ಬೆಡ್ ರೂಂ ಸೀನ್ ಕಮೆಂಟ್: ನಟಿ ತ್ರಿಷಾ ಬಳಿ ಕ್ಷಮೆ ಕೇಳಿದ ಮನ್ಸೂರ್ ಅಲಿ ಖಾನ್..!
‘ತ್ರಿಷಾ (Trisha Krishnan) ಅವರನ್ನು ರೇಪ್ ಮಾಡುವ ದೃಶ್ಯ ಸಿಗಲಿಲ್ಲ’ ಎಂಬರ್ಥದಲ್ಲಿ ಮಾತನಾಡುವ ಮೂಲಕ ವಿವಾದ ಸೃಷ್ಟಿ ಮಾಡಿದ್ದ ನಟ ಮನ್ಸೂರ್ ಅಲಿ ಖಾನ್ ಅವರು ಕೊನೆಗೂ ಕ್ಷಮೆ ಕೇಳಿದ್ದಾರೆ. ನಟಿ ತ್ರಿಷಾ ಬಗ್ಗೆ ನೀಡಿದ್ದ ಈ ಹೇಳಿಕೆಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಚೆನ್ನೈ ಪೊಲೀಸರು ಮನ್ಸೂರ್ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಮನ್ಸೂರ್ ಅಲಿ ಖಾನ್ ಅವರು ಕ್ಷಮೆ ಕೇಳಿದ್ದಾರೆ.
ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ತ್ರಿಷಾ ಅವರು ವಿಜಯ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಮನ್ಸೂರ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ನಟಿಸಿದ್ದರು. ‘ತ್ರಿಷಾ ಜೊತೆ ನಟಿಸುತ್ತೇನೆ ಎಂದಾಗ ಬೆಡ್ರೂಂ ದೃಶ್ಯ ಇರಬಹುದು ಎಂದು ನಾನು ಭಾವಿಸಿದೆ. ಈ ಮೊದಲ ಸಿನಿಮಾಗಳಲ್ಲಿ ನಟಿಯರನ್ನು ಬೆಡ್ರೂಂಗೆ ಕರೆದುಕೊಂಡು ಹೋಗುವ ದೃಶ್ಯ ಇತ್ತು. ಈ ಸಿನಿಮಾದಲ್ಲೂ ಹಾಗೆಯೇ ಇರಬಹುದು ಎಂದುಕೊಂಡಿದ್ದೆ. ನಾನು ಹಲವು ರೇಪ್ ದೃಶ್ಯಗಳನ್ನು ಮಾಡಿದ್ದೇನೆ. ಅದು ನನಗೆ ಹೊಸದಲ್ಲ. ಆದರೆ, ಈ ಚಿತ್ರದಲ್ಲಿ ಅವರನ್ನು ನೋಡಲೂ ಅವಕಾಶ ಕೊಡಲಿಲ್ಲ’ ಎಂದಿದ್ದರು ಮನ್ಸೂರ್ ಅಲಿ ಖಾನ್.
#BREAKING : Actor #MansoorAliKhan
— Ramesh Bala (@rameshlaus) November 24, 2023
apologizes to Actress @trishtrashers
" எனது சக திரைநாயகி திரிஷாவே
என்னை மன்னித்துவிடு!
