BSP ರಾಜ್ಯಾಧ್ಯಕ್ಷ ಬರ್ಬರ ಹತ್ಯೆ, ಆರೋಪಿಗಳಿಗಾಗಿ ತೀವ್ರ ಶೋಧ; ಕೆ ಆರ್ಮ್‌ಸ್ಟ್ರಾಂಗ್ ಯಾರು?
ಕೆ ಆರ್ಮ್‌ಸ್ಟ್ರಾಂಗ್ ಅವರ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಗ್ಯಾಂಗ್ ಚೆನ್ನೈನ ಪೆರಂಬೂರ್‌ನಲ್ಲಿರುವ ಅವರ ಮನೆಯ ಸಮೀಪ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಚೆನ್ನೈ: ಬಹುಜನ ಸಮಾಜವಾದಿ ಪಕ್ಷದ ತಮಿಳುನಾಡಿನ ಅಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಹತ್ಯೆ ಮಾಡಲಾಗಿದೆ. ಸೇಂಬಿಯಂ ಬಳಿ 6 ಮಂದಿ ಇದ್ದ ಗ್ಯಾಂಗ್ ಆರ್ಮ್ ಸ್ಟ್ರಾಂಗ್ ಅವರನ್ನು ಕೊಲೆ ಮಾಡಿದೆ. ಗ್ರೀಮ್ಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ, ಆಸ್ಪತ್ರೆಗೆ ಕರೆತರುವ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ತಮಿಳುನಾಡು ಅಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಶುಕ್ರವಾರ ಚೆನ್ನೈನ ಅವರ ಮನೆಯ ಸಮೀಪ ಆರು ಸದಸ್ಯರ ಗ್ಯಾಂಗ್ ಹತ್ಯೆ ಮಾಡಿದೆ. ಘಟನೆಯ ಬಗ್ಗೆ ಬಿಎಸ್ಪಿ ವರಿಷ್ಠೆ ಮಾಯಾವತಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು ತಮಿಳುನಾಡು ಸರ್ಕಾರ “ತಪ್ಪಿತಸ್ಥರನ್ನು ಶಿಕ್ಷಿಸಬೇಕು” ಏಂದು ಹೇಳಿದರು.
ವರದಿಗಳ ಪ್ರಕಾರ ದ್ವಿಚಕ್ರ ವಾಹನದಲ್ಲಿ ಬಂದ ಗ್ಯಾಂಗ್ ಚೆನ್ನೈ ಕಾರ್ಪೊರೇಷನ್‌ನ ಮಾಜಿ ಕೌನ್ಸಿಲರ್ ಆರ್ಮ್‌ಸ್ಟ್ರಾಂಗ್ ಅವರ ಮೇಲೆ ಪೆರಂಬೂರ್‌ನಲ್ಲಿರುವ ಅವರ ಮನೆಯ ಬಳಿ ದಾಳಿ ಮಾಡಿ ಅವರಿಗೆ ಗಂಭೀರ ಗಾಯಗಳನ್ನುಂಟು ಮಾಡಿ ಪರಾರಿಯಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಮೃತಪಟ್ಟಿದ್ದು, ಶಂಕಿತರನ್ನು ಪತ್ತೆ ಹಚ್ಚಲು ಶೋಧ ಕಾರ್ಯ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
BSP ತಮಿಳುನಾಡು ಅಧ್ಯಕ್ಷ ಕೆ ಆರ್ಮ್‌ಸ್ಟ್ರಾಂಗ್ ಯಾರು?
