ಬೇಟೆ ಕೊ ಹಾತ್ ಲಗಾನೆ ಸೆ ಪೆಹಲೆ, ಬಾಪ್ ಸೆ ಬಾತ್ ಕರ್” - ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್
ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan Movie) ರಿಲೀಸ್ಗೆ ಮೊದಲು ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದ ಟ್ರೇಲರ್ ಆಗಸ್ಟ್ 31ರಂದು ರಿಲೀಸ್ ಆಗಿದ್ದು, ಟ್ರೆಂಡ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ವಿಜಯ್ ಸೇತುಪತಿ (Vijay Sethupathi) ಅವರು ವಿಲನ್ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಶಾರುಖ್ ಖಾನ್ ಅವರದ್ದು ಹಲವು ಅವತಾರ. ಟ್ರೇಲರ್ನಲ್ಲಿ ಶಾರುಖ್ ಖಾನ್ ಹೇಳಿದ ಡೈಲಾಗ್ ಒಂದು ಸದ್ದು ಮಾಡುತ್ತಿದೆ. ಇದು ವಿಲನ್ಗೆ ಹೇಳಿದ ಮಾತೇ ಆದರೂ ಫ್ಯಾನ್ಸ್ ಬೇರೆ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ.
“Bete ko hath lagane se pehle, baap se baat kar”#JawanTrailer#ShahRukhKhan pic.twitter.com/QI3JUinnNf
— Samirrr__a18s (@A18sSamir) August 31, 2023
ಶಾರುಖ್ ಖಾನ್ಗೆ ಕುಟುಂಬದ ಮೇಲೆ ಹೆಚ್ಚು ಪ್ರೀತಿ ಇದೆ. ಆರ್ಯನ್ ಖಾನ್ನ ಅವರು ಸಖತ್ ಪ್ರೀತಿ ಮಾಡುತ್ತಾರೆ. ಈ ಮೊದಲು ಅವರು ಡ್ರಗ್ ಕೇಸ್ನಲ್ಲಿ ಅರೆಸ್ಟ್ ಆದರು. ಇದು ಶಾರುಖ್ ಖಾನ್ ಅವರನ್ನು ಸಾಕಷ್ಟು ಅಪ್ಸೆಟ್ ಮಾಡಿತ್ತು. ಹಲವು ಸಮಯ ಆರ್ಯನ್ ಖಾನ್ ಜೈಲಿನಲ್ಲಿ ಇದ್ದು ಬಂದರು. ಆರ್ಯನ್ ಖಾನ್ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಆರ್ಯನ್ ಬಿಡುಗಡೆ ಆದರು. ಮಗ ಅರೆಸ್ಟ್ ಆದ ವಿಚಾರದಲ್ಲಿ ಶಾರುಖ್ ಖಾನ್ಗೆ ಸಿಕ್ಕಾಪಟ್ಟೆ ಸಿಟ್ಟಿದೆ. ನೇರವಾಗಿ ಇದನ್ನು ಹೇಳೋಕೆ ಸಾಧ್ಯವಿಲ್ಲ. ಹೀಗಾಗಿ, ಸಿನಿಮಾ ಮೂಲಕ ಹೇಳಿರಬಹುದು ಎಂದು ಅನೇಕರು ಊಹಿಸಿದ್ದಾರೆ.
That meta reference of Bete ko hath lagane se pehle Baap se baat kar ???
— Rishi (@SRKsAvenger) August 31, 2023
We got that King We Got That ?#JawanTrailer pic.twitter.com/DbA0AAusbj
ಈ ಚಿತ್ರದಲ್ಲಿ ಜವಾನ್ (ಶಾರುಖ್ ಖಾನ್) ಹಾಗೂ ಕಲೀ (ವಿಜಯ್ ಸೇತುಪತಿ) ಮುಖಾಮುಖಿ ಆಗುತ್ತಾರೆ. ಈ ವೇಳೆ ವಿಲನ್ಗೆ ಶಾರುಖ್ ಹೇಳುವ ಡೈಲಾಗ್ ಗಮನ ಸೆಳೆದಿದೆ. ‘ನನ್ನ ಮಗನ ಮುಟ್ಟುವ ಮೊದಲು ತಂದೆಯ ಜೊತೆ ಮಾತನಾಡು’ ಎಂದು ಹೇಳುತ್ತಾರೆ ಶಾರುಖ್. ಇದು ವಿಲನ್ಗೆ ಹೇಳಿದ ಮಾತೇ ಆದರೂ ಅನೇಕರು ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ. ಶಾರುಖ್ ಖಾನ್ ತಮ್ಮ ಮಗನ ವಿಚಾರದಲ್ಲಿ ಎಚ್ಚರಿಕೆ ನೀಡಿದ್ದು ಎಂದು ಹೇಳಲಾಗುತ್ತಿದೆ.
