ಬೆಳಗಾವಿ : ಒಂದೇ ಕುಣಿಕೆಗೆ ಕೊರಳೊಡ್ಡಿದ ತಾಯಿ-ಮಗಳು!
ಬೆಳಗಾವಿ: ಒಂದೇ ಹಗ್ಗಕ್ಕೆ ಪುತ್ರಿಯ ಜೊತೆಗೆ ನೇಣುಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಮಹಾದೇವಿ ಇಂಚಲ (34) ಚಾಂದನಿ ಇಂಚಲ (7) ಆತ್ಮಹತ್ಯೆಗೆ ಶರಣಾದವರು. ಈ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮಹಾದೇವಿ ಇಂಚಲ ಅವರು ಗೋಕಾಕ್ ತಾಲೂಕಿನ ಖನಗಾಂವ ಗ್ರಾಮದ ಯೋಧನನ್ನು ವರಿಸಿದ್ದರು. ಏಳು ವರ್ಷಗಳ ಹಿಂದೆ ಪತಿಯ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮಹಾದೇವಿಯವರು ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ಪುತ್ರಿ ಜೊತೆಗೆ ವಾಸವಿದ್ದರು. ಇದೀಗ ಸಹೋದರ ಹಾಗೂ ನಾದಿನಿಯ ಕಿರುಕುಳದಿಂದ ಬೇಸತ್ತು ಪುತ್ರಿಯ ಜೊತೆಗೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ಬೆಳಗಾವಿಯ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಾರೀ ಮಳೆಗೆ ದೆಹಲಿ ತತ್ತರ – ನರ್ಸರಿಯಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ರಜೆ
ನವದೆಹಲಿ: ಉತ್ತರ ಭಾರತದ (North India) ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು (Heavy Rains), ಜಲಪ್ರಳಯವೇ ಸೃಷ್ಟಿಯಾದಂತಾಗಿದೆ. ಭಾರೀ ಮಳೆಯ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ನರ್ಸರಿಯಿಂದ 5ನೇ ವರೆಗಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಜುಲೈ 11 ರಂದು ರಜೆ ಘೋಷಿಸಲಾಗಿದೆ.
ದೆಹಲಿ (New Delhi), ಪಂಜಾಬ್, ಉತ್ತರಾಖಂಡ್‌ನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ದೆಹಲಿಯಲ್ಲಿ ತಡೆಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ವಿವಿಧೆಡೆ 15ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಯಮುನಾ ನದಿ (Yamuna River) ಸೇರಿದಂತೆ ಹೆಚ್ಚಿನ ನದಿಗಳು ಉಕ್ಕಿ ಹರಿಯುತ್ತಿವೆ. ಕಳೆದ ಎರಡು ದಿನಗಳಿಂದ ಮಹಳೆ ಬಿಡದೇ ಸುರಿಯುತ್ತಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ ಸರ್ಕಾರಿ ಶಾಲೆಗಳಿಗೆ (Primary Schools) ರಜೆ ಘೋಷಣೆ ಮಾಡಿದೆ. ಖಾಸಗಿ ಶಾಲೆಗಳೂ ಮುಂದಿನ ಆದೇಶದ ವರೆಗೆ ಅದೇ ಕ್ರಮವನ್ನು ಅನುಸರಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ನರ್ಸರಿಯಿಂದ 5ನೇ ತರಗತಿವರೆಗೆ ರಜೆ ನೀಡಿದ್ದು, 6ರಿಂದ ಮೇಲ್ಪಟ್ಟ ತರಗತಿಗಳು ಎಂದಿನಂತೆ ನಡೆಯುತ್ತವೆ.
ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಿಂದಾಗಿ ಕುಲು-ಮನಾಲಿಯಲ್ಲಿ ಚಿಕ್ಕಬಳ್ಳಾಪುರ-ಚಿಂತಾಮಣಿಯ 105 ಕನ್ನಡಿಗರು ಪರದಾಡ್ತಿದ್ದಾರೆ. ಬಿಯಾಸ್ ನದಿ ರೌದ್ರಾವತಾರದಿಂದ ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿವೆ. ದಕ್ಷಿಣ ಕನ್ನಡದ ಬಂಟ್ವಾಳದಿಂದ ಕಾಶ್ಮೀರ ಮಾರ್ಗವಾಗಿ ದರ್ಶನಕ್ಕೆ ತೆರಳಿದ್ದ 20 ಜನರ ತಂಡ ಭೂಕುಸಿತದಿಂದ ಸಿಲುಕಿಕೊಂಡಿದೆ.
ಅಮರನಾಥ ದರ್ಶನಕ್ಕೆ ತೆರಳಿ ಪಂಚತಾರಣಿ ಕ್ಯಾಂಪ್‌ನಲ್ಲಿದ್ದ 129 ಕನ್ನಡಿಗರನ್ನ ಎನ್‌ಡಿಆರ್‌ಎಫ್ ರಕ್ಷಿಸಿ ನೀಲಗ್ರಂಥ್ ಶಿಬಿರಕ್ಕೆ ಸ್ಥಳಾಂತರ ಮಾಡಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಶ್ರೀನಗರಕ್ಕೆ ಬರಲಿದ್ದಾರೆ. ಅಮರನಾಥ ಯಾತ್ರೆಗೆ ಹೋಗಿ ಸಿಲುಕಿಕೊಂಡವರ ಪರಿಸ್ಥಿತಿಯ ಬಗ್ಗೆ ಶಾಸಕ ಬಾಲಕೃಷ್ಣ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿ, ಕನ್ನಡಿಗರು ಸೇರಿದಂತೆ 18 ಸಾವಿರ ಯಾತ್ರಾರ್ಥಿಗಳು ಸಿಲುಕೊಂಡಿದ್ದಾರೆ. ಸೇನೆ, ಎನ್‌ಡಿಆರ್‌ಎಫ್‌ನವರು ರಕ್ಷಣೆ ಮಾಡಿ ಅಲ್ಲಲ್ಲಿ ಕ್ಯಾಂಪ್‌ಗಳಲ್ಲಿ ಸುರಕ್ಷಿತವಾಗಿರಿಸಿದ್ದಾರೆ. ರಾಜ್ಯ ಸರ್ಕಾರ ನಮ್ಮವರ ರಕ್ಷಣೆಗೆ ಸಕಲ ಪ್ರಯತ್ನ ಮಾಡ್ತಿದೆ ಅಂತ ತಿಳಿಸಿದರು.