ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಲಾಠಿ ಹಿಡಿದು ರಸ್ತೆ ಮಧ್ಯೆಯೇ ಪೊಲೀಸರ ನಡುವೆ ಜಗಳ ; ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ಲಾಠಿ ಹಿಡಿದು ರಸ್ತೆ ಮಧ್ಯೆಯೇ ಪೊಲೀಸರ ನಡುವೆ ಜಗಳ ; ಇಲ್ಲಿದೆ ವಿಡಿಯೋ

ಬಿಹಾರದ ನಳಂದಾ ಜಿಲ್ಲೆಯಲ್ಲಿ ಇಬ್ಬರು ಪೊಲೀಸರು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಪರಸ್ಪರ ಕೊರಳಪಟ್ಟಿ ಹಿಡಿದು ಗುದ್ದಾಡಿಕೊಂಡಿದ್ದಾರೆ. ಬಳಿಕ ಅದರಲ್ಲಿದ್ದ ಒಬ್ಬ ಪೊಲೀಸ್, ಪಕ್ಕದಲ್ಲಿದ್ದ ಪೊಲೀಸ್ ವಾಹನದ ಬಾಗಿಲು ತೆರೆದು ಅದರಲ್ಲಿದ್ದ ಲಾಠಿ ತಂದು ಮತ್ತೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೆ ಇದನ್ನು ಕಂಡ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ವಾಹನಗಳನ್ನು ನಿಲ್ಲಿಸಿ ನೋಡತೊಡಗಿದರು. ಕೆಲವರು ವಿಡಿಯೋ ಕೂಡ ತೆಗೆದಿದ್ದಾರೆ. ಹೊಡೆದಾಟ, ಹಲ್ಲೆಗಳನ್ನು ತಡೆಯಬೇಕಾದ ಪೊಲೀಸರೇ ಹೊಡೆದಾಡುತ್ತಿರುವುದನ್ನು ಕಂಡು, ಸಾರ್ವಜನಿಕರು ಏನು ಮಾಡಬೇಕೆಂದು ತೋಚದೆ ರಸ್ತೆಯಲ್ಲೇ ನಿಂತಿ ನೋಡುತ್ತಿದ್ದರು.

ಆದರೆ ಪೊಲೀಸರು ಜಗಳ ಮಾಡಿಕೊಂಡಿದ್ದೇಕೆ ಎನ್ನುವ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಲಂಚದ ಹಣ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿ ಪಾದಚಾರಿ ಮಾರ್ಗದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತದೆ. ಆದರೆ ಸ್ಥಳೀಯರು ಅವರಿಬ್ಬರ ಜಗಳವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರಿಂದ ವಿಡಿಯೋ ಸಖತ್ ವೈರಲ್ ಆಗಿದೆ. ಆದರೆ ಈ ವಿಷಯ ಪೊಲೀಸ್ ಅಧಿಕಾರಿಗಳಿಗೆ ತಿಳಿದರೆ ನಿಮ್ಮಿಬ್ಬರ ಕೆಲಸವೂ ಹೋಗುತ್ತದೆ ಎಂದು ವಾಹನ ಸವಾರರು ಎಚ್ಚರಿಕೆ ನೀಡಿದರೂ ಕೂಡ, ಇಬ್ಬರು ಪೊಲೀಸರು ಜಗಳದಿಂದ ಹಿಂದೆ ಸರಿಯದೆ ಪರಸ್ಪರ ಹಲ್ಲೆ ಮುಂದುವರಿಸಿದ್ದಾರೆ. ಅವೆಲ್ಲವೂ ಆ ವಿಡಿಯೋಗಳಲ್ಲಿ ದಾಖಲಾಗಿವೆ.

Bihar Police personnel settling accounts among themselves. Video from Nalanda district.

