ಮಂಗಳವಾರ, ಡಿಸೆಂಬರ್ 5, 2023
ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ-ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶಾಲಾ ವ್ಯಾನ್‌ – ಬಸ್‌ ನಡುವೆ ಬೀಕರ ಅಪಘಾತ; ಚಾಲಕ ಸೇರಿದಂತೆ ಐವರು ವಿದ್ಯಾರ್ಥಿಗಳು ಮೃತ್ಯು

Twitter
Facebook
LinkedIn
WhatsApp
ಶಾಲಾ ವ್ಯಾನ್‌ – ಬಸ್‌ ನಡುವೆ ಬೀಕರ ಅಪಘಾತ; ಚಾಲಕ ಸೇರಿದಂತೆ ಐವರು ವಿದ್ಯಾರ್ಥಿಗಳು ಮೃ

ಲಕ್ನೋ: ಶಾಲಾ ವ್ಯಾನ್ ಹಾಗೂ ಶಾಲಾ ಬಸ್ ನಡುವಿನ ಮುಖಾಮುಖಿ ಢಿಕ್ಕಿಯಲ್ಲಿ ವಿದ್ಯಾರ್ಥಿಗಳು ಸೇರಿ 6 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ನಂಬಿಗಂಜ್ ರಸ್ತೆಯಲ್ಲಿ ಸೋಮವಾರ ಮುಂಜಾನೆ (ಅ.3೦ ರಂದು) ನಡೆದಿದೆ.

ಉತ್ತರ ಪ್ರದೇಶದ ಬುಡೌನ್ ನಲ್ಲಿ ಈ ಘಟನೆ ಸಂಭವಿಸಿದ್ದು,ಓರ್ವ ವಿದ್ಯಾರ್ಥಿ, ವ್ಯಾನ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ವಿದ್ಯಾರ್ಥಿಗಳು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.

ಶಾಲಾ ವ್ಯಾನ್ ಎಆರ್ ಪಿಎಸ್ ಇಂಗ್ಲಿಷ್ ಸ್ಕೂಲ್ ಗೆ ಮಿಯಾನ್ ಗ್ರಾಮದಿಂದ ಬರುತ್ತಿತ್ತು. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ 16 ಮಂದಿ ವಿದ್ಯಾರ್ಥಿಗಳಿಗೆ ಗಾಯಗಳಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ಬಳಿಕ ಇವರಲ್ಲಿ ನಾಲ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿದ್ದಾರೆ.

ಹಾಟ್‍ಟಬ್‍ನಲ್ಲಿ ನಟ ಶವವಾಗಿ ಪತ್ತೆ

ಲಾಸ್ ಏಂಜಲೀಸ್: ಫ್ರೆಂಡ್ಸ್ ನಟ ಮ್ಯಾಥ್ಯೂ ಪೆರ್ರಿ (54) (Matthew Perry) ತನ್ನ ನಿವಾಸದಲ್ಲಿರುವ ಹಾಟ್‍ಟಬ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಲಾಸ್ ಏಂಜಲೀಸ್ ಫೆಸಿಫಿಕ್ ಪಾಲಿಸೇಡ್ಸ್ ಮನೆಯ ಹಾಟ್ ಟಬ್‍ನಲ್ಲಿ (Hot Tub) ಪೆರ್ರಿಯವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಇದರಿಂದ ಗಾಬರಿಗೊಂಡು ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಪೊಲೀಸರಿಗೆ ಸಂಜೆ 4 ಗಂಟೆ ಸುಮಾರಿಗೆ 911 ಕರೆ ಬಂದಿತು. ಮೇಲ್ನೋಟಕ್ಕೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವಂತೆ ಕಂಡುಬಂದಿದೆ. ಸ್ಥಳದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಪೆರ್ರಿಯವರು ಕೆನಡಾದ ಒಟ್ಟಾವಾದಲ್ಲಿ ಬಾಲ್ಯವನ್ನು ಕಳೆದಿದ್ದಾರೆ. ಬಳಿಕ ಕೆನಡಾದ ಜೂನಿಯರ್ಸ್‍ನಲ್ಲಿ ಅಗ್ರ ಶ್ರೇಯಾಂಕದ ಟೆನಿಸ್ ಆಟಗಾರನಾಗಿ ಉತ್ತಮ ಕೆರಿಯರ್ ಹೊಂದಿದ್ದರು. ಆದರೆ ನಟನೆಗಾಗಿ ತಮ್ಮ 15ನೇ ವಯಸ್ಸಿನಲ್ಲಿ ಟೆನಿಸ್ ಬಿಟ್ಟರು. 24 ನೇ ವಯಸ್ಸಿನಲ್ಲಿ ಫ್ರೆಂಡ್ಸ್ ತಂಡಕ್ಕೆ ಸೇರಿದ್ದರು. ಬಳಿಕ ಕಲವಾರು ಶೋಗಳಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ಮನೆಮಾತಾಗಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