ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಹಿಳೆಯೊಬ್ಬರಿಂದ 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೇಳೂರು ಪಿಡಿಓ..!

Twitter
Facebook
LinkedIn
WhatsApp
ಮಹಿಳೆಯೊಬ್ಬರಿಂದ 10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೇಳೂರು ಪಿಡಿಓ..!

ಕುಂದಾಪುರ : ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿನಿಮಿಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಬೇಳೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಬಂಧಿತರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಎಂದು ಗುರುತಿಸಲಾಗಿದೆ. ಈತ ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಒಟ್ಟು ನಾಲ್ಕು ಕಂತಿನಲ್ಲಿ 1.20ಲಕ್ಷ ರೂ. ಹಣ ಬಿಡುಗಡೆಯಾಗಿದ್ದು, ಹಣ ಬಿಡುಗಡೆ ಮಾಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದು, ಅದರಂತೆ ಕಾರ್ಯಾ ಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ತೆಕ್ಕಟ್ಟೆ ಜಂಕ್ಷನ್‌ನಲ್ಲಿ ದೂರುದಾರರಿಂದ 10ಸಾವಿರ ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಜಯಂತ್‌ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತೆಕ್ಕಟ್ಟೆ ಪ್ರಮುಖ ಭಾಗದಲ್ಲಿ ಪಿಡಿಒ ಬೈಕ್‌ನಲ್ಲಿ ಬಂದು ಪಲಾನುಭವಿ ಅವರಿಂದ ಲಂಚದ ಹಣ ರೂ. 10 ಸಾವಿರವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತಿದ್ದ ಉಡುಪಿ ಲೋಕಾಯುಕ್ತ ಪೊಲೀಸರ ತಂಡ ಸಿನಿಮೀಯ ಮಾದರಿಯಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿತ್ತು.

ಮಂಗಳೂರು : ಯುವಕರ ಜಾಲಿರೈಡನ್ನು ಮೊಟಕುಗೊಳಿಸಿದ ಕಾಳಿಂಗ ಸರ್ಪ..!

ಮಂಗಳೂರು :  ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ನೀಡುವಾಗ ಇರುವ ಸುಖ, ಆತ್ಮ ಸಂತೃಪ್ತಿ ಬಹುಷ ಬೇರೆ ಯಾವುದರಲ್ಲೂ ಸಿಗುವುದು ಅತೀ ವಿರಳ ಎಂದೇ ಹೇಳಬಹುದು.ಇಂತಹ ಸಂಕಷ್ಟದಲ್ಲಿದ್ದ ಮಹಿಳೆಯ ಕೂಗಿಗೆ ಸ್ಪಂದಿಸುವ ಮೂಲಕ ಮೂವರು ಯುವಕರು ಮಾನವೀಯತೆ ಮೆರೆದಿದ್ದಾರೆ.

ಶಿವಪ್ರಸಾದ್ ಸ್ನೇಹಿತರಾದ ಪ್ರವೀಣ್ ಮತ್ತು ಅವಿಲ್ ಅವರುಗಳೊಂದಿಗೆ ಒಂದು ಜಾಲಿ ರೈಡ್ ಹೋಗೋಣವೆಂದು ಬೈಕ್ ಗಳನ್ನು ಏರಿ ಕಳಸದಿಂದ ಸಂಸೆಗೆ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಮಳೆಯ ಕಾರಣ ರಸ್ತೆಯೆಲ್ಲ ಕೆಸರಾಗಿ ಸರಾಗ ಪ್ರಯಾಣಕ್ಕೆ ಅಡಚಣೆಯಾಗಿತ್ತು, ತಿಮ್ಮಯ್ಯ ಕಾಂಡಾ ಎಂಬಲ್ಲಿ ತಲುಪುವ ಹೊತ್ತಲ್ಲಿ ಅದೇಕೋ ಆ ಪುಟ್ಟ ಊರಿನ ನಾಯಿಗಳು ಒಂದೇ ಸವನೆ ಬೊಗಳುತಿದ್ದರೆ, ಅಸಹಾಯಕ ವೃದ್ದೆಯೋರ್ವಳು ಚೀರಾಡುತ್ತ ಓಡೋಡಿ ಬಂದು ಸಹಾಯಕ್ಕೆ ಅಂಗಲಾಚಿದ್ದಾಳೆ. ಗೊತ್ತಿರದ ಊರಲ್ಲಿ ಈ ಏಕಾಏಕಿ ಸನ್ನಿವೇಶದಿಂದ ತರುಣರು ಆರಂಭದಲ್ಲಿ ಕೊಂಚ ವಿಚಲಿತರಾದ್ರೂ ಬಳಿಕ ಧೈರ್ಯ ಮಾಡಿ ಬೈಕ್ ನಿಲ್ಲಿಸಿ ವೃದ್ದೆಯಲ್ಲಿ ವಿಚಾರಿಸಲಾಗಿ, ತನ್ನ ಮನೆಯಯೊಳಗೆ ಬೃಹತ್ ಹಾವೊಂದು ನುಗಿದ್ದು ಸಹಾಯಕ್ಕಾಗಿ ಬೇಡಿಕೊಂಡಿದ್ದಳು. ಮೂವರು ಯುವಕರು ವೃದ್ದೆಯ ಮಾತು ಕೇಳಿ ಮನೆಯೊಳಗೆ ಹೋಗಿ ನೋಡಿದಾಗ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಮನೆಯ ಅಡಿಗೆ ಕೋಣೆ ಸೇರಿಕೊಂಡಿತ್ತು. ಸಂಜೆಯ ಹೊತ್ತು ಬೇರೆಯಾಗಿತ್ತು.ಕೂಡಲೇ ಸ್ನೇಹಿತ ರಾಕೇಶ್ ಬೋಳಾರ್‌ಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಅವರ ಸಲಹೆಯಂತೆ ಸ್ನೇಕ್ ಅನಿಲ್ ಚಾಮಾಡಿಯನ್ನು ಸಂಪರ್ಕಿಸಿ ಬರಲು ಹೇಳಿದ್ದು, ಸುಮಾರು ಒಂದೂವರೆ ಗಂಟೆಗಳ ಬೈಕ್ ಪ್ರಯಾಣ ಮಾಡಿದ ಸ್ನೇಕ್ ಅನಿಲ್ ಅವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಸುಮಾರು 2 ವರ್ಷ ಪ್ರಯಾದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಮನೆಯೊಳಗಿನಿಂದ ರಕ್ಷಣೆ ಮಾಡಿ ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ. ಈ ಮೂವರು ಯುವಕರ ಸಕಾಲದ ಸಮಯಪ್ರಜ್ಞೆ, ಸಹಾಯಾಸ್ತ ಕಂಗಾಲಾಗಿದ್ದ ವೃದ್ದೆಯ ಮುಖದಲ್ಲಿ ಧನ್ಯತಾಭಾವ ಮೂಡಿಸಿದ್ರೆ,ಅದೆಲ್ಲೋ ಜಾಲಿ ರೈಡ್ ಹೊರಟಿದ್ದ ಯುವಕರ ಪ್ರಯಾಣ ಕಾಳಿಂಗ ಸರ್ಪ ಮೊಟಕು ಗೊಳಿಸಿತ್ತು ಆದ್ರೆ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ ಸಂತೃಪ್ತಿ ಭಾವ ಆ ಮೂವರು ಯುವಕರ ಮೊಗದಲ್ಲಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist