ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳ್ತಂಗಡಿ: ಪೆಟ್ರೋಲಿಯಂ ಪೈಪ್‌ ಲೈನಿಗೆ ಕನ್ನ ಕೊರೆದು 12 ಸಾವಿರ ಲೀಟರ್ ಇಂಧನ ಕಳವು...!

Twitter
Facebook
LinkedIn
WhatsApp
ಬೆಳ್ತಂಗಡಿ: ಪೆಟ್ರೋಲಿಯಂ ಪೈಪ್‌ ಲೈನಿಗೆ ಕನ್ನ ಕೊರೆದು 12 ಸಾವಿರ ಲೀಟರ್ ಇಂಧನ ಕಳವು...!

ಬೆಳ್ತಂಗಡಿ: ಪುದುವೆಟ್ಟಿನಲ್ಲಿ ಪೆಟ್ರೋಲಿಯಂ ಪೈಪ್‌ ಲೈನ್‌ಗೆಕನ್ನ ಕೊರೆದು ಲಕ್ಷಾಂತರ ರೂ. ಮೌಲ್ಯದ ಇಂಧನ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಂಪೆನಿಯವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಪೆಟ್ರೋನೆಟ್‌ ಎಂ.ಎಚ್‌.ಬಿ. ಲಿ.ನ ನೆರಿಯದ ಸ್ಟೇಶನ್‌ ಇನ್‌ ಚಾರ್ಜ್‌ ಆಗಿರುವ ರಾಜನ್‌ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರು- ಹಾಸನ- ಬೆಂಗಳೂರು ಪೆಟ್ರೋನೆಟ್‌ ಪೈಪ್‌ ಮೂಲಕ ಪೆಟ್ರೋಲಿಯಂ ವಸ್ತುಗಳು ಸಾಗಾಟವಾಗುತ್ತಿದ್ದು, ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ಮಾ. 16ರಿಂದ 19ರ ವರೆಗೆ ಕಳ್ಳರು ಪೆಟ್ರೋಲಿಯಂ ಪೈಪ್‌ ಲೈನ್‌ಗೆ ಕನ್ನ ಕೊರೆದು 2.5 ಇಂಚಿನ ಎಚ್‌.ಡಿ.ಪಿ.ಇ. ಪೈಪ್‌ ಅಳವಡಿಸಿ ಅದರ ಮೂಲಕ 12 ಸಾವಿರ ಲೀ.ಗೂ ಅಧಿಕ ಇಂಧನವನ್ನು ಕಳವು ಮಾಡಿದ್ದು, ಇದರ ಅಂದಾಜು ಮೌಲ್ಯ ಸುಮಾರು 9,60,000 ರೂ. ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೆಲದಿಂದ ಸುಮಾರು 3 ಅಡಿ ಆಳದಲ್ಲಿರುವ ಪೈಪ್‌ ಲೈನನ್ನು ಅಗೆದು ಪೈಪ್‌ಗೆ ರಂಧ್ರ ಕೊರೆದು ಕಳ್ಳತನ ನಡೆಸಲಾಗಿದೆ.

ಇದರಲ್ಲಿ ಸ್ಥಳೀಯರ ಸಹಕಾರವೂ ಇರುವ ಶಂಕೆ ಇದ್ದು, ದೊಡ್ಡ ಮಟ್ಟದ ಇಂಧನ ಕಳ್ಳತನ ಜಾಲ ಇರುವ ಅನುಮಾನ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿಗಳು ಪೊಲೀಸ್‌ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಪಿಲಿಕುಳ ನಿಸರ್ಗಧಾಮದಿಂದ ತಪ್ಪಿಸಿಕೊಂಡ ದೈತ್ಯ ಕಾಳಿಂಗ ಸರ್ಪ..!

ಮಂಗಳೂರು :  ಪಂಜರದಲ್ಲಿದ್ದ ದೈತ್ಯ ಕಾಳಿಂಗ ಸರ್ಪವೊಂದು ತಪ್ಪಿಸಿಕೊಂಡು ಹೋಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ  ಜೈವಿಕ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು ತಪ್ಪಿಸಿಕೊಂಡ ಈ ಹೆಣ್ಣು ಕಾಳಿಂಗ ಸರ್ಪ ರಸ್ತೆ ದಾಟಿ ವಿಜ್ಞಾನ ಸೆಂಟರ್​ನತ್ತ ಸಾಗುತ್ತಿತ್ತು. ಸಾರ್ವಜನಿಕರು ಇದನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ತಕ್ಷಣ ನಿಸರ್ಗಧಾಮದ ಸಿಬ್ಬಂದಿ ಧಾವಿಸಿ  ಅದನ್ನು ಸೆರೆ ಹಿಡಿದು ಮರಳಿ ಪಂಜರಕ್ಕೆ ಹಾಕಿದ್ದಾರೆ. ಈ ಗ ಸಂತನೋತ್ತಿಯ ಸಮಯವಾಗಿದ್ದು  ಒಂದು ಹೆಣ್ಣು ಮತ್ತು ಗಂಡು ಗಾಳಿಂಗ ಸರ್ಪಗಳು ಕಾದಾಟ ಮಾಡುತ್ತಿದ್ದಾಗ ಪಂಜರದ ಮೆಶ್ ಲಿಂಕ್ ತಪ್ಪಿ ಈ ಹೆಣ್ಣು  ಕಾಳಿಂಗ ಸರ್ಪ ಹೊರಕ್ಕೆ ತಪ್ಪಿಸಿ ಹೋಗಿದ್ದು ಇದನ್ನು ಗಮನಿಸಿದ ಸಿಬಂದಿ ಕೂಡಲೇ ಹಿಡಿದು  ಸಂತಾನೋತ್ಪತ್ತಿ ಕೇಂದ್ರಕ್ಕೆ ಸಾಗಿಸಿದ್ದಾರೆ.

ಸಂತನೋತ್ಪತ್ತಿ ಸಂದರ್ಭ  ಕಾಳಿಂಗ ಸರ್ಪಗಳ ಈ ಕಾದಾಟ  ಒಂದು ಸಹಜ ಪ್ರಕ್ರೀಯೆ ಆಗಿದೆ. ತಪ್ಪಿಸಿಕೊಂಡ ಹೆಣ್ಣು ಕಾಳಿಂಗ ಆರು ವರ್ಷ ವಯಸ್ಸಾಗಿದ್ದು ಸುಮಾರು 8 ಅಡಿ ಉದ್ದವಿದೆ.  ಹೆಣ್ಣು ಕಾಳಿಂಗ ಸಪೂರವಿದ್ದ ಕಾರಣ ಹೊರಗೆ ಹೋಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.   ದೇಶದ ದೊಡ್ಡ 17 ಮೃಗಾಲಯಗಳ ಪೈಕಿ ಇದು ಕೂಡ ಒಂದು. ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್​ ಒನ್​​ ಎಂಬ ಗೌರವಕ್ಕೂ ಪಾತ್ರವಾಗಿದೆ. ಅಳಿವಿನಂಚಿನ ಸೇರಿ ಅಪರೂಪದ ಹುಲಿ,  ಕಾಳಿಂಗ, ಸೇರಿದಂತೆ ಅನೇಕ ಅಪರೂಪದ ಪ್ರಾಣಿ ಮತ್ತು ಪಕ್ಷಿ ಸಂಕುಲ ಇಲ್ಲಿ ಇದ್ದು ಸಂತಾನಾಭಿವೃದ್ಧಿಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