ತಮಿಳುನಾಡು ರಾಜ್ಯ ಬಹುಜನ ಸಮಾಜ ಪಕ್ಷದ (BSP) ಅಧ್ಯಕ್ಷರಾದ ಶ್ರೀ ಕೆ. ಆರ್ಮ್‌ಸ್ಟ್ರಾಂಗ್ ಅವರ ಚೆನ್ನೈನ ಮನೆಯ ಹೊರಗೆ ಅವರ ಭೀಕರ ಹತ್ಯೆ ಅತ್ಯಂತ ಶೋಚನೀಯ ಮತ್ತು ಖಂಡನೀಯ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ರಾಜ್ಯದಲ್ಲಿ ಪ್ರಬಲ ದಲಿತ ಧ್ವನಿಯಾಗಿ ಗುರುತಿಸಿಕೊಂಡಿದ್ದರು. ರಾಜ್ಯ ಸರಕಾರ ತಪ್ಪಿತಸ್ಥರನ್ನು ಶಿಕ್ಷಿಸಬೇಕು” ಎಂದು ಮಾಯಾವತಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆ ಆರ್ಮ್‌ಸ್ಟ್ರಾಂಗ್ ಅವರು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದರು ಮತ್ತು ಚೆನ್ನೈ ನ್ಯಾಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದ್ದರು.
ಅವರು ಮೊದಲು 2006 ರಲ್ಲಿ ಕಾರ್ಪೊರೇಷನ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದರು ಮತ್ತು ನಂತರದ ವರ್ಷದಲ್ಲಿ ಬಿಎಸ್ಪಿಯ ತಮಿಳುನಾಡು ಘಟಕದ ಅಧ್ಯಕ್ಷರಾದರು.
3. 2011 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಕೊಳತ್ತೂರ್ ಕ್ಷೇತ್ರದಲ್ಲಿ ಸ್ಪರ್ಧಿಸಿದರು, ಗೆಲ್ಲದಿದ್ದರೂ ಸಾಕಷ್ಟು ಬೆಂಬಲವನ್ನು ಪಡೆದರು.
4. ತಮ್ಮ ವೃತ್ತಿಜೀವನದುದ್ದಕ್ಕೂ ಅವರು ದಲಿತರು ಮತ್ತು ಹಿಂದುಳಿದವರ ಹಕ್ಕುಗಳಿಗಾಗಿ ಸತತವಾಗಿ ಪ್ರತಿಪಾದಿಸಿದರು.
5. ಚೆನ್ನೈನಲ್ಲಿ ಬಿಎಸ್‌ಪಿ ರಾಜಕೀಯ ಅಸ್ತಿತ್ವವನ್ನು ಹೊಂದಿಲ್ಲದಿದ್ದರೂ, ಆಮ್‌ಸ್ಟ್ರಾಂಗ್ ಎಂಬ ವಕೀಲರು ದಲಿತ ಧ್ವನಿಯಾಗಿದ್ದರು.
ಕೆ ಆರ್ಮ್‌ಸ್ಟ್ರಾಂಗ್ ಹತ್ಯೆಯ ತನಿಖೆಗಾಗಿ ಚೆನ್ನೈ ಪೊಲೀಸರು 10 ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಜುಲೈ 5 ರಂದು ಸಂಜೆ, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ (52 ವರ್ಷ) ಪೆರಂಬೂರಿನ ವೇಣುಗೋಪಾಲ್ ಸಾಮಿ ಕೋವಿಲ್ ಸ್ಟ್ರೀಟ್‌ನಲ್ಲಿ (ಕೆ-1 ಸೆಂಬಿಯಂ ಪಿಎಸ್ ಮಿತಿ) ಅವರ ಮನೆ ಮುಂದೆ ನಿಂತಿದ್ದಾಗ ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಆತನಿಗೆ ರಕ್ತಸ್ರಾವವಾಗಿ ಗಾಯಗಳಾಗಿದ್ದು, ನಂತರ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಆತನನ್ನು ಪರೀಕ್ಷಿಸಿದ ವೈದ್ಯರ ನೆರವಿನಿಂದ ಅವರು ಮೃತಪಟ್ಟಿದ್ದಾರೆ ಎಂದು ಚೆನ್ನೈ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.