ಭಾನುವಾರ, ಸೆಪ್ಟೆಂಬರ್ 15, 2024
20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ-ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೋಳಿಯ ಖಾಸಗಿ ಭಾಗಕ್ಕೆ ಪಟಾಕಿ ತುರುಕಿ ಸಿಡಿಸಿದ ಕ್ರೂರರು ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿ ಶಿಕ್ಷೆಗೆ ಆಗ್ರಹ..!

Twitter
Facebook
LinkedIn
WhatsApp
ಕೋಳಿಯ ಖಾಸಗಿ ಭಾಗಕ್ಕೆ ಪಟಾಕಿ ತುರುಕಿ ಸಿಡಿಸಿದ ಕ್ರೂರರು ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿ ಶಿಕ್ಷೆಗೆ ಆಗ್ರಹ..!

ನವದೆಹಲಿ: ನಾಲ್ವರು ಹುಡುಗರು ಕೋಳಿಯ (Hen) ಖಾಸಗಿ ಭಾಗಕ್ಕೆ (Private Part) ಪಟಾಕಿ ತುರುಕಿ(Firecracker), ಸಿಡಿಸಿದ ಘಟನೆ ಅಸ್ಸಾಮ್‌ನ ನಗಾಂವ್ ಜಿಲ್ಲೆಯ (Nagaon district) ರಾಹಾ ಗಾಂವ್‌ನಲ್ಲಿ (Raha Gaon) ನಡೆದಿದೆ. ಪಟಾಕಿ ಸಿಡಿತಕ್ಕೆ ಕೋಳಿ ನರಳಿ ಮೃತಪಟ್ಟಿದೆ. ಈ ಘಟನೆಯ ವಿಡಿಯೋ (Viral Video) ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಬಹಳಷ್ಟು ಜನರು ಹುಡುಗರ ಕ್ರೂರತನವನ್ನು ಖಂಡಿಸಿದ್ದು, ಶಿಕ್ಷೆಗೆ ಆಗ್ರಹಿಸಿದ್ದಾರೆ. ಕೋಳಿಯ ಖಾಸಗಿ ಭಾಗದಲ್ಲಿ ನಾಲ್ವರು ಹುಡುಗರು ಪಟಾಕಿಯನ್ನು ತುರುಕುತ್ತಾರೆ ಮತ್ತು ಇಬ್ಬರು ಪಟಾಕಿಗೆ ಬೆಂಕಿ ಹಚ್ಚುತ್ತಾರೆ. ಆಗ ಪಟಾಕಿ ಸ್ಫೋಟಗೊಂಡು ಕೋಳಿ ನರಳಿ ಸಾಯುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಎನ್‌ಜಿಒ, ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಗಮನಕ್ಕೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತ ಮತ್ತು ಪೊಲೀಸರನ್ನು ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾಗಿದೆ. ವಿಶೇಷ ಎಂದರೆ, ಕೋಳಿ ಸತ್ತ ಬಳಿಕವೂ ಹುಡುಗರು ಅದರ ಜೋಕ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಪೋಸ್ಟ್ ಮಾಡಿರುವ ಪೀಪಲ್ ಫಾರ್ ಆ್ಯನಿಮಲ್ಸ್(ಪಿಎಫ್ಎ), ಅಸ್ಸಾಮ್‌ನ ರಾಹಾ ಗಾಂವ್‌ನಲ್ಲಿ ಕ್ರೂರತನಕ್ಕೆ ಕೋಳಿಯೊಂದು ಬಲಿಯಾಗಿರುವ ದುರದೃಷ್ಟಕರ ಘಟನೆ ನಡೆದಿದೆ. ಕೋಳಿಯ ಖಾಸಗಿ ಭಾಗಕ್ಕೆ ನಾಲ್ವರು ಹುಡುಗರು ಪಟಾಕಿಯನ್ನು ತುರುಕಿ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಅಸಹಾಯಕ ಕೋಳಿ ನೋವಿನಿಂದ ನರಳಿ ಸತ್ತಿದೆ ಎಂದು ಬರೆದಿಕೊಂಡಿದೆ. ಇಷ್ಯಾಗಿಯೂ ದುಷ್ಕರ್ಮಿಗಳು ಯಾವುದೇ ಪಶ್ಚಾತ್ತಾಪವನ್ನು ತೋರಿಸದಿರುವುದು ದುಃಖಕರವಾಗಿದೆ ಎಂದು ತಿಳಿಸಲಾಗಿದೆ.

ಅಲ್ಲದೇ, ಅಸ್ಸಾಮ್ ಪೊಲೀಸರಿಗೆ ಟ್ಯಾಗ್ ಮಾಡುವಂತೆ ಸೂಚಿಸಲಾಗಿದೆ. ಹಲವರು ದುಷ್ಕರ್ಮಿಗಳ ಕ್ರೂರತನವನ್ನು ಖಂಡಿಸಿದ್ದಾರೆ. ಅಲ್ಲದೇ, ಅವರ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಅಸ್ಸಾಮ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ನಾಯಿ ಸೇರಿದಂತೆ ಅಸಹಾಯಕ ಪ್ರಾಣಿಗಳನ್ನು ನರಳಿ ಸಾಯಿಸುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಈಗ ಕೋಳಿಯ ಘಟನೆಯ ಭಾರೀ ಪ್ರಮಾಣದಲ್ಲಿ ಗಮನ ಸೆಳೆದಿದೆ. ಅಲ್ಲದೇ, ಈ ಘಟನೆಗೆ ಕಾರಣರಾದವರನ್ನು ಶಿಕ್ಷೆಗೆ ಗುರಿಯಾಗಿಸುವಂತೆ ಆಗ್ರಹಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