இல்லறமாம் நல்லறத்தில் நின் மாங்கல்யம் தேங்காய் தட்டில் வலம்வரும்போது நான் ஆசிர்வதிக்கும் பாக்யத்தை இறைவன் தந்தருள்வானாக!! ஆமீன். "
---மன்சூர் அலிகான்
ಈಗ ವಿಚಾರಣೆ ಬಳಿಕ ಮನ್ಸೂರ್ ಅವರು ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ‘ಸಹನಟಿ ತ್ರಿಷಾ ಅವರೇ ನನ್ನನ್ನು ಕ್ಷಮಿಸಿ’ ಎಂದು ಮನ್ಸೂರ್ ಹೇಳಿರುವುದಾಗಿ ಟ್ರೇಡ್ ಅನಲಿಸ್ಟ್ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿದ್ದ ತ್ರಿಷಾ
ಮನ್ಸೂರ್ ಅಲಿ ಖಾನ್ ಹೇಳಿಕೆ ಬಗ್ಗೆ ತ್ರಿಷಾ ಪ್ರತಿಕ್ರಿಯೆ ನೀಡಿದ್ದರು. ಅವರ ಮಾತು ತ್ರಿಷಾ ಗಮನಕ್ಕೆ ಬಂದಿದೆ. ಈ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ. ಜೊತೆಗೆ ಮುಂದೆಂದೂ ಅವರ ಜೊತೆ ನಟಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ ತ್ರಿಷಾ. ಇಂಥ ಜನರು ಇಡೀ ಮನುಷ್ಯಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದು ತ್ರಿಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಾಲಯ್ಯ ಶೋನಲ್ಲಿ ರಶ್ಮಿಕಾ ಮಂದಣ್ಣ ಲವ್ ವಿಚಾರ ಲೀಕ್; ಇದೆಲ್ಲ ರಣಬೀರ್ ಕೆಲಸ
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಆದರೆ, ಇದಕ್ಕೆ ಅವರ ಕಡೆಯಿಂದ ಉತ್ತರ ಸಿಕ್ಕಿಲ್ಲ. ಈಗ ಬಾಲಯ್ಯ ಅವರು ನಡೆಸಿಕೊಡುವ ‘ಅನ್ಸ್ಟಾಪೆಬಲ್ ವಿತ್ ಎನ್ಬಿಕೆ’ ಶೋಗೆ ಅನಿಮಲ್ ತಂಡ ಆಗಮಿಸಿದೆ. ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಹಾಗೂ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ವೇದಿಕೆ ಮೇಲೆ ಇದ್ದರು. ಈ ವೇಳೆ ರಶ್ಮಿಕಾ ಪ್ರೀತಿ ವಿಚಾರ ಲೀಕ್ ಆಗಿದೆ.
ವಿಜಯ್ಗೆ ಕರೆ ಮಾಡುವಂತೆ ರಶ್ಮಿಕಾಗೆ ಕೋರಲಾಗಿದೆ. ಕರೆ ಮಾಡಿ ಲೌಡ್ ಸ್ಪೀಕರ್ ಇಡಲಾಗಿದೆ. ರಶ್ಮಿಕಾ ಕರೆ ಮಾಡಿ ಹೆಲೋ ಎಂದಿದ್ದಾರೆ. ಆ ಕಡೆಯಿಂದ ವಿಜಯ್ ದೇವರಕೊಂಡ ‘ವಾಟ್ಸಪ್ ರೇ’ ಎಂದು ಪ್ರೀತಿಯಿಂದ ಮಾತು ಆರಂಭಿಸಿದ್ದಾರೆ. ಫೋನ್ ಸ್ಪೀಕರ್ನಲ್ಲಿ ಇಟ್ಟಿರುವುದಾಗಿ ರಶ್ಮಿಕಾ ಹೇಳಿದ್ದಾರೆ. ಇವರ ಮಧ್ಯೆ ಮಾತುಕತೆ ಮುಂದುವರಿದಿದೆ.
‘ಐ ಲವ್ ಬಾಲ ಸರ್’ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ‘ಹಾಗಾದರೆ ವಿಜಯ್ ಯಾರನ್ನು ಪ್ರೀತಿಸುತ್ತಿದ್ದಾರೆ’ ಎಂದು ಬಾಲಯ್ಯ ಕೇಳಿದರು. ಇದಕ್ಕೆ ‘ಐ ಲವ್ ಸಂದೀಪ್ ರೆಡ್ಡಿ ವಂಗ’ ಎಂದಿದ್ದಾರೆ ವಿಜಯ್. ಅವರ ಮಾತಲ್ಲಿ ಸಖತ್ ಫನ್ ಇತ್ತು.
ರಣಬೀರ್ ಕಪೂರ್ ಅವರು ರಶ್ಮಿಕಾ ಮಂದಣ್ಣ ಹಾಗೂ ಸಂದೀಪ್ ರೆಡ್ಡಿ ವಂಗ ಭೇಟಿ ಬಗ್ಗೆ ಮಾತನಾಡಿದ್ದಾರೆ. ‘ಅರ್ಜುನ್ ರೆಡ್ಡಿ ಸಕ್ಸಸ್ ಪಾರ್ಟಿ ವಿಜಯ್ ದೇವರಕೊಂಡ ಮನೆಯಲ್ಲಿ ನಡೆಯಿತು. ವಿಜಯ್ ಮನೆಯ ಟೆರೇಸ್ನಲ್ಲಿ ರಶ್ಮಿಕಾನ ಸಂದೀಪ್ ಮೊದಲ ಭಾರಿ ಭೇಟಿ ಮಾಡಿದ್ದರು’ ಎಂದು ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ. ‘ಈ ರೀತಿಯ ಮಾಹಿತಿಯನ್ನು ಅವರು ಯಾಕೆ ಲೀಕ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ ರಶ್ಮಿಕಾ. ಈ ವಿಡಿಯೋ ಸಖತ್ ಫನ್ನಿ ಆಗಿದೆ.