जय बिहार
जय बिहार पुलिस #BiharPolice#Bihar#Ganapath#BLACKPINK#fightvideos#วอลเลย์บอลหญิง#AsiaCupFinal#الاعتداء_الهمجي #السائح_الكويتي #fixed #விநாயகர்_சதுர்த்தி #M pic.twitter.com/hdWcZ28K3n


— Banrakas Baba (@BanrakasBaba) September 18, 2023

ಫುಟ್‌ಪಾತ್‌ನಲ್ಲಿ ಇಬ್ಬರು ಪೊಲೀಸರ ಜಗಳದ ಬಗ್ಗೆ ನಳಂದ ಜಿಲ್ಲಾ ಪೊಲೀಸರು ಪ್ರತಿಕ್ರಿಯಿಸಿದ್ದು, ವಿಷಯ ತಿಳಿದ ಕೂಡಲೇ ಇಬ್ಬರು ಪೊಲೀಸರನ್ನು ಕಚೇರಿಗೆ ಕರೆಸಲಾಗಿದೆ . ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದ.ಇಬ್ಬರು ಪೊಲೀಸರ ವಿರುದ್ಧ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಆದರೆ ನೆಟ್ಟಿಗರು ಇವರಿಬ್ಬರನ್ನೂ ಅಮಾನತು ಮಾಡುವ ಬದಲು ಖಾಯಂ ಆಗಿ ಕೆಲಸದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸುತ್ತಿದ್ದಾರೆ. ಪೊಲೀಸರ ಈ ರೀತಿಯ ವರ್ತನೆಯಿಂದ ಇಡೀ ಬಿಹಾರ ಪೊಲೀಸರಿಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದು ಸ್ಥಳೀಯರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಸಿದ್ದರೆ ಸಾಕು, ಕೇರಳದಲ್ಲಿ ಪೊಲೀಸ್ ಸ್ಟೇಶನ್, ಪೊಲೀಸ್ ಸಿಬ್ಬಂದಿ, ಪೊಲೀಸ್ ನಾಯಿಯನ್ನು ಬಾಡಿಗೆಗೆ ನೇಮಿಸಿಕೊಳ್ಳಬಹುದು!

ಇಂದಿನ ಕಾಲದಲ್ಲಿ ದುಡ್ಡಿದ್ದರೆ ಎಲ್ಲವೂ ಸಾಧ್ಯ ಎಂಬುದೊಂದು ಮಾತಿದೆ. ಅದಕ್ಕೆ ತಕ್ಕಂತೆ ಕೇರಳದಲ್ಲಿ ರೂ 34,000 ಕ್ಕೆ ನೀವು ಆರಕ್ಷಕ ಠಾಣೆ (Police), ಪೊಲೀಸ್ ನಾಯಿ, ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಬಹುದಾಗಿದೆ. ದಿನಕ್ಕೆ ರೂ 34,000 ಖರ್ಚು ಮಾಡಿದರೆ ಸಾಕು ನಿಮ್ಮನ್ನು ಕಾಯಲು ವಾಕಿ ಟಾಕಿ ಹಿಡಿದ ಪೊಲೀಸ್ (Police) ಸಿಬ್ಬಂದಿ, ಪೊಲೀಸ್ ನಾಯಿ ಸಿದ್ಧವಾಗಿರುತ್ತಾರೆ. ಈ ಮಾತು ಆಶ್ಚರ್ಯವಾದರೂ ಸತ್ಯವಾಗಿದೆ. ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಪೊಲೀಸ್ ನಾಯಿ (Police Dog), ವಾಕಿ ಟಾಕಿ ಹೀಗೆ ಪ್ರತಿಯೊಂದ ದರವನ್ನು ಮೊದಲೇ ನಿಶ್ಚಯಿಸಲಾಗಿರುತ್ತದೆ.

ಕೇರಳದಲ್ಲಿ ಈ ಯೋಜನೆ ಅತ್ಯಂತ ಪ್ರಚಲಿತದಲ್ಲಿದ್ದು ಇದೀಗ ಕಾರ್ಯರೂಪಕ್ಕೆ ತಂದಿರುವ ಯೋಜನೆ ಏನಲ್ಲ. ಅತ್ಯಂತ ಹಳೆಯ ಪದ್ಧತಿಯಾಗಿದ್ದು ಆರ್ಥಿಕತೆಗೂ ಈ ಯೋಜನೆ ದಾರಿ ಮಾಡಿಕೊಟ್ಟಿದೆ ಎಂದರೆ ತಪ್ಪಿಲ್ಲ.


