ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ- ಕಾಂಗ್ರೆಸ್ ಪೋಸ್ಟರ್ ವಾರ್..!

ನವದೆಹಲಿ, ಅಕ್ಟೋಬರ್ 05: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೋಸ್ಟರ್ ವಾರ್ ಶುರುವಾಗಿದ್ದು, ಕಾಂಗ್ರೆಸ್ ಯುವನಾಯಕ ಹಾಗೂ ಸಂಸದ ರಾಹುಲ್ ಗಾಂಧಿಯವರನ್ನ ರಾವಣನಿಗೆ ಹೋಲಿಸಿ ಬಿಜೆಪಿ ಕಟುವಾಗಿ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ನವಯುಗದ ರಾವಣ ಎಂದು ಟೀಕಿಸಿರುವ ಪೋಸ್ಟರ್ ಹಂಚಿಕೊಂಡಿದೆ. ‘ರಾಹುಲ್ ಗಾಂಧಿಯವರು ರಾಕ್ಷಸರ ರಾಜ ರಾವಣನ ‘ನವ ಯುಗದ’ ಅವತಾರವೆಂದು ಚಿತ್ರಿಸುವ ಪೋಸ್ಟರ್ ಅನ್ನು ಬಿಜೆಪಿ ಟ್ವೀಟ್ ನಲ್ಲಿ ಹಂಚಿಕೊಂಡಿದ್ದು, ಇದೀಗ ವಿವಾದವನ್ನು ಹುಟ್ಟುಹಾಕಿದೆ. ನವ ಯುಗದ ರಾವಣ ಇಲ್ಲಿದ್ದಾನೆ. ಅವನು ದುಷ್ಟ, ಧರ್ಮ ವಿರೋಧಿ, ರಾಮ ವಿರೋಧಿ ಮತ್ತು ಅವನ ಗುರಿ ಭಾರತವನ್ನು ನಾಶಮಾಡುವುದು ಎಂದು ಬಿಜೆಪಿ ಕುಟುಕಿದೆ.
ಇನ್ನೂ ಫಿಲ್ಮಿ ಸ್ಟೈಲ್‍ನಲ್ಲಿ ಪೋಸ್ಟರ್ ರೂಪಿಸಿರುವ ಬಿಜೆಪಿ, ಚಿತ್ರದ ಟೈಟಲ್‍ಗೆ ‘Ravan, a Congress party production, directed by George Soros’ ಎಂದು ಬರೆದುಕೊಂಡಿದೆ. ಇನ್ನೂ ಬಿಜೆಪಿಯ ಈ ಪೋಸ್ಟರ್ ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇತ್ತ ಕಾಂಗ್ರೆಸ್ ದೊಡ್ಡ ಸುಳ್ಳುಗಾರ” ಎಂಬ ಶೀರ್ಷಿಕೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದೆ. ಶೀಘ್ರದಲ್ಲೇ ಚುನಾವಣಾ ರ್ಯಾಲಿ ಬರಲಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಹೇಳಿದೆ.
ನವಯುಗದ ರಾವಣ ಎಂದು ಸಂಸದ ರಾಹುಲ್ ಗಾಂಧಿ ಕುರಿತು ಬಿಜೆಪಿ ಪೋಸ್ಟ್ ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿ.ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿಯವರನ್ನು ಬಿಜೆಪಿ ರಾವಣನಿಗೆ ಹೋಲಿಸಿದ ನಾಚಿಕೆಗೇಡಿನ ಗ್ರಾಫಿಕ್ ಅನ್ನು ಖಂಡಿಸಲು ಯಾವುದೇ ಪದಗಳಿಲ್ಲ. ಬಿಜೆಪಿಯ ಕೆಟ್ಟ ಉದ್ದೇಶಗಳು ಸ್ಪಷ್ಟವಾಗಿವೆ, ತನ್ನ ಅಜ್ಜಿ ಮತ್ತು ತಂದೆಯನ್ನು ಹತ್ಯೆಗಳಿಂದ ಕಳೆದುಕೊಂಡಿರುವ ಅವನನ್ನು ಅವರು ಕೊಲ್ಲಲು ಬಯಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯವರು ತಮ್ಮ ಕೆಟ್ಟ ರಾಜಕೀಯದಿಂದ ರಾಹುಲ್ ಅವರ SPG ರಕ್ಷಣೆಯನ್ನು ಹಿಂತೆಗೆದುಕೊಂಡರು. ಅವರನ್ನು ಅವರ ಸುರಕ್ಷಿತ ನಿವಾಸದಿಂದ ಹೊರಹಾಕಿದ ನಂತರ, ವಿನಂತಿಸಿದ ಮತ್ತೊಂದು ಮನೆಯನ್ನು ಅವರು ಮಂಜೂರು ಮಾಡಲಿಲ್ಲ. ಇದೆಲ್ಲವೂ ತಮ್ಮ ಉಗ್ರ ಟೀಕಾಕಾರರ ಬಾಯಿ ಮುಚ್ಚಿಸಲು ಬಿಜೆಪಿ ಮಾಡುತ್ತಿರುವ ಯೋಜಿತ ಪಿತೂರಿಯನ್ನು ಸೂಚಿಸುತ್ತದೆ. ಅವರ ದ್ವೇಷ ತುಂಬಿದ ಸಿದ್ಧಾಂತದ ತಿರುಳನ್ನು ಇದು ತಿಳಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
https://x.com/BJP4India/status/1709819569450471817?s=20