ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Bomb Blast: ರಾಜಕೀಯ ಪಕ್ಷದ ಸಮಾವೇಶದಲ್ಲಿ ಬಾಂಬ್ ಸ್ಫೋಟ; 39 ಮಂದಿ ಸಾವು

Twitter
Facebook
LinkedIn
WhatsApp
Bomb Blast pakistan ರಾಜಕೀಯ ಪಕ್ಷದ ಸಮಾವೇಶ

Bomb Blast, ಪೇಶಾವರ: ವಾಯುವ್ಯ ಪಾಕಿಸ್ತಾನದಲ್ಲಿ ಭಾನುವಾರ ಇಸ್ಲಾಮಿಕ್ ಪಕ್ಷದ ರಾಜಕೀಯ ಸಮಾವೇಶದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ (Bomb Blast) ಕನಿಷ್ಠ 39 ಜನ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮಿಯತ್ ಉಲೇಮಾ-ಎ-ಇಸ್ಲಾಂ-ಎಫ್(ಜೆಯುಐ-ಎಫ್) ಪಕ್ಷವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು, ಅಫ್ಘಾನಿಸ್ತಾನ ಗಡಿ ಸಮೀಪವಿರುವ ಖಾರ್ ಪಟ್ಟಣದಲ್ಲಿ ನಡೆದ ಈ ಸಮಾವೇಶದಲ್ಲಿ 400ಕ್ಕೂ ಹೆಚ್ಚು ಸದಸ್ಯರು ಮತ್ತು ಬೆಂಬಲಿಗರು ಭಾಗವಹಿಸಿದ್ದರು.

“ಆಸ್ಪತ್ರೆಯಲ್ಲಿ 39 ಮೃತ ದೇಹಗಳಿದ್ದು, 123 ಮಂದಿ ಗಾಯಗೊಂಡಿದ್ದಾರೆ. ಆ ಪೈಕಿ 17 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು” ಎಂದು ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಆರೋಗ್ಯ ಸಚಿವ ರಿಯಾಜ್ ಅನ್ವರ್ ಅವರು ಎಎಫ್‌ಪಿಗೆ ತಿಳಿಸಿದ್ದಾರೆ

ಪ್ರಾಂತೀಯ ಗವರ್ನರ್ ಹಾಜಿ ಗುಲಾಂ ಅಲಿ ಅವರು ಸಾವಿನ ಸಂಖ್ಯೆಯನ್ನು ಎಎಫ್‌ಪಿಗೆ ದೃಢಪಡಿಸಿದ್ದಾರೆ.

ಇದುವರೆಗೂ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ISIS ಸಂಘಟನೆಯ ಸ್ಥಳೀಯ ಘಟಕ ಇತ್ತೀಚೆಗೆ ಜೆಯುಐ-ಎಫ್ ಮೇಲೆ ದಾಳಿಗಳನ್ನು ನಡೆಸಿದೆ.

ಅಂಜು ಇಸ್ಲಾಂಗೆ ಮತಾಂತರಗೊಂಡಿದ್ದಕ್ಕಾಗಿ ಪಾಕ್ ಉದ್ಯಮಿಯಿಂದ ಭರ್ಜರಿ ಉಡುಗೊರೆ

ದೆಹಲಿ ಜುಲೈ 31: ತನ್ನ ಫೇಸ್‌ಬುಕ್ (Facebook) ಸ್ನೇಹಿತ ನಸ್ರುಲ್ಲಾನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ(Pakistan) ತೆರಳಿದ ಭಾರತೀಯ ಮಹಿಳೆ ಅಂಜು(Anju). ಈಕೆ ತನ್ನ ಪತಿ ಅರವಿಂದ್ ಕುಮಾರ್ ಅವರನ್ನು ಅಲ್ವಾರ್‌ನಲ್ಲಿ ಬಿಟ್ಟು ಪಾಕಿಸ್ತಾನಿಯನ್ನು ಮದುವೆಯಾಗಿದ್ದಾಳೆ.

Anju 1

ಹೀಗೆ ಪಾಕಿಸ್ತಾನಕ್ಕೆ ಬಂದು ಮತಾಂತರಗೊಂಡ ಈಕೆಗೆ, ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ಅವರು 10 ಮಾರ್ಲಾ ವಸತಿ ಭೂಮಿ, 50,000 ಪಿಕೆಆರ್ ಚೆಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆಗಳು ಈಗ ಫಾತಿಮಾ ಆಗಿ ಮತಾಂತರಗೊಂಡಿರುವ ಅಂಜುಗೆ ಪಾಕಿಸ್ತಾನ ತಮ್ಮದೇ ಮನೆ ಎಂಬಂತೆ ಭಾಸವಾಗುವಂತೆ ಮಾಡುತ್ತದೆ ಎಂದು ಖಾನ್ ಹೇಳಿದ್ದಾರೆ. ಮೊಹ್ಸಿನ್ ಖಾನ್ ಅಬ್ಬಾಸಿ ಅವರು ಅಂಜು ಮತ್ತು ನಸ್ರುಲ್ಲಾ ಅವರೊಂದಿಗೆ ಸಂವಾದ ನಡೆಸಿ ನಂತರ ಉಡುಗೊರೆಗಳ ಕುರಿತು ಹೇಳಿಕೆ ನೀಡುವ ವಿಡಿಯೊ ವೈರಲ್ ಆಗಿದೆ.

