Bhagavanth Kesari: ನಟ ನಂದಮೂರಿ ಬಾಲಕೃಷ್ಣ ಜೊತೆ ಜಬರ್‌ದಸ್ತ್ ಆಗಿ ಹೆಜ್ಜೆ ಹಾಕಿದ ಶ್ರೀಲೀಲಾ
Bhagavanth Kesari: ನಿರ್ದೇಶಕ ಅನಿಲ್ ರಾವಿಪುಡಿ ಮತ್ತು ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರ ಮೊದಲ ಸಹಯೋಗವನ್ನು ಗುರುತಿಸುವ ಭಗವಂತ ಕೇಸರಿ (Bhagavanth Kesari) ಅಕ್ಟೋಬರ್ 19 ರಂದು ಬಿಡುಗಡೆಗೆ ಸಜ್ಜಾಗುತ್ತಿದೆ.
ಸಾಹು ಗರಪತಿ ಮತ್ತು ಹರೀಶ್ ನಿರ್ಮಾಣದ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಶ್ರೀಲೀಲಾ ಬಾಲಕೃಷ್ಣ ಅವರ ಸೊಸೆಯಾಗಿ ಮತ್ತು ಕಾಜಲ್ ಅಗರ್ವಾಲ್ ಅವರ ರೋಮ್ಯಾಂಟಿಕ್ ಆಸಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಎಸ್ ಥಮನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಭಗವಂತ ಕೇಸರಿಯ ಮೊದಲ ಸಿಂಗಲ್, ಗಣೇಶ್ ಗೀತೆಯ ಪ್ರೋಮೋ ಈ ವಾರದ ಆರಂಭದಲ್ಲಿ ಬಿಡುಗಡೆಯಾಯಿತು.
ಶ್ರೀಲೀಲಾ ಕೆಮ್ಮಿದರೂ ಟಾಲಿವುಡ್‌ನಲ್ಲಿ ಸುದ್ದಿಯಾಗುತ್ತದೆ. ಮುಟ್ಟಿದ್ದೆಲ್ಲ ಚಿನ್ನ ಅಂತಾರಲ್ಲ.ಹಾಗೆ ಈ ಹುಡುಗಿ ಮಾಡಿದ್ದೆಲ್ಲ ಸಿನಿಮಾ ಹಿಟ್ ಲಿಸ್ಟ್‌ಗೆ ಅನಿವಾರ್ಯವಾಗಿ ಸೇರುವಂತಾಗಿದೆ. ಎರಡೇ ಸಿನಿಮಾಕ್ಕೆ ಲೇಡಿ ಸೂಪರ್‌ಸ್ಟಾರ್ ಪಟ್ಟಕ್ಕೇರಲು ಸಜ್ಜಾಗಿದ್ದಾರೆ. ಇದೀಗ ಬಾಲಕೃಷ್ಣ ಜೊತೆ ಭಗವಂತ ಕೇಸರಿ(Bhagavanth Kesari) ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ. ಅದರ ಹಾಡು ಇದೀಗ ರಿಲೀಸ್ ಆಗಿದೆ. ಅದೇ ಗಣೇಶ ಹಬ್ಬದ ಸುತ್ತ ಚಿತ್ರಿಸಲಾದ ಹಾಡಿನಲ್ಲಿ ಶ್ರೀಲೀಲಾ ಹಾಗೂ ಬಾಲಕೃಷ್ಣ(Balakrishna), ಮಗಳು- ಚಿಕ್ಕಪ್ಪನಾಗಿ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಹಾಡಿನ ಪ್ರೋಮೋ ಆವೃತ್ತಿ ಈಗಾಗಲೇ ಯೂಟ್ಯೂಬ್‌ನಲ್ಲಿ 2.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಜಂಗ್ಲೀ ಮ್ಯೂಸಿಕ್ ಆಕ್ಷನ್ ಎಂಟರ್‌ಟೈನರ್‌ನ ಆಡಿಯೊ ಹಕ್ಕುಗಳನ್ನು ಪಡೆದುಕೊಂಡಿದೆ.
ಇದುವರೆಗೆ ಹೀರೋ ಜೊತೆ ಕುಣಿದಿದ್ದ ಶ್ರೀಲೀಲಾ ಇದೇ ಮೊದಲ ಬಾರಿಗೆ ಸ್ಟಾರ್ ಹೀರೋ ಕಮ್ ಚಿಕ್ಕಪ್ಪ ಬಾಲಕೃಷ್ಣ ಜೊತೆ ಹೆಜ್ಜೆ ಹಾಕಿದ್ದಾರೆ. ಭಗವಂತ ಕೇಸರಿ ಸಿನಿಮಾ ಶ್ರೀಲೀಲಾ ವೃತ್ತಿ ಬದುಕಿಗೆ ಹೊಸ ದಿಕ್ಕು ತೋರಿಸುವುದು ಖಚಿತ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕಿಸ್ ಬೆಡಗಿಯ ಕಿಸ್ಮತ್ ಬದಲಿಸಲಿದೆ.
ಇತ್ತೀಚಿಗೆ ಸ್ಕಂದ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಾಲಯ್ಯ ಭಾಗಿಯಾಗಿದ್ದರು. ನಟನೆ, ಡ್ಯಾನ್ಸ್, ಆಕೆಯ ಸ್ವಭಾವ ಎಲ್ಲಾ ನೋಡಿ ಶ್ರೀಲೀಲಾ ಸರಸ್ವತಿ ದೇವಿಯ ವರಪ್ರಸಾದ ಎಂದು ಹಾಡಿಹೊಗಳಿದ್ದರು. ಈ ಬೆನ್ನಲ್ಲೇ ಭಗವಂತ ಕೇಸರಿ ಸಿನಿಮಾದಲ್ಲಿ ಬಾಲಯ್ಯ ಜೊತೆ ಲೀಲಾ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿರೋದು ಸಖತ್ ಸದ್ದು ಮಾಡ್ತಿದೆ.
ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಶರತ್ ಕುಮಾರ್ ನಟಿಸಿದ್ದಾರೆ. ಹಿರಿಯ ತಂತ್ರಜ್ಞ ಸಿ ರಾಮ್ ಪ್ರಸಾದ್ ಛಾಯಾಗ್ರಹಣ ಮತ್ತು ತಮ್ಮಿರಾಜು ಸಂಕಲನವಿದೆ. ರಾಜೀವನ್ ಪ್ರೊಡಕ್ಷನ್ ಡಿಸೈನರ್ ಆಗಿದ್ದು, ವಿ ವೆಂಕಟ್ ಸಾಹಸ ದೃಶ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ಬಾಲಕೃಷ್ಣ ಮುಂದಿನ ಬಾಬಿ ನಿರ್ದೇಶನದ ಚಿತ್ರಕ್ಕೆ ತೆರಳಲಿದ್ದರೆ, ವ್ಯಾಪಾರ ವಲಯಗಳ ಪ್ರಕಾರ ಅನಿಲ್ ರವಿಪುಡಿ ಭೋಲಾ ಶಂಕರ್ ಸ್ಟಾರ್ ಚಿರಂಜೀವಿಯನ್ನು ನಿರ್ದೇಶಿಸಬಹುದು.