ಬೆಳ್ತಂಗಡಿ: ಹೃದಯಘಾತದಿಂದ ವ್ಯಕ್ತಿ ನಿಧನ.!
ಬೆಳ್ತಂಗಡಿ: ಕನ್ನಾಜೆ ನಿವಾಸಿ ಲಾಯಿಲದಲ್ಲಿ ಬೇಲ್‌ಪುರಿ ವ್ಯಾಪಾರ ಮಾಡುತ್ತಿದ್ದ ರಾಜು ಶೆಟ್ಟಿ (51) ಅವರು ಮಾ. 20ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.
ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಯಲ್ಲಿ ಅಸ್ವಸ್ಥಗೊಂಡಾಗ ತತ್‌ಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಧೃಢಪಡಿಸಿದ್ದಾರೆ. ಕಳೆದ 15 ವರ್ಷಗಳಿಂದ ಲಾಯಿಲ ಜಂಕ್ಷನ್ ಬಳಿ ಬೆಲ್ ಪುರಿ ಅಂಗಡಿ ನಡೆಸುತ್ತಿದ್ದರು.
ಕಾಸರಗೋಡು:2000ರೂ. ಮುಖ ಬೆಲೆಯ ನೋಟು ಪತ್ತೆ- ಓರ್ವ ವಶಕ್ಕೆ
ಕಾಸರಗೋಡು:ಅಂಬಲತ್ತರ ಗುರುಪುರದ ಮನೆಯೊಂದರಿಂದ 2000ರೂ.ಮುಖ ಬೆಲೆಯ 7 ಕೋಟಿ ಮೌಲ್ಯದ ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಓರ್ವ ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು, ಕೇಂದ್ರ ಸರಕಾರ ರದ್ದು ಗೊಳಿಸಿದ ಎರಡು ಸಾವಿರ ಮುಖ ಬೆಲೆಯ ನೋಟು ಗಳು ಲಭಿಸಿವೆ.
ಗಲ್ಫ್ ಉದ್ಯೋಗಿ ಯಾಗಿರುವ ಕೆ. ಪಿ ಬಾಬು ರಾಜ್ ರವರ ಮಾಲಕತ್ವದ ಈ ಮನೆಯು ಪಾಣ ತ್ತೂರಿನ ಅಬ್ದುಲ್ ರಜಾಕ್ ರವರಿಗೆ ಬಾಡಿಗೆಗೆ ನೀಡಲಾಗಿತ್ತು. ಈ ಮನೆಯ ಬಗ್ಗೆ ಪೊಲೀಸರು ಮೂರು ದಿನಗಳಿಂದ ನಿಗಾ ಇರಿಸಿದ್ದರು. ಬುಧವಾರ ಸಂಜೆ ದಾಳಿ ನಡೆಸಿದ ಪೊಲೀಸರು ಎರಡು ಕೋಣೆ ಗಳಲ್ಲಿ ಬಚ್ಚಿಡ ಲಾಗಿದ್ದ ನೋಟು ಗಳನ್ನು ವಶಕ್ಕೆ ಪಡೆದಿದ್ದಾರೆ.ಥರ್ಮೋಕಾಲ್ ಬಾಕ್ಸ್, ಕಾರ್ಡ್ ಬೋರ್ಡ್ ,ಗೋಣಿ ಚೀಲಗಳಲ್ಲಿ ತುಂಬಿ ಸಿಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ .
ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿ ಆಶಾ ಆತ್ಮಹತ್ಯೆ..!!
ಉಡುಪಿ: ಉಡುಪಿ ಜಿಲ್ಲೆಯ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಶಾ ಎಸ್ (52) ಜೀವಾಂತ್ಯ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಆಶಾ ಬುಧವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.