ಅಂಜು ಭಾರತದಿಂದ ಇಲ್ಲಿಗೆ ಬಂದು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಆದ್ದರಿಂದ ಈ ಉಡುಗೊರೆಗಳು ಅವಳನ್ನು ಸ್ವಾಗತಿಸಲು ಅಭಿನಂದನೆ ಸಲ್ಲಿಸಲು ಕೊಡುತ್ತಿದ್ದೇವೆ. ಇದು ಅವಳನ್ನು ಪ್ರಶಂಸಿಸಲು ಒಂದು ಸಣ್ಣ ಪ್ರಯತ್ನವಾಗಿದೆ  ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದ್ದಾರೆ.

ಇನ್ನೊಂದು ವಿಷಯವೆಂದರೆ ಯಾರಾದರೂ ಇಲ್ಲಿಗೆ ಬಂದಾಗ ಅವರಿಗೆ ಎದುರಾಗುವ ಮುಖ್ಯ ಸಮಸ್ಯೆ ವಸತಿ. ನಮ್ಮಲ್ಲಿ ಪ್ರಾಜೆಕ್ಟ್ ಚಾಲನೆಯಲ್ಲಿರುವ ಕಾರಣ, ನಾವು ಅವರಿಗೆ ಇಲ್ಲಿ ಅವಕಾಶ ಕಲ್ಪಿಸಬಹುದು ಎಂದು ನಾವು ಭಾವಿಸಿದ್ದೇವೆ. ನಮ್ಮ ಆಡಳಿತ ಮಂಡಳಿ ಅದನ್ನು ಅನುಮೋದಿಸಿದೆ. ನಾವು ಅವಳ ಹೆಸರಿಗೆ ಜಮೀನು ನೀಡಿದ್ದೇವೆ. ಇಸ್ಲಾಂಗೆ ಮತಾಂತರಗೊಂಡ ನಂತರ ಅವಳು ಯಾವುದೇ ತೊಂದರೆ ಎದುರಿಸಲಿಲ್ಲ ಎಂದು ಅವಳು ಭಾವಿಸದಿರಲು ಹೀಗೆ ಮಾಡಿದ್ದು. ಉಳಿದವು ಎಲ್ಲಾ ಸಣ್ಣ ಉಡುಗೊರೆಗಳಾಗಿವೆ. ಇದರಿಂದ ಅವಳು ಇದನ್ನು ತನ್ನ ಮನೆಯನ್ನಾಗಿ ಮಾಡಿಕೊಳ್ಳಬಹುದು ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದರು.

ಅಂಜುಗೆ ಭಾರತದಲ್ಲಿ ಗಂಡನಿದ್ದಾನೆ, ವಿಚ್ಛೇದನ ಪಡೆದಿಲ್ಲ

ಅಂಜು ಅವರ ಪತಿ ಅರವಿಂದ್ ಕುಮಾರ್ ಅವರು ಅಂಜು ಯಾರನ್ನೂ ಮದುವೆಯಾಗಲು ಸಾಧ್ಯವಿಲ್ಲ, ಏಕೆಂದರೆ ಅವಳು ಇನ್ನೂ ತನ್ನ ಹೆಂಡತಿಯಾಗಿದ್ದಾಳೆ ಎಂದಿದ್ದಾರೆ. 2007 ರಲ್ಲಿ ವಿವಾಹವಾದ ದಂಪತಿಗೆ ಮಗಳಿದ್ದಾಳೆ. ಜುಲೈ 20 ರಂದು ಅಂಜು ತನ್ನ ಸ್ನೇಹಿತರನ್ನು ಭೇಟಿಯಾಗಲು ಜೈಪುರಕ್ಕೆ ಹೋಗುವುದಾಗಿ ಹೇಳಿದ್ದರು. ಆಗ ಆಕೆ ವಾಘಾ ಮೂಲಕ ಗಡಿ ದಾಟಿ ಪಾಕಿಸ್ತಾನದಲ್ಲಿದ್ದಾಳೆ ಎಂದು ಮನೆಯವರಿಗೆ ಗೊತ್ತಾಯಿತು. ನಂತರ ನಸ್ರುಲ್ಲಾ ಅವರೊಂದಿಗಿನ ವಿವಾಹದ ಸುದ್ದಿ ಮಾಧ್ಯಮ, ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು.

ತಾನು ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ವಿಚ್ಛೇದನದ ಪತ್ರವನ್ನು ಸಲ್ಲಿಸಿದ್ದೇನೆ ಎಂದು ಅಂಜು ಹೇಳಿಕೊಂಡಿದ್ದಾಳೆ ಆದರೆ ತನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಅರವಿಂದ್ ಹೇಳಿದರು. 34 ವರ್ಷದ ಅಂಜು ತನಗಿಂತ ಐದು ವರ್ಷ ಕಿರಿಯ ನಸ್ರುಲ್ಲಾ ಜತೆ 2019 ರಲ್ಲಿ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದಾರೆ. ಜುಲೈ 22 ರಂದು, ಅಂಜು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಬಂದಿದ್ದು, ನಸ್ರುಲ್ಲಾ ಆಕೆಯನ್ನು ರಾವಲ್ಪಿಂಡಿಯಲ್ಲಿ ಬರಮಾಡಿಕೊಂಡರು. ಅವರು ಮಾನ್ಯವಾದ 30 ದಿನಗಳ ವೀಸಾದಲ್ಲಿ ಪ್ರಯಾಣಿಸಿದರು. ಅಂಜು ತನ್ನ ವೀಸಾ ಅವಧಿ ಮುಗಿದ ನಂತರ ಭಾರತಕ್ಕೆ ಹಿಂತಿರುಗುವುದಾಗಿ ನಸ್ರುಲ್ಲಾ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ನಂತರ ಅವರು ವಿವಾಹವಾದರು. ಈಗ ಅಂಜು ಮತಾಂತರಗೊಂಡು ಫಾತಿಮಾ ಆಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist