ಬೆಂಗಳೂರು : ಫ್ಯಾನ್‍ಗೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ!
ಬೆಂಗಳೂರು, ಜ.01: ಎಲ್ಲರೂ ನ್ಯೂ ಇಯರ್ (New Year 2024) ಸಂಭ್ರಮದಲ್ಲಿದ್ರು. ಹೊಸ ವರ್ಷವನ್ನ ಕುಡಿದು ಕುಪ್ಪಳಿಸಿ ಸ್ವಾಗತಿಸಿದ್ರು. ಆದರೆ ಇಲ್ಲೊಂದು ಯುವತಿ ಚಿಕ್ಕದೊಂದು ವಿಚಾರಕ್ಕೆ ಕೋಪಗೊಂಡು ನೇಣಿಗೆ ಶರಣಾಗಿದ್ದಾಳೆ. ನ್ಯೂ ಇಯರ್ ಸಂಭ್ರಮದ ಹೊತ್ತಲ್ಲೇ ಆತುರದ ನಿರ್ಧಾರಕ್ಕೆ ಪ್ರಾಣ ಬಿಟ್ಟಿದ್ದಾಳೆ (Death). ಫೋಟೋಶೂಟ್ಗೆ (PhotoShoot) ಹೋಗಬೇಡ ಎಂದು ಪೋಷಕರು ಬುದ್ಧಿ ಹೇಳಿದಕ್ಕೆ ನೊಂದ ವರ್ಷಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಂಗಳೂರಿನ ಸುಧಾಮನಗರದ ಮನೆಯಲ್ಲಿ ಬಿಬಿಎ ಜೊತೆಗೆ ಫೋಟೋಗ್ರಫಿ ಸಹ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು 21ವರ್ಷದ ವರ್ಷಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ ವರ್ಷಿಣಿ, ಜಯನಗರದ ಕಮ್ಯೂನಿಟಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಳು. ಬಿಬಿಎ ಜೊತೆಗೆ ಫೋಟೋಗ್ರಫಿ ಸಹ ಓದುತ್ತಿದ್ದಳು. ವರ್ಷಿಣಿ ನಿನ್ನೆ ಮಾಲ್ಗೆ ಹೋಗಿ ಫೋಟೋಶೂಟ್ ಮಾಡಿಸಬೇಕು ಎಂದು ರೆಡಿಯಾಗಿದ್ದಳು.
ಆದರೆ ಪೋಷಕರು ಮಾಲ್ಗೆ ಹೋಗಬೇಡ ಎಂದು ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ನೊಂದ ವರ್ಷಿಣಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಯುವತಿ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ವಿಲ್ಸನ್ ಗಾರ್ಡನ್ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.
ಹೊಸ ವರ್ಷದಂದೇ ಯುವಕನ ಕೊಲೆ
ಹೊಸ ವರ್ಷದ ಮೊದಲನೇ ದಿನವೇ ರಾಜಧಾನಿಯಲ್ಲಿ ನೆತ್ತರು ಹರಿದಿದೆ. ರಾತ್ರಿ 1 ಗಂಟೆಗೆ ದುಷ್ಕರ್ಮಿಗಳ ದಾಳಿಗೆ ಯುವಕ ಉಸಿರು ಚೆಲ್ಲಿದ್ದಾನೆ. ನ್ಯೂ ಇಯರ್ ಸಂಭ್ರಮದ ದಿನವೇ ಬೆಂಗಳೂರಿನ ಹನುಮಂತನಗರದ 80 ಅಡಿ ರಸ್ತೆಯಲ್ಲಿ ಯುವಕನ ಹತ್ಯೆಯಾಗಿದೆ. ಬನಶಂಕರಿ ನಿವಾಸಿ ವಿಜಯ್ ಎಂಬಾತನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿಕೊಂದಿದ್ದಾರೆ. ಆಟೋದಲ್ಲಿ ಬಂದು ಹತ್ಯೆಗೈದು ಶವ ರಸ್ತೆಬದಿ ಎಸೆದು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹನುಮಂತನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.