ನೇ ಕಳೆದುಕೊಳ್ಳಬಹುದು. ಇದು ಸಂಪೂರ್ಣ ಆಹಾರ ಉತ್ಪಾದನಾ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಸೌದಿ ಅರೇಬಿಯಾದಂತಹ ಕೆಲವು ದೇಶಗಳು ಈಗಾಗಲೇ ಅಂತರ್ಜಲ ಅಪಾಯದ ತುದಿಯನ್ನು ಮೀರಿವೆ. ಭಾರತ ಸೇರಿದಂತೆ ಇತರ ದೇಶಗಳೂ ಅದರಿಂದ ದೂರವಿಲ್ಲ.

“ಭಾರತವು ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಅಂತರ್ಜಲದ ಅತಿದೊಡ್ಡ ಬಳಕೆದಾರನಾಗಿದೆ. ಭಾರತದ ವಾಯುವ್ಯ ಪ್ರದೇಶವು ರಾಷ್ಟ್ರದ ಬೆಳೆಯುತ್ತಿರುವ 140 ಕೋಟಿ ಜನರಿಗೆ ಆಹಾರಮೂಲವಾಗಿ ಕಾರ್ಯನಿರ್ವಹಿಸುತ್ತಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ದೇಶದ ಅಕ್ಕಿ ಪೂರೈಕೆಯ 50 ಶೇಕಡಾ ಮತ್ತು ಶೇ.85 ಗೋಧಿ ಉತ್ಪಾದಿಸುತ್ತವೆ.

“ಆದಾಗ್ಯೂ, ಪಂಜಾಬ್‌ನ ಶೇಕಡಾ 78ರಷ್ಟು ಬಾವಿಗಳನ್ನು ಅತಿಯಾಗಿ ಬಳಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ವಾಯುವ್ಯ ಪ್ರದೇಶವು 2025ರ ವೇಳೆಗೆ ತೀರಾ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುವ ನಿರೀಕ್ಷೆಯಿದೆ” ಎಂದು ವರದಿ ಹೇಳಿದೆ.

ವರದಿಯ ಪ್ರಮುಖ ಲೇಖಕ ಮತ್ತು ಹಿರಿಯ ತಜ್ಞ ಜ್ಯಾಕ್ ಓ’ಕಾನರ್, “ನಾವು ಈ ಟಿಪ್ಪಿಂಗ್ ಪಾಯಿಂಟ್‌ಗಳನ್ನು ಸಮೀಪಿಸುತ್ತಿರುವಾಗ, ಈಗಾಗಲೇ ಪರಿಣಾಮಗಳನ್ನು ಅನುಭವಿಸಲು ಪ್ರಾರಂಭಿಸಿದ್ದೇವೆ. ಒಮ್ಮೆ ದಾಟಿದರೆ, ಹಿಂತಿರುಗಲು ಕಷ್ಟವಾಗುತ್ತದೆ. ನಮ್ಮ ಮುಂದಿರುವ ಅಪಾಯಗಳನ್ನು ಅರ್ಥ ಮಾಡಿಕೊಳ್ಳಲು, ಅವುಗಳ ಕಾರಣ ಅರಿಯಲು ಮತ್ತು ಅವುಗಳನ್ನು ತಪ್ಪಿಸಲು ಅಗತ್ಯವಾದ ತುರ್ತು ಬದಲಾವಣೆ ಮಾಡಲು ನಮ್ಮ ವರದಿ ಸಹಾಯ ಮಾಡಬಹುದುʼʼ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