ದೋಣಿ ಮುಳುಗಡೆ - 20 ಮಕ್ಕಳ ರಕ್ಷಣೆ
ಪಾಟ್ನಾ: ಬಿಹಾರದ (Bihar) ಮುಜಾಫರ್‌ಪುರ ಜಿಲ್ಲೆಯ ಬಾಗ್ಮತಿ ನದಿಯಲ್ಲಿ ಗುರುವಾರ 30 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದಿದೆ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ದೋಣಿಯಲ್ಲಿ 30 ಮಕ್ಕಳು ಪ್ರಯಾಣಿಸುತ್ತಿದ್ದರು. ಇದುವರೆಗೆ 20 ಮಕ್ಕಳನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ತಂಡವು ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಮುಜರಾಯಿ ಇಲಾಖೆ ದೇವಸ್ಥಾನಗಳ ಬಳಿ ತಂಬಾಕು ಉತ್ಪನ್ನ ಮಾರಾಟ ನಿಷೇಧ
ಬೆಂಗಳೂರು: ಮುಜರಾಯಿ ಇಲಾಖೆಯ (Muzrai Department) ದೇವಸ್ಥಾನಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು (Tobacco Products) ಮಾರಾಟವನ್ನು ನಿಷೇಧಿಸಿದೆ ಮುಜರಾಯಿ ಇಲಾಖೆ ಆದೇಶ ಪ್ರಕಟಿಸಿದೆ.
ದೇವಸ್ಥಾನದ ಆಸುಪಾಸು ದೈವಿಕ ಕಳೆ ಇರುವುದರಿಂದ ಭಕ್ತರ ಧಾರ್ಮಿಕತೆಗೆ ಪೂರಕ ವಾತಾವರಣ ಕಲ್ಪಿಸಲು ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿ ಕಾಂಗ್ರೆಸ್ (Congress) ಟ್ವೀಟ್ (Tweet) ಮಾಡಿದೆ.
‘ಧರ್ಮ‘ ಎಂದರೆ ಮನುಷ್ಯನಿಗೆ ಅಧ್ಯಾತ್ಮಿಕ ಅನುಭೂತಿ ನೀಡುವ ಮಾರ್ಗ ಮಾತ್ರ.
— Karnataka Congress (@INCKarnataka) September 14, 2023
ಆಧ್ಯಾತ್ಮಿಕ ಅನುಭೂತಿಯನ್ನು ನೀಡುವ ದೇವಾಲಯಗಳಲ್ಲಿ ಸ್ವಚ್ಛತೆ, ಪ್ರಶಾಂತತೆ ಇರಬೇಕಾಗುತ್ತದೆ.
ಮುಜರಾಯಿ ಇಲಾಖೆಯ ದೇವಾಲಯಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ… pic.twitter.com/h84VJQz2wb
ಟ್ವೀಟ್‌ನಲ್ಲಿ ಏನಿದೆ?
‘ಧರ್ಮ’ ಎಂದರೆ ಮನುಷ್ಯನಿಗೆ ಆಧ್ಯಾತ್ಮಿಕ ಅನುಭೂತಿ ನೀಡುವ ಮಾರ್ಗ ಮಾತ್ರ. ಆಧ್ಯಾತ್ಮಿಕ ಅನುಭೂತಿಯನ್ನು ನೀಡುವ ದೇವಾಲಯಗಳಲ್ಲಿ ಸ್ವಚ್ಛತೆ, ಪ್ರಶಾಂತತೆ ಇರಬೇಕಾಗುತ್ತದೆ.
ಮುಜುರಾಯಿ ಇಲಾಖೆಯ ದೇವಾಲಯಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಗುಟ್ಕಾ, ಸಿಗರೇಟು ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಬರೆದುಕೊಂಡಿದೆ.