ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Revenue Officer: ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬೀಳುತ್ತಲೇ ಲಂಚದ ಹಣ ನುಂಗಿದ ಕಂದಾಯ ಅಧಿಕಾರಿ!

Twitter
Facebook
LinkedIn
WhatsApp
Revenue Officer: ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬೀಳುತ್ತಲೇ ಲಂಚದ ಹಣ ನುಂಗಿದ ಕಂದಾಯ ಅಧಿಕಾರಿ!

ಭೋಪಾಲ್ (Bhopal): ಕೆಲಸ ಮಾಡಿಕೊಡಲು ಅಥವಾ ಅವ್ಯವಹಾರ ಮುಚ್ಚಿಡಲು ಬರೆಯವರಿಂದ ಹಣ ಪಡೆಯುವ ಭ್ರಷ್ಟರನ್ನು ‘ಲಂಚ (Bribe) ತಿನ್ನುವವರು’ ಎಂದು ಕರೆಯುವುದು ವಾಡಿಕೆ. ಗರಿ ಗರಿ ನೋಟುಗಳನ್ನು ಅವರು ಜೇಬಿಗೆ ಇಳಿಸಿದರೂ, ಅದು ಹೊಟ್ಟೆಗೆ ಇಳಿಸಿದ್ದಾರೆ ಎಂದು ಹೋಲಿಸಲಾಗುತ್ತದೆ. ಆದರೆ ಮಧ್ಯಪ್ರದೇಶದಲ್ಲಿ ಕಂದಾಯ ಅಧಿಕಾರಿಯೊಬ್ಬರು (Revenue officer)ಲಂಚದ ಹಣವನ್ನು ಅಕ್ಷರಶಃ ತಿಂದು ತೇಗಿದ್ದಾರೆ!

ಮಧ್ಯಪ್ರದೇಶದ (Madhya Pradesh) ಕಟ್ನಿಯಲ್ಲಿ ಸೋಮವಾರ ಜಬಲ್ಪುರ ಲೋಕಾಯುಕ್ತದ(Lokayuktha) ವಿಶೇಷ ಪೊಲೀಸ್ ಘಟಕವು (ಎಸ್‌ಪಿಇ) (SPE)ಲಂಚ ತೆಗೆದುಕೊಳ್ಳುತ್ತಿದ್ದ ಕಂದಾಯ ಅಧಿಕಾರಿಯನ್ನು (Revenue Officer)ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಕೂಡಲೇ ಆತ ಕರೆನ್ಸಿ ನೋಟುಗಳನ್ನು ಬಾಯಿಗೆ ತುರುಕಿಕೊಂಡು ಜಗಿದು ಗಬಗಬನೆ ನುಂಗಿದ್ದಾರೆ.

ಪಟ್ವಾರಿಯಾಗಿರುವ ಗಜೇಂದ್ರ ಸಿಂಗ್ (Gajendra singh) ಎಂಬ ಅಧಿಕಾರಿ, ಜಮೀನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರ ಚಂದನ್ ಸಿಂಗ್ (Chandan singh) ಲೋಧಿಯಿಂದ 5 ಸಾವಿರ ರೂ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಲೋಧಿ ಅವರು ಜಬಲ್ಪುರ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು.

ತನಿಖೆ ನಡೆಸಿದ ಬಳಿಕ ಲೋಕಾಯುಕ್ತ ಪೊಲೀಸರಿಗೆ ಈ ದೂರಿನಲ್ಲಿ ಸತ್ಯಾಂಶ ಇರುವುದು ಖಚಿತವಾಗಿತ್ತು. ಜಬಲ್ಪುರ (Jabalpur) ಲೋಕಾಯುಕ್ತರ ತಂಡವೊಂದು ಬಿಲ್ಹಾರಿಗೆ ತೆರಳಿ, ಗಜೇಂದ್ರ ಸಿಂಗ್‌ರನ್ನು ಸಾಕ್ಷಿ ಸಮೇತ ಹಿಡಿಯಲು ಯೋಜನೆ ರೂಪಿಸಿದ್ದರು. ತಮ್ಮ ಖಾಸಗಿ ಕಚೇರಿಯಲ್ಲಿ 4,500 ರೂ ಪಡೆದುಕೊಳ್ಳುವಾಗ ಅವರನ್ನು ಹಿಡಿದರು.

ಬಂಧಿಸಿದ ಕೂಡಲೇ ಗಜೇಂದ್ರ ಸಿಂಗ್, ತಾವು ಪಡೆದ ಲಂಚದ ಹಣವನ್ನು ಒಂದೇ ಸಮನೆಗೆ ಬಾಯಿಗೆ ತುರುಕಿಸಿಕೊಂಡು ನುಂಗಿಬಿಟ್ಟರು. ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಸಾಕಷ್ಟು ಪ್ರಯತ್ನ ನಡೆಸಿದ ಬಳಿಕ ಕೊನೆಗೂ ಅವರ ಬಾಯಿಯಿಂದ ಕರೆನ್ಸಿ ನೋಡುಗಳ ಮುದ್ದೆಯನ್ನು ಹೊರಗೆ ಕಕ್ಕಿಸುವಲ್ಲಿ ಪೊಲೀಸರು ಮತ್ತು ವೈದ್ಯರು ಸಫಲರಾಗಿದ್ದಾರೆ.

“ಗಜೇಂದ್ರ ಸಿಂಗ್ ಅವರು ತಮ್ಮ ಬಳಿ ಲಂಚ ಕೇಳುತ್ತಿದ್ದಾರೆ ಎಂದು ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಹಣ ಪಡೆದುಕೊಂಡ ಬಳಿಕ ಸಿಂಗ್ ಅವರು ಎಸ್‌ಪಿಇ ತಂಡವನ್ನು ಕಂಡಿದ್ದರು. ಕೂಡಲೇ ಹಣವನ್ನು ನುಂಗಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದರು” ಎಂಬುದಾಗಿ ಎಸ್‌ಪಿಇ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.ಕಂದಾಯ ಅಧಿಕಾರಿ ಗಜೇಂದ್ರ ಸಿಂಗ್ ವಿರುದ್ಧ ಲಂಚ ತೆಗೆದುಕೊಂಡ ಆರೋಪದಡಿ ಪ್ರಕರಣ ದಾಖಲಾಗಿದೆ. ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