ಕೇರಳದ ಸರಕಾರದ ಆದೇಶದ ರೇಟ್‌ ಕಾರ್ಡ್ ಪ್ರಕಾರ ದಿನವೊಂದಕ್ಕೆ ಒಬ್ಬ ತರಬೇತಿ ಪಡೆದ ಪೊಲೀಸ್ ಅಧಿಕಾರಿಯನ್ನು ನಿಯೋಜಿಸುವುದು ರೂ 3035 ರಿಂದ ರೂ 3,340 ವೆಚ್ಚವಾಗುತ್ತದೆ.

ನೀವು ಆರ್ಥಿಕವಾಗಿ ಇನ್ನಷ್ಟು ಕಡಿಮೆ ವೆಚ್ಚದ ಯೋಜನೆಯನ್ನು ಆಯ್ದುಕೊಳ್ಳುತ್ತೀರಿ ಎಂದಾದರೆ ಸಿವಿಲ್ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲು ದಿನವೊಂದಕ್ಕೆ ರೂ 610 ಖರ್ಚುಮಾಡಬೇಕು.

ಎಲ್ಲವೂ ನಿರ್ದಿಷ್ಟ ದರದಲ್ಲಿ ಲಭ್ಯ
ಪೊಲೀಸ್ ನಾಯಿಯ ದರ ದಿನಕ್ಕೆ ರೂ 7,280 ಅಂತೆಯೇ ವೈರ್‌ಲೆಸ್ ಪರಿಕರವನ್ನು ಬಾಡಿಗೆಗೆ ದಿನವೊಂದಕ್ಕೆ ರೂ 12,310 ಕ್ಕೆ ನಿಯೋಜಿಸಬಹುದು. ದಿನದ ಬಾಡಿಗೆಯಲ್ಲಿ ರೂ 12,000 ಕ್ಕೆ ಪೊಲೀಸ್ ಸ್ಟೇಶನ್ ಅನ್ನು ಬಾಡಿಗೆಗೆ ಪಡೆದುಕೊಳ್ಳಬಹುದು.

ಹೆಚ್ಚುವರಿ ಭದ್ರತೆಯ ಸೇವೆ
ಪೊಲೀಸ್ ನಾಯಿಯನ್ನು ನಿಯೋಜಿಸಲು ಏಕಿಷ್ಟು ಹೆಚ್ಚಿನ ವೆಚ್ಚ ಎಂಬುದಕ್ಕೆ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ. ಆದರೆ ಹೀಗೆ ನಿಯೋಜನೆ ಮಾಡಿಕೊಳ್ಳುವವರು ಯಾರು ಎಂಬುದಕ್ಕೆ ಉತ್ತರ ನೀಡುವ ಸರಕಾರ, ಖಾಸಗಿ ಪಾರ್ಟಿಗಳು, ಮನೋರಂಜನಾ ಸ್ಥಳಗಳು, ಫಿಲ್ಮ್ ಶೂಟಿಂಗ್‌ಗಳಲ್ಲಿ ಇಂತಹ ಪೊಲೀಸ್ ನಾಯಿಗಳ ಸೇವೆ ಅಗತ್ಯವಿರುತ್ತದೆ ಎಂದಾಗಿದೆ.

ಅಧಿಕಾರಿಗಳ ಅಸಮಾಧಾನ
ಕೆಲವೊಂದು ಪೊಲೀಸ್ ಅಧಿಕಾರಿಗಳು ಸರಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಿನಿಮಾ ಚಿತ್ರೀಕರಣ ಹಾಗೂ ಖಾಸಗಿ ಪಾರ್ಟಿಗಳು ನಡೆಯುವ ಸ್ಥಳಗಳಲ್ಲಿ ಪೊಲೀಸ್ ಅಧಿಕಾರಿಗಳ ಅಗತ್ಯವಿರುವುದಿಲ್ಲ.

ಏಕೆಂದರೆ ಇಂತಹ ಭರ್ಜರಿ ಪಾರ್ಟಿಗಳಲ್ಲಿ ಹೆಚ್ಚುವರಿ ಬಂದೋಬಸ್ತನ್ನು ನಡೆಸಲಾಗುತ್ತದೆ ಹಾಗಾಗಿ ಈ ಯೋಜನೆ ವಿಫಲವಾಗುವುದು ಖಂಡಿತ ಎಂದು ತಿಳಿಸುತ್ತಾರೆ.