“Bete ko Hath lagane se pehle Baap se Baat kar “
— Ahmed (FAN) (@AhmedKhanSrkMan) August 31, 2023
#JawanTrailer #ShahRukhKhan?https://t.co/iDVgggtnpB pic.twitter.com/0kFSucUXYn
‘ಜವಾನ್’ ಸೆಪ್ಟೆಂಬರ್ 7ರಂದು ರಿಲೀಸ್ ಆಗುತ್ತಿದೆ. ಶಾರುಖ್ ಖಾನ್ಗೆ ಜೊತೆಯಾಗಿ ನಯನತಾರಾ ನಟಿಸಿದ್ದಾರೆ. ಅಟ್ಲಿ ನಿರ್ದೇಶನ ಚಿತ್ರಕ್ಕಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಅಪರ್ಣಾ ನಾಯರ್ ಶವ ಪತ್ತೆ; ಅಸಹಜ ಸಾವು ಪ್ರಕರಣ ದಾಖಲಿಸಿದ ಪೊಲೀಸರು
ಸ್ಪಂದನಾ ವಿಜಯ್ ರಾಘವೇಂದ್ರ ಅವರ ಸಾವಿನ ನೋವು ಇನ್ನೂ ಕಾಡುತ್ತಿರುವಾಗಲೇ ಚಿತ್ರರಂಗಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಕೇಳಿಬಂದಿದೆ. ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟಿ ಅಪರ್ಣಾ ನಾಯರ್ (Aparna Nair) ಅವರು ನಿಧನರಾಗಿದ್ದಾರೆ. ಇದು ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ತೀವ್ರ ನೋವು ಉಂಟು ಮಾಡಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಅಪರ್ಣಾ ನಾಯರ್ ಅವರ ಶವ ಪತ್ತೆ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಅಸಹಜ ಸಾವು ಪ್ರಕರಣ (Unnatural Death Case) ದಾಖಲಿಸಿಕೊಂಡಿದ್ದಾರೆ. ಮಲಯಾಳಂ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಪರ್ಣಾ ನಾಯರ್ ಅವರು ಸಕ್ರಿಯರಾಗಿದ್ದರು. ಅವರ ನಿಧನಕ್ಕೆ (Aparna Nair Death) ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ಅಪರ್ಣಾ ನಾಯರ್ ಅವರು ತಿರುವನಂತಪುರಂನಲ್ಲಿ ವಾಸವಾಗಿದ್ದರು. ಅವರಿಗೆ 31 ವರ್ಷ ವಯಸ್ಸಾಗಿತ್ತು. ಗುರುವಾರ (ಆಗಸ್ಟ್ 31) ಸಂಜೆ 7.30ರ ಸುಮಾರಿಗೆ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಗೊತ್ತಾಗಿದೆ. ಈ ವೇಳೆ ಮನೆಯಲ್ಲಿ ಅವರ ತಾಯಿ ಮತ್ತು ಸಹೋದರಿ ಇದ್ದರು ಎಂದು ಹೇಳಲಾಗಿದೆ. ಕೂಡಲೇ ಅಪರ್ಣಾ ನಾಯರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟುಹೊತ್ತಿಗಾಗಲೇ ಅವರು ಕೊನೆಯುಸಿರು ಎಳೆದಿದ್ದರು ಎಂದು ವರದಿ ಆಗಿದೆ.
ಅಪರ್ಣಾ ನಾಯರ್ ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅವರ ಸಂಬಂಧಿಕರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಪರ್ಣಾ ಅವರು ಅಗಲಿದ್ದಾರೆ. ಕುಟುಂಬದವರಿಗೆ ಎಲ್ಲರೂ ಸಾಂತ್ವನ ಹೇಳುತ್ತಿದ್ದಾರೆ.
‘ಮೇಘತೀರ್ಥಂ’, ‘ಮುದುಗೌ’, ‘ಅಚಾಯನ್ಸ್’, ‘ಕಲ್ಕಿ’, ‘ಕೊಡತಿ ಸಮಕ್ಷಂ ಬಾಲನ್ ವಕೀಲ್’ ಸೇರಿದಂತೆ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ಅಪರ್ಣಾ ನಾಯರ್ ಅವರು ನಟಿಸಿದ್ದಾರೆ. ಹಲವು ಟಿವಿ ಸೀರಿಯಲ್ಗಳಲ್ಲೂ ಅವರು ಅಭಿನಯಿಸಿದ್ದಾರೆ. ಆ ಮೂಲಕ ಮಲಯಾಳಂ ಸಿನಿಮಾ ಪ್ರೇಕ್ಷಕರಿಗೆ ಅವರು ಪರಿಚಿತರಾಗಿದ್ದರು. ಆದರೆ ಅವರ ಜೀವನ ಈ ರೀತಿ ದುರಂತ ಅಂತ್ಯ ಕಂಡಿರುವುದು ಬೇಸರ ಮೂಡಿಸಿದೆ. ಅಪರ್ಣಾ ನಾಯರ್ ಸಾವಿಗೆ ಕಾರಣ ಏನು ಎಂಬುದು ತನಿಖೆ ಬಳಿಕ ಗೊತ್ತಾಗಬೇಕಿದೆ.