ಮಂಗಳವಾರ, ಮೇ 21, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳ್ತಂಗಡಿ : ಮಹಿಳೆಯ ಮೊಬೈಲ್ ಕದ್ದು ಫೋನ್ ಪೆ ಮೂಲಕ ಹಣ ವರ್ಗಾವಣೆ ಮಾಡಿದ ಗಂಡನ ಸ್ನೇಹಿತರು ; ಪ್ರಕರಣ ದಾಖಲು!

Twitter
Facebook
LinkedIn
WhatsApp
ಬೆಳ್ತಂಗಡಿ : ಮಹಿಳೆಯ ಮೊಬೈಲ್ ಕದ್ದು ಫೋನ್ ಪೆ ಮೂಲಕ ಹಣ ವರ್ಗಾವಣೆ ಮಾಡಿದ ಗಂಡನ ಸ್ನೇಹಿತರು ; ಪ್ರಕರಣ ದಾಖಲು!

ಬೆಳ್ತಂಗಡಿ : ಮಹಿಳೆಯ ಮೊಬೈಲ್ ಫೋನ್ ಕದ್ದು ಅದರಿಂದಲೇ ಫೋನ್ ಪೇ ಮೂಲಕ ಹಣ ಲಪಟಾಯಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿಯ ಕುವೆಟ್ಟು ನಿವಾಸಿ ಅಭಿದಾ ಬಾನು ನೀಡಿರುವ ದೂರಿನ ಮೇರೆಗೆ ಸಿದ್ಧಿಕ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ನ. 9 ರಂದು ಬೆಳಿಗ್ಗೆ ಮಹಿಳೆ ಮನೆಯಲ್ಲಿ ಇರದಿದ್ದ ವೇಳೆ, ಮಹಿಳೆಯ ಪರಿಚಯದ ಸಿದ್ದಿಕ್ ಎಂಬಾತನು ಮಹಿಳೆಯ ಮನೆಯಿಂದ ಅಂದಾಜು ರೂ 8000/- ಮೌಲ್ಯದ ಮೊಬೈಲನ್ನು ಕಳವು ಮಾಡಿಕೊಂಡು ಹೋಗಿದ್ದು, ಆ ಬಳಿಕ ಸದ್ರಿ ಮೊಬೈಲ್‌ನಲ್ಲಿ, ಪೋನ್ ಪೇ ಮುಖಾಂತರ ಅವರ ಖಾತೆಯಲ್ಲಿದ್ದ ರೂ 64.000/- ಹಣದ ಪೈಕಿ, ರೂ 34.000/- ರೂ ಹಣವನ್ನು ಜಾಪರ್ ಎಂಬಾತನಿಗೂ, ರೂ 25.000/- ಹಣವನ್ನು ಮಹಮ್ಮದ್ ಎಂಬಾತನಿಗೂ ಹಾಗೂ ರೂ 2000/- ಹಣವನ್ನು ಸಿರಾಜ್ ಎಂಬಾತನಿಗೂ ವರ್ಗಾವಣೆ ಮಾಡಿರುತ್ತಾರೆ.

ಅವರೆಲ್ಲರು ಮಹಿಳೆಯ ಗಂಡನ ಸ್ನೇಹಿತರಾಗಿರುವುದರಿಂದ ಮೊಬೈಲ್ ಮತ್ತು ಹಣವನ್ನು ವಾಪಸು ನೀಡಬಹುದೆಂದು ಕಾದಿದ್ದು, ಈವರೆಗೆ ವಾಪಾಸ್ ನೀಡದಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 116/2023 ಕಲಂ; 380,411ಭಾ ದಂ ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