ಫಿಲ್ಮ್ ಇಂಡಸ್ಟ್ರಿಗೆ ಈ ಸೇವೆಯ ಅಗತ್ಯವಿಲ್ಲ
ಸಾರ್ವಜನಿಕ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡುವ ಸಂದರ್ಭಗಳಲ್ಲಿ ಮಾತ್ರವೇ ಪೊಲೀಸರ ಅನುಮತಿಯನ್ನು ತೆಗೆದುಕೊಳ್ಳುವುದಾಗಿ ಫಿಲ್ಡ್ ಇಂಡಸ್ಟ್ರಿ ತಿಳಿಸಿದೆ. ಪೊಲೀಸ್‌ಗೆ ಸಂಬಂಧಿಸಿದ ಎಲ್ಲಾ ಪರಿಕರಗಳು ವ್ಯವಸ್ಥೆಗಳು ಇಂಡಸ್ಟ್ರಿಯಲ್ಲಿಯೇ ಲಭ್ಯವಿವೆ ಎಂದು ಇಂಡಸ್ಟ್ರಿ ತಿಳಿಸಿದೆ.

ಪೊಲೀಸ್ ಅಧಿಕಾರಿಗಳನ್ನು ಈ ರೀತಿ ಬಳಸಿಕೊಳ್ಳುವುದು ತಪ್ಪು
ಕಳೆದ ವರ್ಷ ಕಣ್ಣೂರಿನ ಪನೂರ್ ಎಂಬ ಸ್ಥಳದಲ್ಲಿ ನಡೆದ ವಾಣಿಜ್ಯೋದ್ಯಮಿಯೊಬ್ಬರ ಮಗಳ ವಿವಾಹಕ್ಕೆ ನಾಲ್ಕು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇದು ಪ್ರಮುಖ ವಿವಾದಗಳಿಗೆ ಕೂಡ ಕಾರಣವಾಗಿತ್ತು.

ಆಫೀಸರ್ಸ್ ಅಸೋಸಿಯೇಶನ್ ಈ ಸಮಸ್ಯೆಯನ್ನು ಮತ್ತಷ್ಟು ಚರ್ಚಾಸ್ಪದಗೊಳಿಸಿತು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಯಾಗಲೀ ಅಥವಾ ಯಾವುದೇ ವ್ಯವಸ್ಥೆಗಳನ್ನಾಗಲೀ ಯಾವುದೇ ಪ್ರದರ್ಶನಕ್ಕೆ, ಸಮಾರಂಭಕ್ಕೆ ಬಳಸಬಾರದು ಎಂದು ತಿಳಿಸಿತು.


ಸಮಾರಂಭಕ್ಕೆ ಕಟ್ಟುನಿಟ್ಟಿನ ಭದ್ರತೆ
ಅಸೋಸಿಯೇಶನ್ ಜನರಲ್ ಸೆಕ್ರೇಟರಿ ಸಿ ಆರ್ ಬಿಜು ಮಾತನಾಡಿ ಸರಕಾರದ ಆದೇಶದಲ್ಲಿ ಮಾನ್ಯವಾದ ನಿಯಮಗಳಿದ್ದು ಅದನ್ನು ಖುದ್ದಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ಎಸ್‌ಓಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಅನುಸರಿಸದೇ ಇದ್ದರೂ ನೀವು ವಿವಾಹ ಸಮಾರಂಭಗಳಲ್ಲಿ ಅತಿಥಿಗಳ ಮೇಲೆ ಕಣ್ಣಿಡುವ ಹಾಗೂ ಬಿಗಿ ಬಂದೋಬಸ್ತನ್ನು ಒದಗಿಸುವ ಪೊಲೀಸರು, ಪೊಲೀಸ್ ನಾಯಿ ಹಾಗೂ ಆರಕ್ಷಕ ಠಾಣೆಯನ್ನು ಬಾಡಿಗೆಗೆ ಪಡೆದುಕೊಳ್ಳಬಹುದಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist