ಸುಶ್ಮಿತಾ ಸೇನ್, ಐಶ್ವರ್ಯ ರೈರಂಥ ಖ್ಯಾತ ಮಾಡೆಲ್ ಗಳಿಗೆ ಸೌಂದರ್ಯ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ನೀಡಿ ಮೊದಲ ರನ್ನರ್ ಅಪ್ ಆಗಿದ್ದ ಖ್ಯಾತ ಮಾಡೆಲ್ (model), ನಟಿ ಬರ್ಖಾ ಮದನ್ (Barkha Madan) ಸನ್ಯಾಸಿನಿಯಾಗಿದ್ದಾರೆ (Nun). 1994ರಲ್ಲಿ ನಡೆದ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಬರ್ಖಾ ಫೈನಲಿಸ್ಟ್ ಆಗಿದ್ದವರು
Barkha Madan :ನಟಿ ಐಶ್ವರ್ಯ ರೈ ಹಾಗೂ ಖ್ಯಾತ ಮಾಡೆಲ್ ಗಳಿಗೆ ಪೈಪೋಟಿ ಕೊಟ್ಟಿದ್ದ ನಟಿ ಬರ್ಖಾ ಮದನ್ ಇಂದು ಸನ್ಯಾಸಿನಿ...!
Twitter
Facebook
LinkedIn
WhatsApp
ಖಿಲಾಡಿ ಕಾ ಕಿಲಾಡಿ ಸಿನಿಮಾದ ಮೂಲಕ ಬಾಲಿವುಡ್ ಅನ್ನು ಪ್ರವೇಶ ಮಾಡಿದ್ದ ಇವರು, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಮಾಡೆಲಿಂಗ್ ಮತ್ತು ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳ ಕಾಲ ಸಕ್ರೀಯರಾಗಿದ್ದವರು ನಂತರ ಬಣ್ಣದ ಲೋಕದಿಂದ ದೂರವಾದರು. ಇದೀಗ ಸನ್ಯಾಸಿನಿಯಾಗಿ ಬದಲಾಗಿದ್ದಾರೆ.
ದಲೈ ಲಾಮಾ ಅವರ ಅನುನಾಯಿ ಆಗಿದ್ದ ಬರ್ಖಾ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆಧ್ಯಾತ್ಮಿಕ ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದರು. ಕಾಡು ಮೇಡು ಗುಡ್ಡ ಬೆಟ್ಟಗಳ ಸಂಗ ಮಾಡಿದ್ದರು. ಇದೀಗ ಸನ್ಯಾಸಿನಿಯಾಗಿ ಪರ್ವತಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುತ್ತಾರೆ ಅವರನ್ನು ಬಲ್ಲವರು.