ಅಯೋಧ್ಯೆ ಪ್ರಾಣ ಪ್ರತಿಷ್ಠೆಯಂದು ಗಂಡು ಮಗುವಿನ ಜನನ - ಶ್ರೀರಾಮನೆಂದು ಹೆಸರಿಡಲು ದಂಪತಿ ತೀರ್ಮಾನ
ಬೆಳ್ತಂಗಡಿ: ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ದಿನದಂದೇ ಬೆಳ್ತಂಗಡಿ ತಾಲೂಕಿನ ಉಜಿರೆ ಬೆನಕ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಶ್ರೀರಾಮನೆಂದು ಹೆಸರಿಡಲು ದಂಪತಿ ತೀರ್ಮಾನ ಮಾಡಿರುವುದಾಗಿ ವರದಿಯಾಗಿದೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬಸನಬೆಟ್ಟು ನಿವಾಸಿ ಪವಿತ್ರ ಎಂಬವರು ಗಂಡು ಮಗುವಿಗೆ ಜನ್ಮ ನೀಡಿದ್ದು, ನಿನ್ನೆ ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಯ ದಿನದಂದೇ ಗಂಡು ಮಗುವಿಗೆ ಜನನವಾಗಿರುವುದರಿಂದ ಮಗುವಿಗೆ ಶ್ರೀರಾಮ ಎಂದು ಹೆಸರಿಡಲು ಯೋಚಿಸುತ್ತೇವೆ ಎಂದು ಮಗುವಿನ ತಂದೆ ತಿಳಿಸಿದ್ದಾರೆ.
ಇನ್ನು ಸುಳ್ಯದ ಸುರೇಶ್ ಮತ್ತು ಪಡಂಗಡಿಯ ಪವಿತ್ರ ದಂಪತಿಗೆ 6 ವರ್ಷದ ಹೆಣ್ಣು ಮಗು ಇದ್ದು, ಇದೀಗ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ಮಂಗಳೂರು: ಕಾಶೀಮಠದಿಂದ ಅಯೋಧ್ಯೆ ಶ್ರೀರಾಮನಿಗೆ ವಿಶೇಷ ಸ್ವರ್ಣ ಹಾರ
ಮಂಗಳೂರು: ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಕಾಶೀಮಠದ ವತಿಯಿಂದ ಅಯೋಧ್ಯೆ ಶ್ರೀರಾಮದೇವರಿಗೆ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ 400 ಗ್ರಾಂ ಚಿನ್ನದಿಂದ ತಯಾರಿಸಿದ ನವರತ್ನಗಳ ಪೇಂಡೆಂಟ್ ಒಳಗೊಂಡಿರುವ 28 ಚಕ್ರಣಿಕಾ ಸಾಲಿಗ್ರಾಮ ದಿಂದ ಅಲಂಕರಿಸಲ್ಪಟ್ಟ ಸ್ವರ್ಣಹಾರವನ್ನು ಸಮರ್ಪಿಸಿದರು.
ಬಹಳ ಆಕರ್ಷಕ ಶೈಲಿಯಲ್ಲಿ ರಚಿಸಲ್ಪಟ್ಟಿರುವ ಈ ಆಭರಣವನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಕಾಶೀಮಠದ ಪರವಾಗಿ ಆಲ್ ಟೆಂಪಲ್ ಅಸೋಸಿಯೇಷನ್ ಅಧ್ಯಕ್ಷರಾದ ಅತುಲ್ ಕುಡ್ವ, ಫೂಜ್ಲಾನಾ ಗ್ರೂಪ್ ನ ಅನಂತ್ ಪೈ, ದೆಹಲಿ ಸಮಾಜದ ಗಣೇಶ್ ಮಲ್ಯ ಹಾಗೂ ಸಮಾಜದ ಪ್ರಮುಖರು ಹಾಗೂ ಗಣ್ಯರು ಸೇರಿ ಹಸ್ತಾಂತರಿಸಿದರು
ಬ್ರಹ್ಮಾವರ: ಕೋಳಿ ಅಂಕಕ್ಕೆ ದಾಳಿ,ಮೂರು ಬಂಧಿಯ ಬಂಧನ
ಬ್ರಹ್ಮಾವರ:ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಜನವರಿ. 21 ರಂದು ಉಡುಪಿಯ ಬ್ರಹ್ಮಾವರದ ಕುಮ್ರ ಗೋಡು ಎಂಬಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಸಾದ ಕುಮಾರ್, ಆರೋನ್, ಸಂತೋಷ ಎಂಬವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಕೋಳಿ ಅಂಕಕ್ಕೆ ಬಳಸಲಾದ ಒಂದು ಕೋಳಿ ಮತ್ತು ಏಳು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.